ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಸಮಾನತೆ ಸರಿದೂಗಿಸುವ ಪ್ರಯತ್ನ’

Last Updated 5 ಜುಲೈ 2019, 15:47 IST
ಅಕ್ಷರ ಗಾತ್ರ

ಶಿರಸಿ: ಹೊಸ ಆರ್ಥಿಕ ನೀತಿಯಿಂದ ಅಸಮಾನತೆ ಸೃಷ್ಟಿಯಾಗುತ್ತಿದೆ ಎಂಬ ದೂರನ್ನು ಗಮನದಲ್ಲಿಟ್ಟು, ಕೇಂದ್ರ ಬಜೆಟ್‌ನಲ್ಲಿ ಸಾಮಾಜಿಕ, ಆರ್ಥಿಕ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ನಡೆದಿದೆ.

ಆದಾಯ ತೆರಿಗೆ ಮಿತಿ ಹೆಚ್ಚಳ ಪ್ರಶಂಸನೀಯ. ₹ 5 ಲಕ್ಷಕ್ಕೂ ಮೇಲಿನ ಆದಾಯಕ್ಕೆ ಸಲ್ಲಿಸುವ ತೆರಿಗೆಯ ಬಗ್ಗೆ ಸ್ಪಷ್ಟತೆಯಿಲ್ಲ. ₹ 2 ಕೋಟಿ ಮೇಲಿನ ಆದಾಯಕ್ಕೆ ಸ್ಲ್ಯಾಬ್ ಮಾಡಿ, ಅಸಮಾನತೆ ಸರಿದೂಗಿಸುವ ಪ್ರಯತ್ನ ಮಾಡಲಾಗಿದೆ.

₹ 400 ಕೋಟಿವರೆಗೆ ಆದಾಯ ಹೊಂದಿರುವ ಕಾರ್ಪೊರೆಟ್ ಕಂಪನಿಗಳ ತೆರಿಗೆಯನ್ನು ಶೇ 25ಕ್ಕೆ ಇಳಿಸಲಾಗಿದೆ. ಶೇ 99ರಷ್ಟು ಕಂಪನಿಗಳಿಗೆ ಲಾಭವಾಗುವುದರಿಂದ ಕಾರ್ಪೊರೆಟ್ ಬೆಳವಣಿಗೆಗೆ ಇದು ಸಹಕಾರಿಯಾಗಿದೆ. ನಗದು ವಹಿವಾಟಿಗೆ ₹ 1ಕೋಟಿ ಮಿತಿ ನಿಗದಿಪಡಿಸಿರುವುದು ಕಪ್ಪು ಹಣ ನಿಯಂತ್ರಣಕ್ಕೆ ಸಹಕಾರಿಯಾಗಿದೆ.

–ಪ್ರೊ. ಆರ್.ಎಲ್.ಕನಕ, ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT