ಕುಂದಾಪುರ: ‘ಹೋರಾಟದ ಹೆಸರಿನಲ್ಲಿ ವಾರಾಹಿ ಯೋಜನಾ ಪ್ರದೇಶದ ಜನರ ನಡುವಿನ ಬಾಂಧವ್ಯ ಹಾಳು ಮಾಡಲು ಹೊರಟಿರುವುದು ಸರಿಯಲ್ಲ. ಪ್ರಸ್ತಾವಿತ ಏತನೀರಾವರಿ ಯೋಜನೆಗಾಗಿ ಹೋರಿಯಬ್ಬೆ ಮೂಲ ಆಣೆಕಟ್ಟಿನ ಮೇಲ್ಗಡೆ ನೀರು ಎತ್ತುವುದೇ ಅವೈಜ್ಞಾನಿಕ’ ಎಂದು ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಮಾಜಿ ನಿರ್ದೇಶಕ ಬಲಾಡಿ ಸಂತೋಷ್ ಶೆಟ್ಟಿ ಅಭಿಪ್ರಾಯಪಟ್ಟರು.

ಕಂಡ್ಲೂರಿನ ಭವಾನಿ ಸಂಜೀವ ಶೆಟ್ಟಿ ಸಭಾಭವನದಲ್ಲಿ ಬುಧವಾರ ಸಂಜೆ ನಡೆದ ವಾರಾಹಿ ನೀರು ಬಳಕೆದಾರರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಈ ಭಾಗದ ರೈತರು ವಾರಾಹಿ ಯೋಜನೆಗಾಗಿ ಭೂಮಿ ಕೊಟ್ಟು 47 ವರ್ಷ ದಾಟಿದ್ದರೂ, ಇನ್ನೂ ಮೂಲ ಯೋಜನೆಯೇ ಪೂರ್ತಿಯಾಗಿ ಆರಂಭವಾಗಿಲ್ಲ. ಪ್ರತಿ ಬೇಸಿಗೆಯಲ್ಲಿ ಹಾಲಾಡಿಯಿಂದ ಜಪ್ತಿಯ ತನಕ ವಾರಾಹಿ ನದಿಯಲ್ಲಿ ನೀರು ಕ್ಷೀಣಿಸುತ್ತಲೇ ಬರುತ್ತಿದೆ. ಕಳೆದ ಸಾಲಿನಲ್ಲಿ ಬಳ್ಕೂರು ಡ್ಯಾಂನಿಂದ ಉಪ್ಪು ನೀರು ನುಗ್ಗಿ ಹಾಲಾಡಿ ತನಕ ರೈತರು ಸಂಕಷ್ಟಕ್ಕೀಡಾಗಿದ್ದರು. ವಾರಾಹಿ ಅಣೆಕಟ್ಟನ್ನು ಕೇಂದ್ರವಾಗಿರಿಸಿಕೊಂಡು ಹತ್ತಾರು ಯೋಜನೆಗಳು ಜಾರಿಯಾಗುತ್ತಿರುವುದರಿಂದಾಗಿ, ವಾರಾಹಿ ನದಿಯ ನೀರನ್ನೆ ನಂಬಿಕೊಂಡಿರುವ ಸಾವಿರಾರು ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.

ಇದೀಗ ಸಿದ್ದಾಪುರ ಏತ ನೀರಾವರಿ ಬಗ್ಗೆಯು ಹೋರಾಟ ಮಾಡಲು ಹೇಳುವವರೆ, ಮುಂದೊಂದು ದಿನ ನೀವು ಮಾಡಿದ ಹೋರಾಟವೇ ಸರಿಯಿಲ್ಲ ಅಂತ ಹೇಳುವ ಸಾಧ್ಯತೆಗಳು ಇದೆ. ಸಿದ್ದಾಪುರ ಏತನೀರಾವರಿ ಯೋಜನೆಗಾಗಿ ಹೋರಿಯಬ್ಬೆ ಮೂಲ ಅಣೆಕಟ್ಟಿನ ಮೇಲ್ಗಡೆ ನೀರು ಎತ್ತುವುದು ತೀರಾ ಅವೈಜ್ಞಾನಿಕ. ಇದರಿಂದ ಡ್ಯಾಂ ಕೆಳಭಾಗದ 10 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಬೇಸಿಗೆಯಲ್ಲಿ ನೀರಿಲ್ಲದ್ದಂತಾಗುತ್ತದೆ. ಭವಿಷ್ಯದ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟಿದ್ದರಿಂದ ಸರ್ಕಾರ ಉದ್ದೇಶಿತ ಕಾಮಗಾರಿ ಸ್ಥಗಿತಕ್ಕೆ ಆದೇಶ ನೀಡಿ, ತಜ್ಞರ ಸಮಿತಿ ರಚನೆ ಮಾಡಿ, ವರದಿ ನೀಡಲು ಸೂಚಿಸಿದೆ. ಸರ್ಕಾರದಿಂದ ನೇಮಕವಾಗಿರುವ ಸಮಿತಿ ಕೂಡಲೇ ಸಮೀಕ್ಷೆ ನಡೆಸಿ, ಡ್ಯಾಂ ಕೆಳಭಾಗದ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಪಶ್ಚಿಮವಾಹಿನಿ ನೀರಾವರಿ ಅಚ್ಚುಕಟ್ಟು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಚಿಟ್ಟೆ ರಾಜ್ಗೋಪಾಲ್ ಹೆಗ್ಡೆ ಮಾತನಾಡಿ, ‘ಶಿವಮೊಗ್ಗ ಜಿಲ್ಲೆಯ ಜನರ ತ್ಯಾಗದಿಂದ ವಾರಾಹಿ ನೀರು ಕಾಣುತ್ತಿರುವ ನಾವು ಅವರಿಗೆ ಋಣಿಯಾಗಿರಬೇಕು. ಪಂಚ ಕ್ಷೇತ್ರಗಳಲ್ಲಿ ಒಂದಾಗಿರುವ ಹೊಳೆಶಂಕರನಾರಾಯಣದ ಮೂಲ ಉದ್ಭವಲಿಂಗಕ್ಕೆ ತೊಂದರೆಯಾಗುತ್ತಿರುವ ವಿಷಯ ತಿಳಿದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಘಾತ ವ್ಯಕ್ತಪಡಿಸಿದ್ದಾರೆ. ತಜ್ಞರ ಸಮಿತಿಯ ಅಭಿಪ್ರಾಯ ಪಡೆದು, ತೀರ್ಮಾನ ಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಪ್ರಮುಖರಿಗೆ ಯೋಜನೆಯ ಸ್ಥಳ ಬದಲಾವಣೆಯ ಅನಿವಾರ್ಯತೆ ಮನವರಿಕೆ ಮಾಡಿದ್ದೇವೆ. ನೀರಿನ ಹಕ್ಕು ಪ್ರತಿಯೊಬ್ಬರಿಗೂ ಇದೆ. ಮೂಲ ಅಣೆಕಟ್ಟಿಗೆ ಧಕ್ಕೆಯಾದಲ್ಲಿ ತಾಲ್ಲೂಕಿಗೂ ಅಪಾಯವಾಗುವ ಸಾಧ್ಯತೆಗಳಿವೆ. ಹೋರಾಟದ ಹೆಸರಿನಲ್ಲಿ ಸಂಘರ್ಷವಾಗಕೂಡದು’ ಎಂದು ನುಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಣಪತಿ ಟಿ. ಶ್ರೀಯಾನ್, ಗುಲ್ವಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸುದೀಶ್ಕುಮಾರ ಶೆಟ್ಟಿ, ಬೈಂದೂರು ಬಿಜೆಪಿ ಮಂಡಲ ಉಪಾಧ್ಯಕ್ಷ ರಾಘವೇಂದ್ರ ನೆಂಪು ಮಾತನಾಡಿದರು.

ವಿವೇಕ ಭಂಡಾರಿ ಗುಲ್ವಾಡಿ, ಕಾಳಿಂಗ ಶೆಟ್ಟಿ ಕಾವ್ರಾಡಿ , ಪ್ರಭಾಕರ ಶೆಟ್ಟಿ ಬಲಾಡಿ, ಶಂಕರ ಶೆಟ್ಟಿ ಗುಡಿಬೆಟ್ಟು, ಸಂತೋಷ ಕುಮಾರ್ ಹಟ್ಟಿಕುದ್ರು, ರತ್ನಾಕರ ಶೆಟ್ಟಿ ಮಧುರಬಾಳು, ಉದ್ಯಮಿ ಕೆ.ಕೆ. ಕಾಂಚನ್, ಸತೀಶ್ ಶೆಟ್ಟಿ ಹಳ್ನಾಡು, ಸಂತೋಷ ಕುಮಾರ್, ವಸಂತ ಶೆಟ್ಟಿ ದೇವಲ್ಕುಂದ, ಗೋಪಾಲ ಪೂಜಾರಿ ದೇವಲ್ಕುಂದ, ಶೇಷು ಶೆಟ್ಟಿ ದೇವಲ್ಕುಂದ, ಗೋವರ್ಧನ್ ಭಂಡಾರಿ ಹಳ್ನಾಡು ಇದ್ದರು.

25ರಂದು ಕಂಡ್ಲೂರಿನಲ್ಲಿ

ಬೇಡಿಕೆ ಆಗ್ರಹಿಸಿ ಜನಾಂದೋಲನ ವಾರಾಹಿ ನದಿಯನ್ನು ಉಳಿಸಿ ಈ ಭಾಗದ ರೈತ ಹಾಗೂ ಕೃಷಿ ವರ್ಗಕ್ಕೆ ನೀರು ನೀಡಲು ಸಮಾನ ಮನಸ್ಕರೊಂದಿಗೆ ಜನಾಂದೋಲನ ರೂಪಿಸಲಿದ್ದೇವೆ. ಜ. 25ರಂದು ಬೆಳಿಗ್ಗೆ ಕಂಡ್ಲೂರಿನಲ್ಲಿ ಬೇಡಿಕೆ ಆಗ್ರಹಿಸಿ ಜನಾಂದೋಲನ ನಡೆಸಲಿದ್ದೇವೆ. ಬುಧವಾರ ಸಿದ್ದಾಪುರದಲ್ಲಿ ನಡೆದ ಸಭೆಯಲ್ಲಿ ಶಾಸಕರು ಮಾತನಾಡಿರುವ ಧಾಟಿ ಖಂಡನೀಯ. ವಾರಾಹಿ ನದಿ ನೀರನ್ನೇ ನಂಬಿಕೊಂಡಿರುವ ಬೈಂದೂರು ಕ್ಷೇತ್ರದ 10 ಗ್ರಾಮ ಪಂಚಾಯಿತಿ ರೈತರ ಹಾಗೂ ಮತದಾರರ ಅವಗಣನೆಗೆ ಮುಂದೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಮಾಜಿ ನಿರ್ದೇಶಕ ಬಲಾಡಿ ಸಂತೋಷ್ ಶೆಟ್ಟಿ ಎಚ್ಚರಿಸಿದರು.

ಎಂಜಿನಿಯರ್ಗಳ ವಿರುದ್ಧ ಇಲಾಖೆ ಶಿಸ್ತು ಕ್ರಮ ಜರುಗಿಸಬೇಕು

ದಾಖಲೆ ಹಾಗೂ ಇಂಟರ್ನೆಟ್ ಚಿತ್ರಗಳನ್ನು ಪ್ರದರ್ಶನ ಮಾಡಿ ಮಾತನಾಡಿದ ಬಸ್ರೂರು ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ಕುಮಾರ ಮೆಂಡನ್ ‘ಕಾಮಗಾರಿ ನಿಲ್ಲಿಸುವಂತೆ ಸರ್ಕಾರ ಸ್ಪಷ್ಟವಾಗಿ ಆದೇಶದಲ್ಲಿ ತಿಳಿಸಿದ್ದರೂ ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿಲ್ಲ. ಇದಕ್ಕೆ ಕಾರಣರಾಗಿರುವ ಇಲಾಖೆಯ ಐದು ಎಂಜಿನಿಯರ್ಗಳ ವಿರುದ್ಧ ಇಲಾಖೆ ಶಿಸ್ತು ಕ್ರಮ ಜರುಗಿಸಬೇಕು. ಮೂಲ ಅಣೆಕಟ್ಟಿನ ಸಮೀಪದಲ್ಲಿರುವ ವಿದ್ಯುತ್ ಉತ್ಪಾದನಾ ಘಟಕದ ಬಗ್ಗೆ ವ್ಯವಸ್ಥಿತಿ ಅಪಪ್ರಚಾರ ನಡೆಸಲಾಗುತ್ತಿದೆ. ಆದರೆ ಈ ಪ್ರದೇಶ ಸರ್ಕಾರದ ಆಸ್ತಿ. ಖಾಸಗಿಯವರೊಂದಿಗೆ ಒಪ್ಪಂದ ಮಾಡಿಕೊಂಡು ವಿದ್ಯುತ್ ಉತ್ಪಾದನೆ ಮಾಡಿ ಸರ್ಕಾರದ ಸಂಬಂಧಿಸಿದ ಇಲಾಖೆಗೆ ಕೊಡುವ ಕೆಲಸ ಮಾತ್ರ ಆಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.