ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಂಗ್ಯಚಿತ್ರಕಾರ ಜಿ.ಎಂ.ಬೊಮ್ನಳ್ಳಿಗೆ ‘ಅವಂತಿಕಾ’ ಪುರಸ್ಕಾರ

Last Updated 3 ಮೇ 2019, 12:25 IST
ಅಕ್ಷರ ಗಾತ್ರ

ಶಿರಸಿ: ಸಮಕಾಲೀನ ಕಲೆ-ಕೌಶಲಗಳ ರಾಷ್ಟ್ರೀಯ ಸಂಘಟನೆಯಾಗಿರುವ ‘ಅವಂತಿಕಾ’ವು 2019ನೇ ಸಾಲಿನ ಆವಂತಿಕಾ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಗೌರವ ಪುರಸ್ಕಾರಕ್ಕೆ ಇಲ್ಲಿನ ವ್ಯಂಗ್ಯಚಿತ್ರಕಾರ ಜಿ.ಎಂ.ಬೊಮ್ನಳ್ಳಿ ಅವರನ್ನು ಆಯ್ಕೆ ಮಾಡಿದೆ.

ಮೇ 5ರಂದು ಬೆಂಗಳೂರಿನ ದಯಾನಂದ ಸಾಗರ ವಿಶ್ವವಿದ್ಯಾಲಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುರಸ್ಕಾರ ನೀಡಲಾಗುತ್ತದೆ. ಚಿತ್ರಕಲೆಯ ಅತಿಥಿ ಶಿಕ್ಷಕರಾಗಿ ಶ್ರೀನಿಕೇತನ ಶಾಲೆ, ಎಂಇಎಸ್ ಶಾಲೆ ಹಾಗೂ ಭೈರುಂಬೆ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿ.ಎಂ.ಬೊಮ್ನಳ್ಳಿ ಅವರು ಮಕ್ಕಳಿಗಾಗಿ ರಚಿಸಿರುವ ‘ಸೊನ್ನೆ ಚಿತ್ರ‘ ಪುಸ್ತಕ 15ಸಾವಿರ ಮಕ್ಕಳನ್ನು ತಲುಪಿಸಿದೆ. ಇದನ್ನು ಪರಿಗಣಿಸಿ, ಅವರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ ಅವಂತಿಕಾವು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ತಜ್ಞರು, ತರಬೇತಿದಾರರು, ಕಲಾವಿದರನ್ನು ಗುರುತಿಸಿ ಪುರಸ್ಕಾರ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT