ಶತಮಾನೋತ್ಸವ ಸಮಾರೋಪ 8ಕ್ಕೆ

ಬುಧವಾರ, ಜೂಲೈ 24, 2019
24 °C
ಸ್ಮರಣ ಸಂಚಿಕೆ ಬಿಡುಗಡೆ, ವಾರ್ಷಿಕ ಸಭೆ

ಶತಮಾನೋತ್ಸವ ಸಮಾರೋಪ 8ಕ್ಕೆ

Published:
Updated:
Prajavani

ಶಿರಸಿ: ತಾಲ್ಲೂಕಿನ ಭೈರುಂಬೆಯ ಹುಳಗೋಳ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ವರ್ಷಾಚರಣೆಯ ಸಮಾರೋಪವು ಜುಲೈ 8ರಂದು ನಡೆಯಲಿದೆ ಎಂದು ಸಂಘದ ಅದ್ಯಕ್ಷ ವಿ.ಎಸ್.ಹೆಗಡೆ ತಿಳಿಸಿದರು.

ಗುರುವಾರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಅಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಘೋಟ್ನೇಕರ, ಸಹಕಾರ ಸಂಘಗಳ ಜಂಟಿ ನಿಬಂಧಕ ವೆಂಕಟಸ್ವಾಮಿ, ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಂ.ಕೆ.ನಾಯ್ಕ ಭಾಗವಹಿಸುವರು. ಮಧ್ಯಾಹ್ನ 3ಕ್ಕೆ ವಾರ್ಷಿಕ ಸಭೆ, ಸಂಜೆ 6ರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ’ ಎಂದರು.

ಆರ್ಥಿಕ ವರ್ಷದ ಅಂತ್ಯದಲ್ಲಿ ಸಂಘ ₹ 82.65 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ 15 ಲಾಭಾಂಶ ವಿತರಿಸಲು ನಿರ್ಧರಿಸಲಾಗಿದೆ. ಬರತಕ್ಕ ಸಾಲ ₹ 35.39 ಕೋಟಿ ಇದ್ದು, ಶೇ 98.46ರಷ್ಟು ವಸೂಲು ಆಗಿದೆ. ಮುಂದಿನ ಯೋಜನೆಯಡಿ ಈ ಭಾಗದಲ್ಲಿ 40 ಕೆರೆಗಳನ್ನು ಗುರುತಿಸಿ, ಹೂಳೆತ್ತಲಾಗುವುದು. ಕೆರೆ ನೀರು ತುಂಬಿಸುವ ಸಮಗ್ರ ಯೋಜನೆಯನ್ನು ಸರ್ಕಾರದ ಸಹಭಾಗಿತ್ವದಲ್ಲಿ ಮಾಡಲು ಯೋಚಿಸಲಾಗಿದೆ. ಅಡಿಕೆಗೆ ಪೂರಕವಾಗಿ ಬಿದಿರು ಹಾಗೂ ಇತರ ಬೆಳೆಗಳನ್ನು ಬೆಟ್ಟದಲ್ಲಿ ಬೆಳೆಸುವ ಪ್ರಯತ್ನ ನಡೆದಿದ್ದು, ಸರ್ಕಾರ, ಅರಣ್ಯ ಇಲಾಖೆ ಒಪ್ಪಿಗೆ ಪಡೆಯಲಾಗುವುದು. ಕೃಷಿಗೆ ಇರುವ ಪಂಪ ಬದಲಾಗಿ ಕೇಂದ್ರ ಸರ್ಕಾರದ ಯೋಜನೆಯಡಿ ಸ್ಮಾರ್ಟ್ ಪಂಪ್ ಕೊಡಿಸಲು ಪ್ರಯತ್ನಿಸಲಾಗುವುದು. ಈ ಭಾಗದಲ್ಲಿ ಕಾಳುಮೆಣಸು ಬೆಳೆ 100 ಕ್ವಿಂಟಲ್‌ನಿಂದ 1000 ಕ್ವಿಂಟಲ್‌ಗೆ ಏರಿಕೆಯಾಗಿದೆ ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಆರ್.ಎಸ್.ಭಟ್ಟ, ನಿರ್ದೇಶಕರಾದ ಭಾಸ್ಕರ ಹೆಗಡೆ, ವಿಶ್ವನಾಥ ಹೆಗಡೆ, ಆರ್.ಎ.ಭಟ್ಟ, ಮುಖ್ಯಕಾರ್ಯನಿರ್ವಣಾಧಿಕಾರಿ ಜಿ.ಎಂ.ಹೆಗಡೆ ಮಾತ್ನಳ್ಳಿ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !