ಕುಂದಾಪುರ: ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಪ್ರತಿ ಬೇಸಿಗೆಯಲ್ಲೂ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಲೇ ಇದೆ. ಜನರ ಬೇಡಿಕೆಗೆ ಅನುಗುಣವಾಗಿ ಸ್ಪಂದಿಸುವ ಜಿಲ್ಲಾಡಳಿತ ಕುಡಿಯುವ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡುತ್ತಿವೆ.

ತಾಲ್ಲೂಕಿನ ವಾರಾಹಿ, ಸೌಪರ್ಣಿಕ, ಚಕ್ರ, ಖೇಟಾ, ಗಂಗಾವಳಿ ಮುಂತಾದ ನದಿಗಳು ಸೇರಿದಂತೆ ಜಲಮೂಲವನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳುವ ಕಾರ್ಯಯೋಜನೆಗಳು ಅನುಷ್ಠಾನಗೊಂಡರೆ ನೀರಿನ ಸಮಸ್ಯೆ ಉದ್ಭವಿಸಲಿಕ್ಕಿಲ್ಲ ಎಂಬುದು ಜನರ ನಿರೀಕ್ಷೆ.

ಬಿಸಿಲಿನ ಪ್ರಖರತೆಯಿಂದಾಗಿ ಈಗಾಗಲೇ ಇಲ್ಲಿನ ಬಾವಿ, ಕೆರೆ, ತೋಡು, ನದಿಗಳಲ್ಲಿ ನೀರಿನ ಮಟ್ಟ ಕುಸಿತ ಕಾಣಲು ಆರಂಭಿಸಿದೆ.

ತಾಲ್ಲೂಕಿನ ಜಪ್ತಿ ಗ್ರಾಮದಲ್ಲಿ ನಿರ್ಮಿಸಿರುವ ಉಪ್ಪುನೀರು ತಡೆ ಅಣೆಕಟ್ಟು, ನೀರು ಶುದ್ಧೀಕರಣ ಘಟಕ ನಿರ್ಮಾಣವಾದ ಬಳಿಕ ಕಳೆದ ಕೆಲ ವರ್ಷಗಳಿಂದ ಪುರಸಭೆ ಸೇರಿದಂತೆ ಪರಿಸರದ ಹತ್ತಾರು ಗ್ರಾಮಗಳ ನೀರಿನ ಅವಶ್ಯಕತೆ, ಬವಣೆ ನೀಗಿದೆ. ವಾರಾಹಿ ನೀರಾವರಿ ಯೋಜನೆ ಪೂರ್ಣಗೊಂಡರೆ ತಾಲ್ಲೂಕಿನ ಜನರ ಕೃಷಿ, ಕುಡಿಯುವ ನೀರು, ಇತರ ಅವಶ್ಯಕತೆಗಳಿಗೆ ನೀರು ಪೂರೈಕೆಯಾಗುವುದರಲ್ಲಿ ಸಂದೇಹವಿಲ್ಲ.

ಕಳೆದ ಬೇಸಿಗೆಯಲ್ಲಿ ಗುಜ್ಜಾಡಿ, ಹೆಮ್ಮಾಡಿ, ಹೋಸಾಡು ಸೇನಾಪುರ, ಕಟ್ಬೇಲ್ತೂರು, ವಂಡ್ಸೆ, ದೇವಲ್ಕುಂದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿತ್ತು. ಸುಮಾರು 1,519 ಕುಟುಂಬಗಳ ಜನರು ಹೈರಾಣಾಗಿದ್ದರು.

ಜಿಲ್ಲಾಡಳಿತ ಮಾರ್ಗದರ್ಶನದಲ್ಲಿ ಕಾರ್ಯಯೋಜನೆ ಹಮ್ಮಿಕೊಂಡಿದ್ದ ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಆಡಳಿತ ನೀರಿನ ಬೇಡಿಕೆ ಇರುವ ಗ್ರಾಮಗಳಿಗೆ ಲಭ್ಯ ಅನುದಾನದಲ್ಲಿ ವಿತರಣೆಗೆ ಕ್ರಮ ಕೈಗೊಂಡಿತ್ತು. 2024ರಲ್ಲಿ ದೇವಲ್ಕುಂದ ಗ್ರಾಮದಲ್ಲಿ ನಿರ್ಮಿಸಲಾದ ಹೊಸ ಬಾವಿಯ ನೀರನ್ನು ಉಪಯೋಗಿಸಿಕೊಳ್ಳಲಾಗಿತ್ತು. ಅವಶ್ಯಕತೆ ಇರುವ ಗ್ರಾಮಗಳಿಗೆ ಪ್ರತಿ 2 ದಿನಕ್ಕೊಮ್ಮೆ ಟ್ಯಾಂಕ್ ಮೂಲಕ ನೀರು ಸರಬರಾಜಿಗೆ ಯೋಜನೆ ರೂಪಿಸಿಲಾಗಿತ್ತು.

ವಾರಾಹಿ ಯೋಜನೆ, ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಮೂಲಕ ಎಲ್ಲಾ ಗ್ರಾಮಗಳಿಗೆ ನೀರು ದೊರಕುತ್ತದೆ ಎನ್ನುವ ಭರವಸೆ ಇದ್ದರೂ, ಈ ಎರಡು ಯೋಜನೆಗಳಿಗೆ ಹಿಡಿದಿರುವ ಗ್ರಹಣ ಬಿಡುಗಡೆಯ ಲಕ್ಷಣಗಳೇ ಕಾಣಿಸುತ್ತಿಲ್ಲ. ಜಲಜೀವನ್ ಮಿಷನ್ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರು ಉತ್ಸುಕರಾಗಿದ್ದರೂ, ಅರಣ್ಯ ಭಾಗದಲ್ಲಿ ಹಾದುಹೋಗುವ ಕಾಮಗಾರಿಗಳಿಗೆ ಅನುಮತಿ ಇನ್ನೂ ದೊರಕದೆ ಇರುವುದರಿಂದ ಯೋಜನೆ ಕುಂಠಿತವಾಗಿ ಸಾಗುತ್ತಿದೆ.

ವಾರಾಹಿ ಯೋಜನೆ ಕಾಮಗಾರಿಯ ಕಥೆ ಇದಕ್ಕಿಂತ ಭಿನ್ನವಾಗಿದೆ. ಹಲವು ದಶಕಗಳ ಹಿಂದೆಯೇ ಮುಗಿಯಬೇಕಾಗಿದ್ದ ಜನಪರ ಯೋಜನೆ ಹಳಿತಪ್ಪಿದೆ. ರಾಜಕೀಯ, ವೈಯಕ್ತಿಕ ಮೇಲಾಟದಿಂದಾಗಿ ಜನರ ಬೇಡಿಕೆಯ ವಾರಾಹಿ ಯೋಜನೆ ಗಗನ ಕುಸುಮವಾಗುತ್ತಿದೆ.

ಬೇಸಿಗೆಯಲ್ಲಿ ತಲೆದೋರಬಹುದಾದ ನೀರಿನ ಸಮಸ್ಯೆಗಳ ಕುರಿತು ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದೆ. ನೀರಿನ ಸಮಸ್ಯೆ ಕಾಡಬಹುದಾದ ಗ್ರಾಮಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಕಳೆದ ವರ್ಷದ ಪಾಲನಾ ವರದಿಯ ಆಧಾರದಲ್ಲಿ ಒದಗಿಸಬೇಕಾದ ನೀರು, ಸರಬರಾಜು ವ್ಯವಸ್ಥೆ, ಅನುದಾನ ಲಭ್ಯತೆಯ ಲೆಕ್ಕಾಚಾರಗಳು ನಡೆಯುತ್ತಿದೆ. ಈವರೆಗೆ ಯಾವುದೇ ಗ್ರಾಮದಿಂದ ನೀರಿನ ಅಭಾವದ ಕುರಿತು ಬೇಡಿಕೆಗಳು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.