ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ರಿ| ಯೋಗದಿಂದ ನೆಮ್ಮದಿ ಪ್ರಾಪ್ತಿ: ಸೀತಾರಾಮ್‌ ತೋಳ್ಪಡಿತ್ತಾಯ

ವರಂಗ ಜೈನ ಮಠದಲ್ಲಿ ಯೋಗ ಮಹೋತ್ಸವ 2023 ಕಾರ್ಯಕ್ರಮ.
Published 4 ಜೂನ್ 2023, 11:22 IST
Last Updated 4 ಜೂನ್ 2023, 11:22 IST
ಅಕ್ಷರ ಗಾತ್ರ

ಹೆಬ್ರಿ: ‘ಯೋಗದಿಂದ ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗುತ್ತದೆ. ವಿರೇಂದ್ರ ಹೆಗ್ಗಡೆ ಪ್ರೇರಕರಾಗಿರುವ ಶಾಂತಿವನ ಟ್ರಸ್ಟ್‌ ಸಾಮಾಜಿಕ ಅಭಿವೃದ್ಧಿ ಜೊತೆ  ಯೋಗ ಅನ್ವೆಷಣೆಗೆ ಹೆಚ್ಚು ಪ್ರಾತಿನಿಧ್ಯ ನೀಡಲಾಗುತ್ತಿದೆ. ಟ್ರಸ್ಟ್ ಅರಂಭವಾಗಿ 34 ವರ್ಷ ಸಂದಿದ್ದು ಸಾಧನೆಯಲ್ಲಿ ದಾಪುಗಾಲು ಹಾಕುತ್ತಿದೆ’ ಎಂದು ಧರ್ಮಸ್ಥಳ ಶಾಂತಿವನ ಟ್ರಸ್ಟ್‌ ಕಾರ್ಯದರ್ಶಿ ಸೀತಾರಾಮ್‌ ತೋಳ್ಪಡಿತ್ತಾಯ ಹೇಳಿದರು.

ಆಯುಷ್‌ ಮಂತ್ರಾಲಯ ಕೇಂದ್ರ ಸರ್ಕಾರ, ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಕೇಂದ್ರ ನವದೆಹಲಿ, ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಆಸ್ಪತ್ರೆ ಉಜಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ವರಂಗ ಜೈನ ಮಠದ ಆವರಣದಲ್ಲಿ ನಡೆದ ಯೋಗ ಮಹೋತ್ಸವ–2023 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು .

ಕಾರ್ಯನಿರ್ವಾಹಕ ಅಧಿಕಾರಿ ಎಂ.ವೈ. ಹರೀಶ್ ಮಾತನಾಡಿ, ‘ಯೋಗ ವಿಶ್ವದಲ್ಲಿ ಮಹತ್ವ ಪಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಕ್ರಾಂತಿಕಾರಕ ಬದಲಾವಣೆ ತರಲು ಕಾರಣರಾಗಿದ್ದಾರೆ. ದೇಶದ ಪೌರಾಣಿಕ, ಐತಿಹಾಸಿಕ ಸ್ಥಳಗಳಲ್ಲಿ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.

ಹೊಂಬುಜ ಜೈನ ಮಠದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಡಿ. ಅಶೋಕ್ ಕುಮಾರ್ ಶುಭಹಾರೈಸಿದರು.

ಎಸ್‌ಡಿಎಂ ಕಾಲೇಜು ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನದ ಡಾ. ಪ್ರಶಾಂತ ಶೆಟ್ಟಿ, ಧರ್ಮಸ್ಥಳದ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಆಸ್ಪತ್ರೆ  ವೈದ್ಯಾಧಿಕಾರಿ ಶಿವಪ್ರಸಾದ ಶೆಟ್ಟಿ, ಧರ್ಮಸ್ಥಳದ ಯೋಗ ಹಾಗೂ ನೈತಿಕ ಶಿಕ್ಷಣ ಟ್ರಸ್ಟ್ ನಿರ್ದೇಶಕ ಶಶಿಕಾಂತ ಜೈನ್, ವರಂಗ ಜೈನ ಮಠದ ಯುವರಾಜ ಅರಿಗ ಉಪಸ್ಥಿತರಿದ್ದರು.

ಪರೀಕ ಸೌಖ್ಯವನ ಯೋಗ, ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ‌ವೈದ್ಯಾಧಿಕಾರಿ ಡಾ. ಗೋಪಾಲ್, ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಅನನ್ಯ ಜೈನ್ ನಿರೂಪಿಸಿದರು.

ಯೋಗ ಅನ್ವೆಷಣೆಗೆ ಪ್ರಾತಿನಿಧ್ಯ ನೀಡುತ್ತಿರುವ ಶಾಂತಿವನ ಟ್ರಸ್ಟ್‌ ಯೋಗ ವಿಶ್ವದಲ್ಲಿ ಮಹತ್ವ ಪಡೆಯುತ್ತಿದೆ ಪೌರಾಣಿಕ, ಐತಿಹಾಸಿಕ ಸ್ಥಳಗಳಲ್ಲಿ ಯೋಗ ಹಮ್ಮಿಕೊಳ್ಳಲಾಗುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT