ಉಡುಪಿ: ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಮಾರ್ಚ್ 8 ಹಾಗೂ 9ರಂದು ಮಹಿಳಾ ಚೈತನ್ಯ ದಿನ ಆಚರಿಸಲಾಗುತ್ತಿದೆ ಎಂದು ಒಕ್ಕೂಟದ ಸದಸ್ಯೆ ಅಖಿಲಾ ವಿದ್ಯಾಸಂದ್ರ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ದೌರ್ಜನ್ಯದ ವಿರುದ್ಧ ಧನಿ ಎತ್ತುವ ಉದ್ದೇಶದಿಂದ 2013ರಲ್ಲಿ ಆರಂಭವಾದ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ರಾಜ್ಯದ 12 ಜಿಲ್ಲೆಗಳಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನದ ಭಾಗವಾಗಿ ರಾಜ್ಯಮಟ್ಟದ ಮಹಿಳಾ ಚೈತನ್ಯ ದಿನವನ್ನು ಯಶಸ್ವಿಯಾಗಿ ನಡೆಸಿದೆ.

ಈ ಬಾರಿ ಸಮ್ಮೇಳನ ಉಡುಪಿಯಲ್ಲಿ ನಡೆಯುತ್ತಿದ್ದು, ಮಾರ್ಚ್ 8ರಂದು ಅಜ್ಜರಕಾಡು ಟೌನ್ಹಾಲ್ನಲ್ಲಿ ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಮೊದಲಿಗೆ ಹೋರಾಟದ ಹಾಡುಗಳ ಗಾಯನ, ಬಳಿಕ ಒಕ್ಕೂಟದ ಸಂಗಾತಿಗಳಿಂದ ಆಶಯ ಗೀತೆ, ನಂತರ ಗೀತಾ ಬೈಂದೂರು ಸಂವಿಧಾನ ಪೀಠಿಕೆ ಓದಲಿದ್ದಾರೆ.

ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಲಿದ್ದು, ಟಿ.ಎಲ್.ರೇಖಾಂಭಾ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಹೋರಾಟಗಾರ್ತಿ ಅರುಳ್ ಮೌಳಿ ಆಶಯ ನುಡಿಗಳನ್ನಾಡಲಿದ್ದಾರೆ. ‘ಬಹುತ್ವದೆಡೆಗೆ ನಮ್ಮ ನಡಿಗೆ’ ತುಮಕೂರು ಮಹಿಳಾ ದಿನದ ನೆನಪಿನ ಹೊತ್ತಿಗೆ ಬಿಡುಗಡೆಯಾಗಲಿದೆ.

ಬಾ.ಹ.ರಮಾ ಕುಮಾರಿ ಹೊತ್ತಿಗೆಯ ಕುರಿತು ಮಾತನಾಡಲಿದ್ದಾರೆ. ಜಾನಕಿ ಬ್ರಹ್ಮಾವರ, ಜಾನೆಟ್ ಬಾರ್ಬೊಜಾ, ಸುನಂದಾ ಕಡಮೆ ಉಪಸ್ಥಿತರಿರಲಿದ್ದಾರೆ. ಪ್ರೊ.ನಿಕೇತನಾ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಮಧ್ಯಾಹ್ನ 12.30ಕ್ಕೆ ಮಹಿಳೆ ಮತ್ತು ರಾಜಕೀಯ ಪ್ರಾತಿನಿಧ್ಯ ವಿಷಯ ಕುರಿತು ಕೆ.ಎಸ್.ಲಕ್ಷ್ಮಿ, ಉದ್ಯೋಗ ವಲಯದಲ್ಲಿ ಮಹಿಳಾ ಪ್ರಾತಿನಿಧ್ಯ ಕುರಿತು ಯು.ಟಿ.ಫರ್ಜಾನಾ ವಿಷಯ ಮಂಡಿಸಲಿದ್ದಾರೆ. ರೇಶ್ಮಾ ಗುಳೇದ ಗುಡ್ಡಾಕರ್ ಸಯೋಜನೆ ಮಾಡಲಿದ್ದಾರೆ.

ನ್ಯಾಯ ವ್ಯವಸ್ಥೆಯಲ್ಲಿ ಮಹಿಳಾ ಪ್ರಾತಿನಿಧ್ಯ ಕುರಿತು ಮೈತ್ರಿ, ಮಾಧ್ಯಮ ರಂಗದಲ್ಲಿ ಮಹಿಳಾ ಪ್ರಾತಿನಿಧ್ಯ ಕುರಿತು ಶಾಹಿನ್ ಮೊಕಾಶಿ ಮಾತನಾಡಲಿದ್ದಾರೆ. ಡಾ.ಸಬಿತಾ ಕೊರಗ ಅಧ್ಯಕ್ಷತೆ ವಹಿಸಲಿದ್ದಾರೆ. ಚೈತ್ರಾ ಯಡ್ತರೆ ಸಂಯೋಜನೆ ಮಾಡಲಿದ್ದಾರೆ.

ಸಂಜೆ 5.30ಕ್ಕೆ ಜೋಡುಕಟ್ಟೆಯ ಬಳಿಕ ಸರ್ವ ಜನಾಂಗದ ಶಾಂತಿಯ ದೇಶ ಮೌನ ಜಾಗೃತಿ ಕಾರ್ಯಕ್ರಮ ನಡೆಯಲಿದ್ದು ಫಾದರ್ ವಿಲಿಯಂ ಮಾರ್ಟಿಸ್ ಉದ್ಘಾಟಿಸಲಿದ್ದಾರೆ.

9ರಂದು ಬೆಳಿಗ್ಗೆ 10 ಗಂಟೆಗೆ ಹುತಾತ್ಮರ ಚೌಕದಲ್ಲಿ ಹಕ್ಕೊತ್ತಾಯ ಜಾಥಾ ನಡೆಯಲಿದ್ದು, ಹೋರಾಟಗಾರ್ತಿ ಡಾ.ಜಿ.ವಿ.ವೆನ್ನೆಲ ಗದ್ದರ್ ಉದ್ಘಾಟಿಸಲಿದ್ದಾರೆ. ಬರಹಗಾರ್ತಿ ಸಬಾ ನಖ್ವಿ, ಪ್ರೊ.ಸಬಿಹಾ ಭೂಮಿಗೌಡ, ಅತ್ರಾಡಿ ಅಮೃತಾ, ಅನಸೂಯಮ್ಮ ಅರಳಾಳುಸಂದ್ರ ಉಪಸ್ಥಿತರಿರಲಿದ್ದಾರೆ. ಡಾ.ಸುನಿತಾ ಶೆಟ್ಟಿ ಸಂಯೋಜನೆ ವಹಿಸಲಿದ್ದಾರೆ.

11.30ಕ್ಕೆ ಬಾಸೆಲ್ ಮಿಷನ್ ಚರ್ಚ್ ಹಾಲ್ನಲ್ಲಿ ಸಾರ್ವಜನಿಕ ಸಮಾವೇಶ ನಡೆಯಲಿದ್ದು, ಬೆಂಗಳೂರಿನ ಗೌರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಮತೆಯೆಡೆಗೆ ನಮ್ಮ ನಡಿಗೆಯ ಆಶಯದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಾನಕಿ ಬ್ರಹ್ಮಾವರ, ಲಿನೆಟ್, ವೆರೋನಿಕಾ ಕರ್ನೇಲಿಯೊ, ಹುಮೈರಾ, ಕೃತಿ, ರೇಖಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.