ಶನಿವಾರ, ಮೇ 21, 2022
25 °C
ಅಂಕೋಲಾ: ನ್ಯಾಯಾಧೀಶ ದಿನೇಶ ಅಭಿಮತ

‘ನೌಕರರಿಗೆ ಕರ್ತವ್ಯದ ಅರಿವಿರಬೇಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಂಕೋಲಾ: ಸರ್ಕಾರಿ ಸೇವೆಯಲ್ಲಿರುವವರಿಗೆ ತಮ್ಮ ಕರ್ತವ್ಯದ ಅರಿವಿರಬೇಕು. ಸಮಯ ಪರಿಪಾಲನೆ, ನಿರ್ವಹಿಸಬೇಕಾದ ಕೆಲಸಗಳ ಜವಾಬ್ದಾರಿ ಇದ್ದಾಗ ಮಾತ್ರ ಸರ್ಕಾರಿ ಕಚೇರಿಯಲ್ಲಿ ಕೆಲಸಗಳು ಸುಗಮವಾಗಿ ಸಾಗುತ್ತವೆ ಎಂದು ಜೆಎಂಎಫ್‌ಸಿ ಹಿರಿಯ ನ್ಯಾಯಾಧೀಶ ದಿನೇಶ ಬಿ.ಜೆ. ಹೇಳಿದರು.

ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಸೋಮವಾರ ತಾಲ್ಲೂಕು ವಕೀಲರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಇಲ್ಲಿನ ವಕೀಲರ ಸಂಘ ಸೌಹಾರ್ದತೆಯಿಂದ ಕಾರ್ಯನಿರ್ವಹಿಸುತ್ತಿದೆ. ನ್ಯಾಯಾಲಯದ ನೌಕರರು ಸಮಯಪ್ರಜ್ಞೆ ಕರ್ತವ್ಯ ಬದ್ಧತೆ ಹೊಂದಿದ್ದಾರೆ ಎಂದರು. ಕಿರಿಯ ಸಿವಿಲ್ ನ್ಯಾಯಾಧೀಶ ರಂಗಸ್ವಾಮಿ ಜೆ ಮಾತನಾಡಿದರು.

ಇಬ್ಬರು ನ್ಯಾಯಾಧೀಶರು ವರ್ಗಾವಣೆಗೊಂಡ ಹಿನ್ನೆಲೆ ವಕೀಲರ ಸಂಘದಿಂದ ಸನ್ಮಾನಿಸಲಾಯಿತು.

ಹಿರಿಯ ವಕೀಲರಾದ ಶಾಂತಾ ಹೆಗಡೆ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಬಿಟಿ ನಾಯ್ಕ, ಸರ್ಕಾರಿ ಅಭಿಯೋಜಕ ಗಿರೀಶ ಪಟಗಾರ ಇದ್ದರು. ಪ್ರತಿಭಾ ನಾಯ್ಕ ನಿರೂಪಿಸಿದರು. ವಿ. ಎಸ್ ನಾಯ್ಕ ಸ್ವಾಗತಿಸಿದರು. ವಕೀಲರಾದ ಎಂ.ಪಿ. ಭಟ್, ವಿ.ಎಸ್ ನಾಯಕ, ಉಮೇಶ ನಾಯ್ಕ, ಬಿ.ಡಿ. ನಾಯ್ಕ, ಸುರೇಶ ಬಾನಾವಳಿಕರ ಅನಿಸಿಕೆ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು