ಉಡುಪಿ: ನಾಗರಿಕರ ಹಿತರಕ್ಷಣಾ ವೇದಿಕೆ ಕೊಂಡಕೂರು ಸಂಸ್ಥೆಯಿಂದ ನ.11ರಂದು ಮಧ್ಯಾಹ್ನ 12.30ಕ್ಕೆ ಸಾಯಿಬಾಬಾ ಮಂದಿರದ ವಠಾರದಲ್ಲಿ ತುಳು ಅಪ್ಪೆ ಭಾವಚಿತ್ರ ಅನಾವರಣ ಕಾರ್ಯಕ್ರಮ ನಡೆಯಲಿದೆ ಎಂದು ವೇದಿಕೆ ಅಧ್ಯಕ್ಷರಾದ ರಘುನಾಥ ಮಾಬಿಯಾನ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಸತತ ಪರಿಶ್ರಮದಿಂದ ‘ತುಳು ಅಪ್ಪೆ’ ಭಾವಚಿತ್ರ ಸಿದ್ಧಪಡಿಸಲಾಗಿದ್ದು, ಸುಂದರವಾಗಿ ಮೂಡಿಬಂದಿದೆ. ಹಿಂದೆ, ನಾಗರಿಕರ ಹಿತರಕ್ಷಣಾ ವೇದಿಕೆಯಿಂದ ಬಿಡುಗಡೆಮಾಡಿದ ಕೋಟಿ ಚೆನ್ನಯ್ಯರ ಭಾವಚಿತ್ರವನ್ನು ತುಳುವರು ಬಹಳ ಇಷ್ಟಪಟ್ಟಿದ್ದರು ಎಂದರು.

ಕಾರ್ಯಕ್ರಮ ನಡೆಯುವ ದಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬನ್ನಂಜೆ ಬಾಬು ಅಮೀನ್ ಅವರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಮಹೇಶ್ ಸುವರ್ಣ, ಧೀರಜ್, ಪಿ.ಎನ್.ಆಚಾರ್ಯ, ಅಶೋಕ್ ಪೂಜಾರಿ, ಮಹಾಬಲ ಅಮೀನ್, ರಾಮಚಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.