ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂರು ಶಾಲಾ ತಂಡಗಳಿಗೆ ಥ್ರೋಬಾಲ್ ಪ್ರಶಸ್ತಿ

Last Updated 24 ಸೆಪ್ಟೆಂಬರ್ 2022, 5:06 IST
ಅಕ್ಷರ ಗಾತ್ರ

ಕುಂದಾಪುರ: ಆಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ಮತ್ತು ಬಾಲಕರ ತಂಡಗಳು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ನಡೆದ ಜಿಲ್ಲಾ ಮಟ್ಟದ ಥ್ರೋಬಾಲ್ ಟೂರ್ನಿಯಲ್ಲಿ ಕ್ರಮವಾಗಿ ಚಾಂಪಿಯನ್ ಪಟ್ಟ ಮತ್ತು ರನ್ನರ್ ಅಪ್ ಸ್ಥಾನವನ್ನು ಗಳಿಸಿಕೊಂಡಿವೆ. ಸಾಧನೆ ಮಾಡಿದ ಎರಡೂ ತಂಡಗಳು ವಿಭಾಗ ಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿವೆ.

ಬಾಲಕಿಯರ ತಂಡದಲ್ಲಿ ಅನನ್ಯ (ನಾಯಕಿ) ಸಾಕ್ಷಿ, ಮಾನಸ, ಭಾಗ್ಯಶ್ರೀ, ಲೇಖನ, ಮಲ್ಲಿಕಾ, ಅಂಕಿತಾ, ಶಿಲ್ಪಾ, ಸಿಂಚನಾ ಶೆಟ್ಟಿ, ಪ್ರೀತಿ, ನಿಶ್ಮಿತಾ ಮತ್ತು ರಾಶ್ವಿ ಇದ್ದರು.ರನ್ನರ್ ಅಪ್ ಆದ ಬಾಲಕರ ತಂಡದಲ್ಲಿ ಪ್ರೀತಂ (ನಾಯಕ) ಭುವನ್ ಬಿ, ಭುವನ್ ಎಸ್, ರೋಹನ್, ಸ್ವಸ್ತಿಕ್, ನೀರಜ್, ನಿತೇಶ್, ಯತೀಶ, ಸ್ಕಂದ, ಚೇತನ, ಶಿವಮಣಿ, ಲಿಖಿತ್ ಇದ್ದರು. ಇದರಲ್ಲಿ ಚೇತನ, ನಿತೇಶ ಜನಾರ್ದನ ಪೂಜಾರಿ ಹಾಗೂ ಪ್ರೀತಂ ಇದ್ದರು.

ಪ್ರಶಸ್ತಿಗಳೊಂದಿಗೆ ಮರಳಿದ ತಂಡಗಳನ್ನು ಆಲೂರಿನಲ್ಲಿ ಸ್ವಾಗತಿಸಿ ಮೆರವಣಿಗೆ ಮಾಡಲಾಯಿತು. ದೈಹಿಕ ಶಿಕ್ಷಣ ಶಿಕ್ಷಕ ವೀರೇಂದ್ರ ಜೋಗಿ, ವ್ಯವಸ್ಥಾಪಕ ದಿನಕರ ದೇವಾಡಿಗ, ನಾಗರತ್ನ ಹೇರ್ಳೆ, ಮುಖ್ಯ ಶಿಕ್ಷಕ ಶಶಿಧರ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ದತ್ತಾತ್ರೇಯ ಭಟ್, ಶಾಲೆ ದತ್ತು ಸ್ವೀಕರಿಸಿರುವ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಇದ್ದರು.

ಈ ಶಾಲೆಯ ವಿದ್ಯಾರ್ಥಿಗಳು 5 ವರ್ಷಗಳಿಂದ ಥ್ರೋಬಾಲ್‌ನಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ 2 ಬಾರಿ ಚಾಂಪಿ
ಯನ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT