ಶಿರ್ವ: ಉಡುಪಿಯ ಮೂಡುಬೆಳ್ಳೆ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು, ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆ ಬದಿಯ ಮನೆಯೊಳಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ನೀರು ಹರಿದು ಹೋಗದೆ ಕೃತಕ ನೆರೆಹಾವಳಿ ಉಂಟಾಗಿದೆ. ಹೆದ್ದಾರಿ ಪಕ್ಕದ ಮನೆಯಂಗಳ, ಸುತ್ತಮುತ್ತಲಿನಲ್ಲಿ ಜಲಾವೃತ್ತಗೊಂಡಿರುವುದರಿಂದ ಸ್ಥಳೀಯರು ಸೇರಿಕೊಂಡು ಜೆಸಿಬಿಯ ಮೂಲಕ ತೋಡು ಅಗೆದು ನೀರು ಹರಿದು ಹೋಗಲು ವ್ಯವಸ್ಥೆಯನ್ನು ಮಾಡಿದರು. ಸೂಕ್ತ ಚರಂಡಿಯನ್ನೇ ನಿರ್ಮಿಸದೆ ಹೆದ್ದಾರಿಯ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.