ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 8 ವಿಧಾನಸಭಾ ಕ್ಷೇತ್ರಗಳಲ್ಲೂ BJP ಮುನ್ನಡೆ

ಭರ್ಜರಿ ಮತ ಫಸಲು ಪಡೆದ ಕೋಟ ಶ್ರೀನಿವಾಸ ಪೂಜಾರಿ: ಕುಂದಾಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮತ
Published 4 ಜೂನ್ 2024, 15:53 IST
Last Updated 4 ಜೂನ್ 2024, 15:53 IST
ಅಕ್ಷರ ಗಾತ್ರ

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ಕುಂದಾಪುರ, ಉಡುಪಿ, ಕಾಪು, ಕಾರ್ಕಳ, ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರಿಕೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಭರ್ಜರಿ ‘ಮತ ಫಸಲು’ ಪಡೆದಿದ್ದಾರೆ.

ಉಭಯ ಜಿಲ್ಲೆಗಳ 8 ವಿಧಾನಸಭಾ ಕ್ಷೇತ್ರಗಳಲ್ಲೂ ಕೋಟ ಶ್ರೀನಿವಾಸ ಪೂಜಾರಿ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಕೆ.ಜಯಪ್ರಕಾಶ್ ಹೆಗ್ಡೆ ಅವರಿಗಿಂತಲೂ ಹೆಚ್ಚು ಮತ ಗಳಿಸಿದ್ದಾರೆ.

ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚಲಾವಣೆಯಾದ 1,66,034 ಮತಗಳ ಪೈಕಿ ಕೋಟ ಬರೋಬ್ಬರಿ 1,07,173 ಮತಗಳನ್ನು ಪಡೆದರೆ, ಜಯಪ್ರಕಾಶ್ ಹೆಗ್ಡೆ ಪಡೆದಿರುವುದು 57,078 ಮತಗಳು ಮಾತ್ರ.

ಹಾಗೆಯೇ ಉಡುಪಿ ವಿಧಾನಸಭಾ ಕ್ಷೇತ್ರದ 1,70,479 ಮತಗಳ ಪೈಕಿ ಕೋಟ ಪಾಲಿಗೆ 1,06,489 ಮತಗಳು ದಕ್ಕಿದರೆ, ಜಯಪ್ರಕಾಶ್ ಹೆಗ್ಡೆ ಅವರಿಗೆ 62,748 ಮತಗಳು ಮಾತ್ರ ದೊರೆತಿವೆ.

ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಚಲಾವಣೆಯಾದ 1,50,964 ಮತಗಳಲ್ಲಿ 91,077 ಮತಗಳು ಬಿಜೆಪಿ ಪಾಲಾಗಿದ್ದರೆ, 58,947 ಮತಗಳು ಕಾಂಗ್ರೆಸ್‌ಗೆ ಸಿಕ್ಕಿವೆ. ಕಾರ್ಕಳ ವಿಧಾನಸಭಾ ಕ್ಷೇತ್ರದ 1,51,374 ಮತಗಳ ಪೈಕಿ ಕೋಟಗೆ 95,925 ಮತಗಳು ದೊರೆತೆರೆ, ಜಯಪ್ರಕಾಶ್ ಹೆಗ್ಡೆಗೆ 54,178 ವೋಟ್‌ ಬಿದ್ದಿವೆ.

ಶೃಂಗೇರಿಯಲ್ಲಿ ಕೋಟಾಗೆ 79,175, ಜಯಪ್ರಕಾಶ್ ಹೆಗ್ಡೆಗೆ 53,937, ಮೂಡಿಗೆರೆ ಕ್ಷೇತ್ರದಲ್ಲಿ ಕೋಟ 74,597, ಜಯಪ್ರಕಾಶ್ ಹೆಗ್ಡೆ 54,572, ಚಿಕ್ಕಮಗಳೂರು ಕ್ಷೇತ್ರದಲ್ಲಿ ಕ್ರಮವಾಗಿ 92,788, 68,995, ತರಿಕೆರೆ ಕ್ಷೇತ್ರದಲ್ಲಿ 80,995, 60314 ಮತಗಳು ದೊರೆತಿವೆ. 

ಕುಂದಾಪುರದಲ್ಲಿ ಅತಿ ಹೆಚ್ಚು: ಜಯಪ್ರಕಾಶ್ ಹೆಗ್ಡೆ ಅವರ ತವರು ನೆಲ ಕುಂದಾಪುರ ತಾಲ್ಲೂಕಿನಲ್ಲಿಯೇ ಕೋಟ ಶ್ರೀನಿವಾಸ ಪೂಜಾರಿ ಅತಿ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗಿಂತಲೂ 50,095 ಹೆಚ್ಚು ಮತಗಳನ್ನು ಬಿಜೆಪಿ ಪಡೆದಿರುವುದು ವಿಶೇಷ.

ಅಂಚೆ ಮತಗಳಲ್ಲೂ ಬಿಜೆಪಿ ಮುಂದು: ಚಲಾವಣೆಯಾದ 6,445 ಅಂಚೆ ಮತಗಳ ಪೈಕಿ ಕೋಟ ಶ್ರೀನಿವಾಸ ಪೂಜಾರಿ 4,015 ಮತಗಳನ್ನು ಪಡೆದರೆ, ಜಯಪ್ರಕಾಶ್ ಹೆಗ್ಡೆ 2,290 ಮತಗಳನ್ನು ಪಡೆದಿದ್ದು ಅಂಚೆ ಮತಗಳಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ.

ಎಲ್ಲ ಸುತ್ತುಗಳಲ್ಲೂ ಪ್ರಾಬಲ್ಯ: 19 ಸುತ್ತುಗಳಲ್ಲಿ ನಡೆದ ಮತ ಎಣಿಕೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಎಲ್ಲ ಸುತ್ತುಗಳಲ್ಲೂ ಮುನ್ನಡೆ ಕಾಯ್ದುಕೊಂಡಿದ್ದು ವಿಶೇಷವಾಗಿತ್ತು. ಮೊದಲ ಸುತ್ತಿನಲ್ಲೇ 14,453 ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡ ಕೋಟ ಮತ್ತೆ ಹಿಂದಿರುಗಿ ನೋಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT