ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಟರಿ ಸ್ಫೋಟ: ಬೆಂಕಿ ಹೊತ್ತಿಕೊಂಡು ಹಾನಿ

Last Updated 14 ಜೂನ್ 2020, 16:00 IST
ಅಕ್ಷರ ಗಾತ್ರ

ಭಟ್ಕಳ: ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೊದಲನೇ ಮಹಡಿಯ ಮನೆಯೊಂದರಲ್ಲಿ ಭಾನುವಾರ ಚಾರ್ಜ್‌ಗೆ ಇಡಲಾಗಿದ್ದ ಎರಡು ಬ್ಯಾಟರಿಗಳು ಸ್ಫೋಟಗೊಂಡಿವೆ. ಇದರಿಂದಬೆಂಕಿ ಹರಡಿ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.

ನೂಹ್ ರುಕ್ನುದ್ದೀನ್ ಎಂಬುವವರ ಮನೆಯಲ್ಲಿ ಈ ಅವಘಡ ನಡೆದಿದೆ. ಅವರ ಪತ್ನಿ ಹಾಗೂ ಮಕ್ಕಳು ತಾಯಿ ಮನೆಗೆ ಹೋಗಿದ್ದರು. ನೂಹ್ ಅವರು ಮನೆಯಲ್ಲೇ ಮಲಗಿದ್ದರು.ಬೆಂಕಿ ತಗುಲಿದ್ದು ಕಂಡು ಮನೆಯಿಂದ ಹೊರಗೆ ಓಡಿ ಬಂದಿದ್ದರಿಂದ ಯಾವುದೇ ಅಪಾಯವಾಗಿಲ್ಲ.

ಬ್ಯಾಟರಿ ಸ್ಫೋಟಗೊಂಡ ಪರಿಣಾಮಮನೆಯ ಗೋಡೆ, ಚಾವಣಿ, ಎ.ಸಿ, ಫ್ಯಾನ್, ಎಲೆಕ್ಟ್ರಾನಿಕ್ ಉಪಕರಣಗಳು, ಮೇಜು, ಕುರ್ಚಿಗಳು, ಅಲಂಕಾರಿಕಾ ವಸ್ತುಗಳಿಗೆ ಹಾನಿಯಾಗಿದೆ.ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು.ಸುತ್ತಮುತ್ತ ಅಂಗಡಿ ಮುಂಗಟ್ಟುಗಳಿಗೆ ಆಗಬಹುದಾಗಿದ್ದಹಾನಿಯನ್ನು ತಪ್ಪಿಸಿದರು.

ಸಿ.ಪಿ.ಐ ದಿವಾಕರ್ ಮತ್ತು ಪೊಲೀಸ್‌ ಸಿಬ್ಬಂದಿ, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT