ಶನಿವಾರ, ಮಾರ್ಚ್ 25, 2023
25 °C
ಅಂಗಾರಕ ಸಂಕಷ್ಠಿ: ಇಡಗುಂಜಿಗೆ ಭಕ್ತರ ಮಹಾಪೂರ

35 ಕ್ವಿಂಟಲ್ ಪಂಚಕಜ್ಜಾಯ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊನ್ನಾವರ: ನಾಡಿನ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲೊಂದಾದ ಶ್ರೀಕ್ಷೇತ್ರ ಇಡಗುಂಜಿಯಲ್ಲಿ ಮಂಗಳವಾರ, ಅಂಗಾರಕ ಸಂಕಷ್ಠಿಯ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಶ್ರೀದೇವರ ದರ್ಶನ ಪಡೆದರು.

ಕೋವಿಡ್ ಲಾಕ್ ಡೌನ್ ತೆರವಿನ ನಂತರದ ಮೊದಲ ಅಂಗಾರಕ ಸಂಕಷ್ಠಿ ಇದಾಗಿದ್ದು ನಿರೀಕ್ಷೆಗೂ ಮೀರಿ ಜನ ಪ್ರವಾಹ ಹರಿದುಬಂದಿತು. ರಾತ್ರಿಯ ಪೂಜೆಯಲ್ಲೂ ಹಲವಾರು ಭಕ್ತರು ಪಾಲ್ಗೊಂಡರು. ಗಣಹವನ, ಸತ್ಯಗಣಪತಿ ವ್ರತ, ಪಂಚಾಮೃತ ಅಭಿಷೇಕ ಮೊದಲಾದ ಸೇವೆಗಳನ್ನು ಭಕ್ತರು ದೇವರಿಗೆ ಸಲ್ಲಿಸಿದರು.

'35 ಕ್ವಿಂಟಲ್ ಪಂಚಕಜ್ಜಾಯ ವಿತರಣೆ ಆಯಿತು' ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು