ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿಯಲ್ಲೂ ಶವೊಮಿ 11 ಟಿ ಪ್ರೊ ಬಿಡುಗಡೆ

Last Updated 20 ಜನವರಿ 2022, 13:36 IST
ಅಕ್ಷರ ಗಾತ್ರ

ಉಡುಪಿ: ಮುಂಚೂಣಿಯ ಸ್ಮಾರ್ಟ್‌ಫೋನ್ ತಯಾರಿಕೆ ಕಂಪನಿ ಶಓಮಿ ಇದೀಗ ‘ಶಓಮಿ 11ಟಿ ಪ್ರೊ’ 5ಜಿ ಸ್ಮಾರ್ಟ್ ಫೋನ್ ಅನ್ನು ಉಡುಪಿ ಹಾಗೂ ಮಂಗಳೂರಿನಲ್ಲೂ ಬಿಡುಗಡೆ ಮಾಡಿದೆ. ಇದು ವೇಗವಾದ ಹೈಪರ್ ಚಾರ್ಜಿಂಗ್ ವ್ಯವಸ್ಥೆಯಿರುವ ಫೋನ್ ಆಗಿದೆ.

Xiaomi 11T Pro ಸಾಧನವನ್ನು ಉಡುಪಿಯ ಪ್ರಕಾಶ್ ರಿಟೇಲ್ ಮಳಿಗೆಯಲ್ಲಿ ಮಂಗಳೂರು ವಲಯದ ಎಂಐ ಇಂಡಿಯಾ ಸಿಎಸ್ಐಮ್ ಪ್ರದೀಪ್ ಬಿ.ಆರ್., ಮಂಗಳೂರು ವಿತರಕ ನಿಕೊಲಸ್ ಹಾಗೂ ಹರ್ಷ ಮಳಿಗೆಯ ವ್ಯವಸ್ಥಾಪಕ ನಿರ್ದೇಶಕ ಸಮೃದ್ಧಿ ಅವರು ಬಿಡುಗಡೆ ಮಾಡಿದರು.

ಶಕ್ತಿಯುತವಾದ ಬಳಕೆಯ ಅನುಭವ ನೀಡುವ ಈ ಸ್ಮಾರ್ಟ್‌ಫೋನ್ 10 ಬಿಟ್ ಅಮೊಲೆಡ್ ಡಿಸ್‌ಪ್ಲೇ ಜೊತೆಗೆ ಡೋಲ್ಬಿ ವಿಷನ್ + ಅಟ್ಮಾಸ್, ಹರ್ಮನ್ ಕಾರ್ಡನ್ ಸೌಂಡ್ ವ್ಯವಸ್ಥೆ ಹೊಂದಿದೆ. 120 ವಾಟ್ಸ್ ಶಓಮಿ ಹೈಪರ್ ಚಾರ್ಜರ್ ಇದ್ದು, ಸ್ನ್ಯಾಪ್‌ಡ್ರಾಗನ್ 888 5ಜಿ ಪ್ರೊಸೆಸರ್ ಮತ್ತು 108 ಎಂಪಿ ಟ್ರಿಪಲ್ ಪ್ರೊ ಕ್ಯಾಮೆರಾ ಸೆಟಪ್ ಇದರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT