ಶನಿವಾರ, ಅಕ್ಟೋಬರ್ 19, 2019
28 °C

13 ರೋಗಿಗಳಿಗೆ ಉಚಿತ ಕ್ಷೌರ

Published:
Updated:
Prajavani

ಕಾರವಾರ: ಜಿಲ್ಲಾ ಆಸ್ಪತ್ರೆಯಲ್ಲಿ ಹಲವು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿರುವ 13 ಬಡ ರೋಗಿಗಳಿಗೆ ಜನಶಕ್ತಿ ವೇದಿಕೆಯಿಂದ ಬುಧವಾರ ಉಚಿತವಾಗಿ ಕ್ಷೌರ ಮಾಡಿಸಲಾಯಿತು.

ಹಲವು ರೋಗಿಗಳು ನಾನಾ ಕಾರಣಗಳಿಂದ ಆಸ್ಪತ್ರೆಯಲ್ಲೇ ಇದ್ದಾರೆ. ತಲೆಕೂದಲು, ಗಡ್ಡ, ಮೀಸೆ ಉದ್ದಕ್ಕೆ ಬೆಳೆದು ಕಿರಿಕಿರಿ ಅನುಭವಿಸುತ್ತಿದ್ದರು. ಅವರಿಗೆ ನಡೆದಾಡಲು ಸಾಧ್ಯವಾಗದ ಕಾರಣ ಕ್ಷೌರ ಮಾಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಕ್ಷೌರಿಕನನ್ನು ಆಸ್ಪತ್ರೆಗೆ ಕರೆಯಿಸಿ ಆರೈಕೆ ಮಾಡಲಾಯಿತು.

ರೋಗಿಗಳಿಗೆ ಹೊಸ ಬಟ್ಟೆ, ಶ್ಯಾಂಪು, ಸಾಬೂನು ನೀಡಿ ಸ್ವಚ್ಛತೆಯ ಬಗ್ಗೆ ತಿಳಿಸಲಾಯಿತು.

ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತರಕರ್, ಸುರೇಶ್ ನಾಯ್ಕ, ಸಿ.ಎನ್.ನಾಯ್ಕ, ಖೈರುನ್ನೀಸಾ, ಕಾಶಿನಾಥ ನಾಯ್ಕ, ದೀಪಾಶ್ರೀ, ಮಾಧುರಿ ಹುಂಗೇಕರ್, ಫಕೀರಪ್ಪ ಭಂಡಾರಿ, ದೀಪಕ್ ನಾಯ್ಕ, ರಾಜೀವ ನಾಯ್ಕ, ಸಂದೇಶ ನಾಯ್ಕ, ಅಲ್ತಾಫ್ ಶೇಖ್, ಇಬ್ರಾಹಿಂ ಕಲ್ಲೂರು ಇದ್ದರು.

Post Comments (+)