ಶುಕ್ರವಾರ, ಮೇ 7, 2021
20 °C

ಪಾಂಬೂರು ಹೊಳೆಯಲ್ಲಿ ಈಜಲು ಹೋಗಿದ್ದ ಮೂವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರ್ವ (ಉಡುಪಿ): ಮೂಡುಬೆಳ್ಳೆಯ ಪಾಂಬೂರು ಕಬೇಡಿ ಬಳಿಯ ಪಾಬೂರು ಹೊಳೆಯಲ್ಲಿ ಈಜಲು ತೆರಳಿದ್ದ ಮೂವರು ಯುವಕರು ಭಾನುವಾರ ಮೃತಪಟ್ಟಿದ್ದಾರೆ.

ಕಟಪಾಡಿ ಸಮೀಪದ ಶಂಕರಪುರದ ಕೆಲ್ವಿನ್ ಕೆಸ್ತಲಿನೊ (21), ಮೂಡುಬೆಟ್ಟು ಸರ್ಕಾರಿ ಗುಡ್ಡೆಯ ಜಾಬೀರ್ (18) ಹಾಗೂ ರಿಜ್ವಾನ್ (28) ಮೃತರು.

ಕರ್ಫ್ಯೂ ಇದ್ದಿದ್ದರಿಂದ ಸಮಯ ಕಳೆಯಲು ನದಿಗೆ ಈಜಲು ಹೋಗಿದ್ದಾಗ ದುರ್ಘಟನೆ ಸಂಭವಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಯುವಕರ ಶವಗಳನ್ನು ಹೊರ ತೆಗೆದಿದ್ದಾರೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು