ಉಡುಪಿ: ನಗರವಾಸಿಗಳ ನೀರಿನ ಬವಣೆ ನೀಗಿಸಲು ವಾರಾಹಿ ನೀರು ಸರಬರಾಜಾಗುತ್ತಿದ್ದರೂ, ಈ ಯೋಜನೆ ಅಡಿಯಲ್ಲಿ ದಿನದ 24 ಗಂಟೆಯೂ ನೀರು ಪೂರೈಸುವ ಭರವಸೆ ಇನ್ನೂ ಈಡೇರಿಲ್ಲ.

ನಗರಸಭೆಯ ವ್ಯಾಪ್ತಿಯಲ್ಲಿ ನೀರು ನಿರ್ವಹಣೆಯನ್ನು ವಾರಾಹಿ ಯೋಜನೆಯ ಅಧೀನದ ಸುಯೇಜ್ ಪ್ರಾಜೆಕ್ಟ್ ಸಂಸ್ಥೆಗೆ ಪ್ರಾಯೋಗಿಕವಾಗಿ ಹಸ್ತಾಂತರಿಸಿ ಹಲವು ತಿಂಗಳುಗಳು ಕಳೆದರೂ ನಗರವಾಸಿಗಳಿಗೆ 24X7 ನೀರು ಸರಬರಾಜಿನ ಸೌಲಭ್ಯ ಮರೀಚಿಕೆಯಾಗಿಯೇ ಉಳಿದಿದೆ.

ನೀರು ನಿರ್ವಹಣೆಯನ್ನು ಸುಯೇಜ್ ಪ್ರಾಜೆಕ್ಟ್ ಸಂಸ್ಥೆಗೆ ನೀಡಿದ ಬಳಿಕ ಕೆಲವು ಕಡೆ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ ಎಂಬ ದೂರುಗಳು ಈ ಹಿಂದೆ ಜನರಿಂದ ಕೇಳಿ ಬಂದಿದ್ದವು. ನೀರು ಪೂರೈಕೆ ಮಾಡುವ ಪೈಪ್ಲೈನ್ಗಳಲ್ಲಿ ಕೆಲವೆಡೆ ಸೋರಿಕೆಯಾಗಿ ನೀರು ಪೋಲಾಗುತ್ತಿದೆ ಎಂದೂ ದೂರಿದ್ದರು. ಇದೀಗ ಮತ್ತೆ ಕೆಲವೆಡೆ ಪೈಪ್ಲೈನ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಇನ್ನೂ ಕೆಲವು ಮನೆಗಳಿಗೆ ನೀರಿನ ಪೈಲ್ಲೈನ್ ಅಳವಡಿಕೆ ಕಾಮಗಾರಿ ಬಾಕಿ ಉಳಿದಿದೆ ಎಂದೂ ಸಾರ್ವಜನಿಕರು ತಿಳಿಸಿದ್ದಾರೆ.

ನಗರಕ್ಕೆ 24 ಗಂಟೆಯೂ ನೀರು ಸರಬರಾಜು ಮಾಡುವ ಗುರಿಯನ್ನು ಹೊಂದಿರುವ ವಾರಾಹಿ ಕುಡಿಯುವ ನೀರಿನ ಯೋಜನೆಯನ್ನು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ (ಕೆಯುಐಡಿಎಫ್ಸಿ) ಅಡಿಯಲ್ಲಿ 2017ರಲ್ಲಿ ಆರಂಭಿಸಲಾಗಿತ್ತು.

ಯೋಜನೆ ಪೂರ್ಣಗೊಂಡ ಬಳಿಕ ಎಂಟು ವರ್ಷಗಳ ಕಾಲ ನಗರಸಭೆ ವ್ಯಾಪ್ತಿಯಲ್ಲಿ ನೀರಿನ ನಿರ್ವಹಣೆಯನ್ನು ವಾರಾಹಿಯವರೇ ಮಾಡಲಿದ್ದು, ಕಳೆದ ಜುಲೈ ತಿಂಗಳಲ್ಲಿ ಪ್ರಾಯೋಗಿಕವಾಗಿ ನೀರು ನಿರ್ವಹಣೆಯನ್ನು ಸುಯೇಜ್ ಪ್ರಾಜೆಕ್ಟ್ ಸಂಸ್ಥೆಗೆ ನೀಡಲಾಗಿತ್ತು.

ಮೂರು ತಿಂಗಳು ಈ ಸಂಸ್ಥೆಯು ನೀರು ನಿರ್ವಹಣೆ ಮಾಡುವುದನ್ನು ಮೇಲ್ವಿಚಾರಣೆ ಮಾಡಿ, ಸಮರ್ಪಕವಾಗಿದ್ದರೆ ಮುಂದುವರಿಸಲಾಗುವುದು ಎಂದು ಈ ಹಿಂದೆ ನಗರಸಭೆ ಅಧಿಕಾರಿಗಳು ತಿಳಿಸಿದ್ದರು.

ಆರು ತಿಂಗಳುಗಳಿಂದ ಸುಯೇಜ್ ಪ್ರಾಜೆಕ್ಟ್ ಸಂಸ್ಥೆಯು ನೀರು ನಿರ್ವಹಣೆ ಮಾಡುತ್ತಿದ್ದರೂ ಇನ್ನೂ 24 ಗಂಟೆಯೂ ನೀರಿನ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಜನರು.

ಉಡುಪಿ ನಗರದ ಕೆಲವು ಎತ್ತರದ ಪ್ರದೇಶಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ನಗರದ ಜನರಿಗೆ ದಿನದ 24 ಗಂಟೆಯೂ ನೀರು ಸರಬರಾಜು ಮಾಡುತ್ತೇವೆ ಎಂಬ ಬೇಡಿಕೆ ಇನ್ನೂ ಈಡೇರಿಲ್ಲ.
- ನಿತ್ಯಾನಂದ ಒಳಕಾಡು, ಸಾಮಾಜಿಕ ಕಾರ್ಯಕರ್ತ

‘ಪೈಪ್ಲೈನ್ ಕಾಮಗಾರಿ ಬಾಕಿ ಇದೆ’

‘ವಾರಾಹಿ ಯೋಜನೆ ಮೂಲಕ ನಗರಸಭೆ ವ್ಯಾಪ್ತಿಗೆ 24X7 ನೀರು ಒದಗಿಸುವ ಕಾರ್ಯ ಇನ್ನೂ ಆಗಿಲ್ಲ. 24X7 ನೀರು ಸರಬರಾಜು ಮಾಡಿದ ಬಳಿಕವೇ ಸುಯೇಜ್ ಪ್ರಾಜೆಕ್ಟ್ ಸಂಸ್ಥೆಗೆ ನೀರು ನಿರ್ವಹಣೆಯ ಜವಾಬ್ದಾರಿಯನ್ನು ಮುಂದುವರಿಸಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಮಹಾಂತೇಶ ಹಂಗರಗಿ ತಿಳಿಸಿದರು.

‘ಹಾಲಾಡಿ ಬಳಿ ಪೈಪ್ಲೈನ್ ಕಾಮಗಾರಿಗೆ ಜನರ ವಿರೋಧವಿದೆ ಈ ಕಾರಣದಿಂದ 24X7 ನೀರು ಒದಗಿಸುವ ಕಾರ್ಯ ವಿಳಂಬವಾಗುತ್ತಿದೆ. ಈ ಸಲ ಬಜೆ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹವಿದೆ ಜೊತೆಗೆ ವಾರಾಹಿಯ ನೀರೂ ಬರುತ್ತಿರುವುದರಿಂದ ನೀರಿನ ಸಮಸ್ಯೆ ಕಾಡದು’ ಎಂದೂ ಅವರು ಹೇಳಿದರು.

‘24X7 ನೀರು ಸರಬರಾಜಿಗೆ ಪ್ರಯತ್ನ’

ಉಡುಪಿ ನಗರಕ್ಕೆ ಆದಷ್ಟು ಶೀಘ್ರ 24X7 ನೀರು ಒದಗಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಕೆಲವೆಡೆ ಹಳೆಯ ಪೈಪ್ಗಳಿರುವಲ್ಲಿ ಸೋರಿಕೆ ಸಮಸ್ಯೆ ಇದೆ. ಅಲ್ಲಿ ಹೊಸದಾಗಿ ಪೈಪ್ಲೈಲ್ ಅಳವಡಿಸುತ್ತಿದ್ದೇವೆ. ಸದ್ಯ ವಾರಾಹಿ ಎಡದಂಡೆ ಕಾಲುವೆಯಿಂದ ಪ್ರತಿದಿನ 35 ಎಂಎಲ್ಡಿ ನೀರನ್ನು ಉಡುಪಿ ನಗರಕ್ಕೆ ಸರಬರಾಜು ಮಾಡುತ್ತಿದ್ದೇವೆ ಎಂದು ಕೆಯುಐಡಿಎಫ್ಸಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅರ್ಕೇಶ್ ಗೌಡ ತಿಳಿಸಿದರು.