ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಂತರಿಗೆ ಹುಟ್ಟೂರ ಕಾಳಜಿ ಅಪಾರ

ಸಾಲಿಗ್ರಾಮ ಶಿವರಾಮ ಕಾರಂತ ಸ್ಮೃತಿ ದಿನಾಚರಣೆಯಲ್ಲಿ ಚಂದ್ರಶೇಖರ ನಾವಡ
Last Updated 13 ಡಿಸೆಂಬರ್ 2022, 5:24 IST
ಅಕ್ಷರ ಗಾತ್ರ

ಬ್ರಹ್ಮಾವರ: ಕಾರಂತರಿಗೆ ಹುಟ್ಟೂರ ಬಗ್ಗೆ ಅಪಾರವಾದ ಕಾಳಜಿ ಕಲ್ಪನೆ ಇದ್ದವು. ಹೀಗಾಗಿ, ಕರಾವಳಿಯ ಕಡಲ ತಡಿಯಲ್ಲಿ ವಾಸಿಸುವವರ ಬಗ್ಗೆ ಕಡಲ್ಕೊರೆತದ ಬಗ್ಗೆ ಆಗಾಗ ಧ್ವನಿ ಎತ್ತುತ್ತಿದ್ದರು ಎಂದು ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಕೋಡಿ ಚಂದ್ರಶೇಖರ ನಾವಡ ಹೇಳಿದರು.

ಸಾಲಿಗ್ರಾಮದ ಕಾರಂತ ರಂಗ ರಥದಲ್ಲಿ ಡಾ.ಕೋಟ ಶಿವರಾಮ ಕಾರಂತ ರಿಸರ್ಚ್ ಸ್ಟಡಿ ಸೆಂಟರ್ ಟ್ರಸ್ಟ್‌ ಮತ್ತು ಕಾರ್ಕಡ ಗೆಳೆಯರ ಬಳಗದ ಆಶ್ರಯದಲ್ಲಿ ನಡೆದ ಕಾರಂತರ 25ನೇ ಸ್ಮೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪರಿಸರ ಪ್ರೇಮಿಯಾಗಿ, ಸಮಾಜದ ಕುಂದು ಕೊರತೆಗಳ ಬಗ್ಗೆ ಸರ್ಕಾರದ ಕದ ತಟ್ಟುತ್ತಿದ್ದರು. ಆಂಗ್ಲ ಮಾಧ್ಯಮ ಶಿಕ್ಷಣದ ವಿರುದ್ಧವೂ ಧ್ವನಿ ಎತ್ತಿದ್ದರು ಎಂದು ಹೇಳಿದ ಅವರು, ಕಡಲ ಕಿನಾರೆಯ ಸ್ಥಳವನ್ನು ವಿಶ್ರಾಂತಿಗಾಗಿ ಆಯ್ಕೆ ಮಾಡಿಕೊಂಡು ಸಮಾಜದ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಒಲವು ತೋರಿದ್ದರು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಕಾರಂತರು ಒಬ್ಬ ವ್ಯಕ್ತಿಯಾಗಿರದೆ ಬಹುದೊಡ್ಡ ಶಕ್ತಿಯಾಗಿದ್ದರು ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಘ ಚಾಲಕ ನಾರಾಯಣ ಶೆಣೈ ಪುಷ್ಪ ನಮನ ಸಲ್ಲಿಸಿದರು.

ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಕಾರಂತ ವಿಶ್ವಸ್ಥ ಮಂಡಳಿಯ ಸದಸ್ಯ ಗುಜ್ಜಾಡಿ ಪ್ರಭಾಕರ ನಾಯಕ್‌, ಸದಸ್ಯರಾದ ಪಂಜು ಪೂಜಾರಿ, ಸಂದೀಪ್‌ ಶೆಟ್ಟಿ, ವಿಶ್ವನಾಥ ಕಾಮತ್‌ ಇದ್ದರು.

ಕಾರಂತ ವಿಚಾರಧಾರೆಯ ಕುರಿತು ಕೋಡಿ ಸೋಮಬಂಗೇರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರಂತ ರಿಸರ್ಚ್ ಸ್ಟಡಿ ಸೆಂಟರ್ ಟ್ರಸ್ಟ್‌ನ ಅಧ್ಯಕ್ಷ ಗುರುರಾಜ್ ರಾವ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT