ಮೈನಾ ನೀರು ಕೋಳಿ ಕಾಜಾಣ ಕೊಳ ಬಕ ಮೊದಲಾದ ಹಕ್ಕಿಗಳು ಸಾಮಾನ್ಯವಾಗಿ ಮನೆ ಪರಿಸರಕ್ಕೆ ಬರುತ್ತವೆ. ಅವುಗಳ ನೀರಡಿಕೆ ನೀಗಿಸಲು ಸಣ್ಣ ಮಣ್ಣಿನ ಬಟ್ಟಲಾಕಾರದ ಪಾತ್ರಗಳಲ್ಲಿ ನೀರಿಟ್ಟರೆ ಉತ್ತಮ. ಉಪಯೋಗ ಶೂನ್ಯವಾದ ಅರೆಯುವ ಕಲ್ಲಿನಲ್ಲೂ ನೀರಿಡಬಹುದು
ವಿ. ಲಕ್ಷ್ಮಿನಾರಾಯಣ ಉಪಾಧ್ಯ ಪಕ್ಷಿತಜ್ಞ
ನೀರು ಕುಡಿಯುತ್ತಿರುವ ಹಕ್ಕಿ
ಬೇಸಿಗೆಯಲ್ಲಿ ಹಕ್ಕಿಗಳಿಗೆ ನೀರಿಡುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ. ನೀರು ಇಡುವವರು ಬೆಕ್ಕು ನಾಯಿಗಳಿಗೆ ಎಟಕುವ ಜಾಗದಲ್ಲಿ ಇಡಬಾರದು. ಅವುಗಳು ಹಕ್ಕಿಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ
ತೇಜಸ್ವಿ ಎಸ್. ಆಚಾರ್ಯ ಟ್ರಸ್ಟಿ ಮಣಿಪಾಲ ಬರ್ಡಿಂಗ್ ಆ್ಯಂಡ್ ಕನ್ಸರ್ವೇಶನ್ ಟ್ರಸ್ಟ್