ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಕಾರವಾರದಲ್ಲಿ ಕಡಲ ಕುತೂಹಲ: ಅರಬ್ಬಿ ಸಮುದ್ರದ ನೀರಿನಲ್ಲಿ ನೀಲಿ ಬೆಳಕು

Last Updated 13 ಮಾರ್ಚ್ 2020, 6:04 IST
ಅಕ್ಷರ ಗಾತ್ರ
ADVERTISEMENT
""
""
""

ಕಾರವಾರ: ತಾಲ್ಲೂಕಿನ ಮಾಜಾಳಿಯಲ್ಲಿ ಸಮುದ್ರದ ನೀರು ಮಿಂಚುಹುಳದ ಬೆಳಕಿನ ಮಾದರಿಯಲ್ಲಿ ಎರಡು ದಿನಗಳಿಂದ ರಾತ್ರಿ ವೇಳೆ ಹೊಳೆಯುತ್ತಿದೆ. ಇದು ಕುತೂಹಲಕ್ಕೆ ಕಾರಣವಾಗಿದೆ.

ಅಲೆಗಳು ಬಂದು ದಡಕ್ಕೆ ಅಪ್ಪಳಿಸಿದಾಗ ನೀಲಿ ಬಣ್ಣದ ಬೆಳಕು ಮೂಡುತ್ತಿದೆ. ನಂತರ ಮಾಯವಾಗುತ್ತಿದೆ. ರಾತ್ರಿಯಿಡೀ ಈ ಪ್ರಕ್ರಿಯೆ ನಡೆಯುತ್ತಿದೆ.

ಈ ಬಗ್ಗೆ 'ಪ್ರಜಾವಾಣಿ'ಗೆ ಮಾಹಿತಿ ನೀಡಿದ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ, 'ಪಾಚಿ (ಆಲ್ಗೆ) ಪ್ರಭೇದದ ಸಮುದ್ರ ಜೀವಿಗಳು ಹೇರಳವಾಗಿ ದಡಕ್ಕೆ ಬಂದಿವೆ. ಅವುಗಳು ಸ್ರವಿಸುವ ರಾಸಾಯನಿಕದಿಂದ ಮಿಂಚುಹುಳದ ಮಾದರಿಯಲ್ಲೇ ಇವುಗಳಲ್ಲೂ ಬೆಳಕು ಹೊರಸೂಸುತ್ತಿದೆ' ಎಂದರು.

ಇವುಗಳನ್ನು ವೈಜ್ಞಾನಿಕವಾಗಿ 'ಡೈನೋಫ್ಲಾಗೆಲೆಟ್ ನಾಕ್ಟಿಲುಕ ಸಿಂಟಿಲನ್ಸ್' (Dinoflagellate Noctiluca scintillans) ಎಂದು ಕರೆಯಲಾಗುತ್ತದೆ. ಒಂದೇ ಜೀವಕೋಶ ಹೊಂದಿರುವ ಇವು, ಸಮುದ್ರದ ಮೇಲ್ಮೈಯಲ್ಲಿರುತ್ತವೆ. ಈ ಜೀವಿಗಳು ತನ್ನಿಂತಾನೇ ಸಂಚರಿಸಲಾರವು. ಅಲೆಗಳಲ್ಲಿ ತೇಲಿಕೊಂಡು ದಡಕ್ಕೆ ಬಂದಿರಬಹುದು.

ಸಮುದ್ರದಲ್ಲಿ ಇವುಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ಕಂಡುಬಂದಾಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇವುಗಳ ಸಂಖ್ಯೆ ಹೆಚ್ಚಾದಾಗ ಸಮುದ್ರದ ನೀರು ಹಸಿರಾಗಿ ಗೋಚರಿಸುತ್ತದೆ.2017ರಿಂದ ಪ್ರತಿವರ್ಷ ಇವು ಕಾರವಾರದ ಕಡಲತೀರದಲ್ಲಿ ಕಂಡುಬರುತ್ತಿರುವುದು ಅಧ್ಯಯನದ ಅಂಶವಾಗಿದೆ. ಈ ನಿಟ್ಟಿನಲ್ಲಿ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ ವರ್ಷಚೆನ್ನೈ ಸಮುದ್ರ ತೀರದಲ್ಲಿ ಇಂಥದ್ದೇ ನೀಲಿ ಬೆಳಕು ಕಂಡುಬಂದಿತ್ತು.ಬೆಳಕಿನ ರೇಖೆಗಳ ಚಿತ್ರಗಳು ಮತ್ತು ವಿಡಿಯೊ ತುಣುಕುಗಳುಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದವು.

ಸೂಕ್ಷ್ಮದರ್ಶಕದಲ್ಲಿ ಪಾಚಿ (ಆಲ್ಗೆ) ಪ್ರಭೇದದ ಸಮುದ್ರ ಜೀವಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT