ಬೈಂದೂರು: ಸಜ್ಜನರನ್ನು ಒಂದು ಗೂಡಿಸಿ, ಅವರಲ್ಲಿ ಸಾಹಿತ್ಯ, ಸಂಸ್ಕೃ ತಿಯ ಅನುಭೂತಿಯನ್ನು ಮೂಡಿಸಿ ಸಹೃದಯಿಗಳ ನಿರ್ಮಾಣ ಮಾಡು ವುದು ಆಳ್ವಾಸ್ ನುಡಿಸಿರಿ ವಿರಾಸತ್‌ನ ಪರಮ ಗುರಿ ಎಂದು ಮೂಡು ಬಿದಿರೆ ಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಹೇಳಿದರು.

ಬೈಂದೂರಿನ ಜೆಎನ್‌ಆರ್ ಕಲಾ ಮಂದಿರದಲ್ಲಿ ಶನಿವಾರ ನಡೆದ ಆಳ್ವಾಸ್ ನುಡಿಸಿರಿ ವಿರಾಸತ್‌ನ ಬೈಂದೂರು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತ ನಾಡಿದರು.

ದೇಶದ ಸಾಂಸ್ಕೃತಿಕ ಸಂಪತ್ತನ್ನು ಎಲ್ಲರಿಗೆ ಪರಿಚಯಿಸಬೇಕು. ಆ ಕ್ರಿಯೆ ಯಲ್ಲಿ ಯುವ ಪೀಳಿಗೆಯನ್ನು ಸೇರ್ಪಡೆ ಗೊಳಿಸುವ ಮೂಲಕ ಆ ಸಂಪತ್ತನ್ನು ಮುನ್ನಡೆಸಬೇಕು ಎಂಬ ಆಶಯ ದೊಂದಿಗೆ ಆರಂಭಿಸಿದ ಈ ಅಭಿಯಾನ ವನ್ನು ಈಗ ವಿಸ್ತರಿಸಲಾಗುತ್ತಿದೆ. ವಿದೇಶವೂ ಸೇರಿದಂತೆ ಹಲವೆಡೆ ಘಟಕಗಳನ್ನು ಆರಂಭಿಸಲಾಗುತ್ತಿದೆ ಎಂದರು.

ನುಡಿಸಿರಿಯ ಹತ್ತನೆಯ ವರ್ಷ ಮತ್ತು ವಿರಾಸತ್‌ನ ಇಪ್ಪತ್ತನೆಯ ವರ್ಷವನ್ನು ಡಿಸೆಂಬರ್ 19ರಿಂದ 22ರ ವರೆಗೆ ನಾಲ್ಕು ದಿನ ಮೂಡುಬಿದಿರೆಯಲ್ಲಿ ವಿಶ್ವಮಟ್ಟದಲ್ಲಿ ಆಚರಿಸಲಾಗುವುದು ಎಂದರು.

ಉದ್ಯಮಿ ಆರ್. ಎನ್. ಶೆಟ್ಟಿ ಅವರು ಘಟಕವನ್ನು ಉದ್ಘಾಟಿಸಿ, ವಿಶ್ವ ಸಮ್ಮೇಳನಕ್ಕೆ ಒಂದು ಲಕ್ಷ ರೂಪಾಯಿ ನೆರವು ಘೋಷಿಸಿದರು.
ನರಸಿಂಹ ನಾಯಕ್ ಪ್ರಾರ್ಥನೆ ಹಾಡಿದರು. ನೂತನ ಘಟಕದ ಅಧ್ಯಕ್ಷ ಸುಧಾಕರ ಪಿ. ಬೈಂದೂರು ಸ್ವಾಗ ತಿಸಿದರು. ಗೌರವಾಧ್ಯಕ್ಷ ಓಂ ಗಣೇಶ ಉಪ್ಪುಂದ ಪ್ರಸ್ತಾವನೆಗೈದರು.

ಘಟಕದ ಪರವಾಗಿ ಮೋಹನ ಆಳ್ವ ಅವರನ್ನು ಸನ್ಮಾನಿಸಲಾಯಿತು. ಉಪಾ ಧ್ಯಕ್ಷ ಎಂ. ಗೋವಿಂದ ಸನ್ಮಾನಪತ್ರ ಓದಿದರು.
ರಾಮಕೃಷ್ಣ ದೇವಾಡಿಗ ವಂದಿಸಿದರು. ಪತ್ರಕರ್ತ ಅರುಣ ಕುಮಾರ ಶಿರೂರು ನಿರೂಪಿಸಿದರು. ಕೊಲ್ಲೂರು ಮೂಕಾಂಬಿಕಾ ದೇವ ಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ, ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ, ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಬಿ. ಜಗನ್ನಾಥ ಶೆಟ್ಟಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಯು. ಚಂದ್ರಶಖರ ಹೊಳ್ಳ, ದುಬಾಯಿಯ ಉದ್ಯಮಿ ಎಸ್. ಎಂ. ರಾವ್ ವಿಶೇಷ ಆಹ್ವಾನಿತರಾಗಿದ್ದರು.

ಉದ್ಘಾಟನೆಯ ಬಳಿಕ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕಲಾ ವಿದರು ಮೂರು ತಾಸುಗಳ ಕಾಲ ಪ್ರದ ರ್ಶಿಸಿದ ಮೋಹಿನಿ ಆಟ್ಟಂ, ಪುರು ಲಿಯಾ ಸಿಂಹನೃತ್ಯ, ಬಂಜಾರಾ ಜಾನ ಪದ ನೃತ್ಯ, ಕ್ಯಾಂಡಿಯನ್ ಡಾನ್ಸ್, ಕಥಕ್, ಭರತ ನಾಟ್ಯ, ಲಾವಣಿ ನೃತ್ಯ, ಮಹಿಳಾ ಕಂಸಾಳೆ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಡ್ರಮ್ ಡ್ಯಾನ್ಸ್, ಕೇರಳದ ಒಪ್ಪಣ ನೃತ್ಯ, ಬಡಗು, ತೆಂಕು ತಿಟ್ಟಿನ ಯಕ್ಷಗಾನದ ತುಣುಕುಗಳು, `ದೇವ ವೃದ್ಧರು' ಕಿರುನಾಟಕ ಅವರ ಕಲಾಪ್ರತಿಭೆಯನ್ನು ಸಾಕ್ಷಾತ್ಕರಿಸಿ, ಕಾರ್ಯಕ್ರಮಗಳು ರಂಜಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.