ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರಾವಿಡ ಭಾಷೆಗಳಲ್ಲೇ ತುಳು ಸಾಹಿತ್ಯ ಸಮೃದ್ಧ: ಸುಲೋಚನಾ ಪಚ್ಚಿನಡ್ಕ

Published 15 ನವೆಂಬರ್ 2023, 14:31 IST
Last Updated 15 ನವೆಂಬರ್ 2023, 14:31 IST
ಅಕ್ಷರ ಗಾತ್ರ

ಕಾರ್ಕಳ: ಪ್ರಾಚೀನತಮ ಹಾಗೂ ದ್ರಾವಿಡ ಭಾಷೆಗಳಲ್ಲೇ ತುಳು ಸಾಹಿತ್ಯ ಅತ್ಯಂತ ಸಮೃದ್ಧ ಎಂದು ಕನ್ನಡ ಉಪನ್ಯಾಸಕಿ ಸುಲೋಚನಾ ಪಚ್ಚಿನಡ್ಕ ಹೇಳಿದರು.

ಇಲ್ಲಿನ ಭುವನೇಂದ್ರ ಕಾಲೇಜಿನ ಸಾಹಿತ್ಯ ಸಂಘದ ಸಾಹಿತ್ಯ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಆಧುನಿಕ ತುಳು ಸಾಹಿತ್ಯ’ ಎಂಬ ವಿಷಯದ ಬಗ್ಗೆ ಅವರು ಮಾತನಾಡಿ, ತುಳುವಿನಲ್ಲಿ ತಾಡವೋಲೆಗಳಲ್ಲಿ ಸಿಗುವ ಪಳಂತುಳು ಕಾವ್ಯಗಳಿವೆ. ಆಧುನಿಕ ಭಾಷೆಯಲ್ಲಿ ಮಂದಾರ ರಾಮಾಯಣದಂತಹ ಮೇರು ಕೃತಿಗಳು ಸಿಗುತ್ತವೆ. ಎಸ್.ಯು. ಪಣಿಯಾಡಿಯವರ ಮೂಲಕ ತುಳು ಚಳುವಳಿಯೂ ನಡೆಯಿತು. ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿ ಕನ್ನಡ ಲಿಪಿ ಬಳಸಿಕೊಂಡು ತುಳು ಸಾಹಿತ್ಯ ಸಮೃದ್ಧವಾಗಿ ಬೆಳೆದುನಿಂತಿದೆ ಎಂದರು.

ವಿದ್ಯಾರ್ಥಿನಿ ಅನುಷಾ ಅವರು ಸಾ.ರಾ. ಅಬೂಬಕ್ಕರ್ ಅವರ ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿ ಕುರಿತು ಉಪನ್ಯಾಸ ನೀಡಿದರು. ಸುವರ್ಣ ಪ್ರಭು ತುಳು ಗೀತೆ ಹಾಡಿದರು. ಸುವರ್ಣ ಕರ್ನಾಟಕ ವರ್ಷಾಚರಣೆ ಪ್ರಯುಕ್ತ ಕೀರ್ತಿ ಮತ್ತು ಬಳಗದವರು ಕನ್ನಡ ಗೀತೆ ಹಾಡಿದರು. ರಾಲ್ಫ್ ಡಿಸೋಜ ಅವರು ಗೀತಚಿತ್ರ ಬಿಡಿಸಿದರು.

ಪ್ರಾಚಾರ್ಯ ಮಂಜುನಾಥ್ ಎ.ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ ಮಾರ್ಪಳ್ಳಿ, ಸಾಹಿತ್ಯ ಸಂಘದ ಸಂಯೋಜಕ ಹಾಗೂ ಕನ್ನಡ ವಿಭಾಗ ಮುಖ್ಯಸ್ಥ ಡಾ. ಅರುಣಕುಮಾರ ಎಸ್.ಆರ್, ವಿದ್ಯಾರ್ಥಿ ಕಾರ್ಯದರ್ಶಿಗಳಾದ ಶ್ರೀನಿಧಿ ಶೆಟ್ಟಿ, ಪ್ರಮೋದಿನಿ ಇದ್ದರು. ಶ್ವೇತಾ ಸ್ವಾಗತಿಸಿದರು. ಅಶ್ವಿತಾ ವಂದಿಸಿದರು. ನಂದನ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT