ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ದರ ಇಳಿಕೆ: ಟೊಮೆಟೊ, ಬೀನ್ಸ್ ಅಗ್ಗ

ಮಾಂಸ ದರದಲ್ಲಿ ಸ್ಥಿರತೆ, ಮೊಟ್ಟೆ ಸ್ವಲ್ಪ ಏರಿಕೆ
Last Updated 1 ಡಿಸೆಂಬರ್ 2022, 12:57 IST
ಅಕ್ಷರ ಗಾತ್ರ

ಉಡುಪಿ: ಮಾರುಕಟ್ಟೆಯಲ್ಲಿ ತರಕಾರಿಗಳ ದರದಲ್ಲಿ ಇಳಿಕೆ ಕಂಡುಬಂದಿದೆ. ಟೊಮೆಟೊ, ಬೀನ್ಸ್‌, ಬದನೆಕಾಯಿ, ಈರೇಕಾಯಿ, ಸೋರೆಕಾಯಿ ಸೇರಿದಂತೆ ಹಲವು ತರಕಾರಿಗಳ ದರ ಅಗ್ಗವಾಗಿದೆ.

ತಿಂಗಳ ಹಿಂದೆ ಶತಕದ ಗಡಿ ದಾಟಿದ್ದ ಬೀನ್ಸ್ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 40ಕ್ಕೆ ಲಭ್ಯವಾಗುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ₹ 30ಕ್ಕೆ ಸಿಗುತ್ತಿದೆ. ಟೊಮೆಟೊ ದರವೂ ಕೆ.ಜಿಗೆ ₹ 15ಕ್ಕೆ ಇಳಿಕೆಯಾಗಿದೆ. ಈರುಳ್ಳಿ ದರದಲ್ಲಿ ಸ್ಥಿರತೆ ಕಂಡುಬಂದಿದ್ದು ಕೆ.ಜಿಗೆ ₹ 35 ರಿಂದ ₹ 40 ದರ ಇದೆ. ಕ್ಯಾರೆಟ್ ದರದಲ್ಲಿ ಸ್ವಲ್ಪ ಇಳಿಕೆಯಾಗಿದ್ದು ಕೆ.ಜಿಗೆ ₹ 65 ಇತ್ತು.

ಹಾಗಲಕಾಯಿ ₹ 60 ರಿಂದ ₹ 70 ಬೆಂಡೆ ₹ 50, ಹೂಕೋಸು ₹ 40, ಎಲೆಕೋಸು ₹ 25, ಆಲೂಗಡ್ಡೆ ಕೆ.ಜಿಗೆ ₹ 30 ರಿಂದ ₹ 35 ದರ ಇತ್ತು. ಈರೇಕಾಯಿ ₹ 40 ರಿಂದ ₹ 50, ಕ್ಯಾಪ್ಸಿಕಂ ₹ 60 ರಿಂದ ₹ 70, ಬೀಟ್‌ರೂಟ್‌ ₹ 50, ಮೂಲಂಗಿ ₹ 40, ಸೋತೆಕಾಯಿ ₹ 30, ಚವಳಿಕಾಯಿ ₹ 40 ರಿಂದ ₹ 50.

ಸೋರೆಕಾಯಿ ₹ 30, ಗೆಡ್ಡೆಕೋಸು ₹ 35, ತೊಂಡೆಕಾಯಿ ₹ 50, ಬದನೆಕಾಯಿ ₹ 30 ರಿಂದ ₹ 40, ಉಡುಪಿಯ ಮಟ್ಟುಗುಳ್ಳ ₹ 100, ಹಸಿ ಮೆಣಸಿನಕಾಯಿ ₹ 60, ಶುಂಠಿ ₹ 60, ಸಿಹಿ ಕುಂಬಳ ₹ 30 ಬೆಲೆಗೆ ಮಾರಾಟವಾಯಿತು.

ಹಸಿ ಬಟಾಣಿ ಕೆಜಿಗೆ ₹ 80 ರಿಂದ ₹ 100, ಸಾಂಬಾರ್ ಸೌತೆ ₹ 20 ರಿಂದ ₹ 30 ಬೆಲೆಗೆ ಮಾರಾಟವಾಗುತ್ತಿತ್ತು. ಕಳೆದ 15 ದಿನಗಳ ಹಿಂದಿನ ಬೆಲೆಗೆ ಹೋಲಿಸಿದರೆ ತರಕಾರಿ ದರ ಸ್ವಲ್ಪ ಕಡಿಮೆಯಾಗಿದೆ. ಮದುವೆ ಹಾಗೂ ಧಾರ್ಮಿಕ ಸಮಾರಂಭಗಳ ಸೀಸನ್ ಶುರುವಾಗಿರುವುದರಿಂದ ತರಕಾರಿ ಬೆಲೆ ಮತ್ತಷ್ಟು ಹೆಚ್ಚಾಗಲಿದೆ ಎಂದು ತರಕಾರಿ ಮಾರಾಟಗಾರ ಶಫೀಕ್ ಮಾಹಿತಿ ನೀಡಿದರು.

ಸೊಪ್ಪಿನ ದರವೂ ಸ್ವಲ್ಪ ಕುಸಿತಕಂಡಿದೆ. ಪಾಲಕ್‌, ಅರಿವೆ, ದಂಟು, ಸಬಸ್ಸಿಗೆ, ಮೆಂತೆ ಕಟ್ಟಿಗೆ ₹ 7 ರಿಂದ ₹ 10 ದರ ಇದ್ದರೆ, ಕೊತ್ತಮರಿ ಸೊಪ್ಪು ಕೆ.ಜಿಗೆ ₹ 50 ರಿಂದ ₹ 70 ಇತ್ತು.

ಮಾರುಕಟ್ಟೆಗೆ ಕಿತ್ತಲೆ ಹಣ್ಣು ಲಗ್ಗೆ ಇಟ್ಟಿದ್ದು ಆರಂಭದಲ್ಲಿ ಕೆ.ಜಿಗೆ ₹ 40 ರಿಂದ ₹ 50 ಇದ್ದ ದರ ಸದ್ಯ ₹ 60 ರಿಂದ ₹ 70ಕ್ಕೆ ತಲುಪಿದೆ. ಗುಣಮಟ್ಟಕ್ಕೆ ಅನುಗುಣವಾಗಿ ಸೇಬಿಗೆ ದರವಿದ್ದು ರಾಯಲ್ ಗಾಲ ಕೆ.ಜಿಗೆ ₹ 220 ರಿಂದ ₹ 240, ರೆಡ್‌ ಡಿಲಿಷಿಯಸ್‌ ₹ 300, ಕಾಶ್ಮೀರ ಸೇಬಿಗೆ ₹ 130 ಬೆಲೆ ಇತ್ತು.

ಏಲಕ್ಕಿ ಬಾಳೆಹಣ್ಣು ಕೆ.ಜಿಗೆ ₹ 60, ಪಚ್ಚಬಾಳೆ₹ 30, ನೇಂದ್ರ ಬಾಳೆ ₹ 45, ಪೈನಾಪಲ್‌ ಒಂದಕ್ಕೆ ₹ 40, ದಾಳಿಂಬೆ ₹ 200, ಮೋಸಂಬಿ ₹ 80, ಡ್ರ್ಯಾಗನ್ ಫ್ರೂಟ್‌ ಒಂದಕ್ಕೆ ₹ 60 ರಿಂದ ₹ 70 ಬೆಲೆ ಇದ್ದರೆ, ಪಪ್ಪಾಯ ದರದಲ್ಲಿ ಸ್ವಲ್ಪ ಏರಿಕೆಯಾಗಿದ್ದು ₹ 30ರಿಂದ ₹ 40 ದರ ನಿಗದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT