ಮೂಡುಬಿದಿರೆ: ದೇಶದಲ್ಲಿ ವಿಜ್ಞಾನದ ಅಭಿವೃದ್ದಿಯ ವೇಗಕ್ಕೆ ಸ್ಪಂದಿಸಬೇಕಾದರೆ ಶಿಕ್ಷಕರ ಪಾತ್ರ ಬಹಳ ಮುಖ್ಯ. ನಮ್ಮಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಅಗಾಧ ಅಂತರವಿದೆ. ಪ್ರಕೃತಿಯೊಂದಿಗೆ ಅನಂತತೆಯ ಜ್ಞಾನವನ್ನು ಗ್ರಹಿಸುವ ವಿಶ್ವ ಚೇತನರು ನಾವಾದಾಗ ವಿಜ್ಞಾನದ ಪ್ರಗತಿ ಯೊಂದಿಗೆ ತಂತ್ರಜ್ಞಾನ ಮುಂದುವರೆ ಯಲು ಸಾಧ್ಯ ಎಂದು ನೋವಾಸ್ ಎಸ್ಟಿಎಸ್ನ ಡಾ.ಅನಂತ ರೈ ಹೇಳಿದರು.

ಅವರು ಸೋಮವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿಷನ್ ಗ್ರೂಪ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ, ಕರ್ನಾಟಕ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಮಿಜಾರಿನ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಾಲ್ಕು ದಿನಗಳ ಕಾಲ ನಡೆದ ಪದವಿ ಪೂರ್ವ ವಿಜ್ಞಾನ ಬೋಧಕರಿಗೆ ಪುನಶ್ಚೇತನ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ನಮ್ಮ ದೇಶದ ಸಂಸ್ಕೃತಿಯನ್ನು ಗೌರವಿಸುವ ಜಪಾನ್, ತೈವಾನ್, ಶ್ರೀಲಂಕಾ ಮತ್ತಿತರ ರಾಷ್ಟ್ರಗಳು ಭಾರತ ವನ್ನು ಗ್ರಾಹಕನನ್ನಾಗಿ ನೋಡುತ್ತಿವೆಯೇ ಹೊರತು ಉತ್ಪಾದಕ ರಾಷ್ಟ್ರವನ್ನಾಗಿ ನೋಡಿಲ್ಲ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಶೆಟ್ಟಿ ಮಾತನಾಡಿ ಬದಲಾಗುತ್ತಿರುವ ವ್ಯವಸ್ಥೆಯೊಂದಿಗೆ ನಮ್ಮ ಜ್ಞಾನ ಮತ್ತು ಕೌಶಲವನ್ನು ಆಗಿಂದಾಗ ವೃದ್ಧಿಸಿ ಕೊಳ್ಳುವ ಮೂಲಕ ವಿದ್ಯಾರ್ಥಿಗಳ ಸುಂದರ ನಾಳೆಯನ್ನು ನಿರ್ಮಿಸಬೇಕು. ಮಕ್ಕಳನ್ನು ರಾಷ್ಟ್ರೀಯ ಪರೀಕ್ಷೆಗಳಿಗೆ ಸಿದ್ಧಪಡಿಸುವಲ್ಲಿ ನಾವು ಮಾದರಿಯಾ ಗಬೇಕು ಎಂದರು. ನೋವಾಸ್ ಎಸ್ಟಿಎಸ್ನ ರಮೇಶ್ ಪಾಟೀಲ್ ಉಪಸ್ಥಿತರಿದ್ದರು. ಪ್ರಭಾಕರ ಎನ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.