ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಾಂಶ ಕೃಷಿಯಲ್ಲಿ ‘ಚಿತ್ರಮೂಲ’

ಖಾಸಗಿ ಪ್ರಯೋಗಾಲಯದಲ್ಲಿ ಅಭಿವೃದ್ಧಿ
Last Updated 19 ಜುಲೈ 2019, 14:10 IST
ಅಕ್ಷರ ಗಾತ್ರ

ಶಿರಸಿ: ವಿನಾಶದಂಚಿನಲ್ಲಿರುವ ಪಶ್ಚಿಮಘಟ್ಟದ ಔಷಧ ಸಸ್ಯ ಪ್ರಭೇದಗಳನ್ನು ಅಂಗಾಂಶ ಕೃಷಿ ಮೂಲಕ ಪುನರುತ್ಪಾದಿಸುವ ಸಸ್ಯ ಅಂಗಾಂಶ ಕೃಷಿ ಪ್ರಯೋಗಾಲಯವು ‘ಚಿತ್ರಮೂಲ‘ ಔಷಧ ಗಿಡಗಳನ್ನು ಸಾವಿರ ಸಂಖ್ಯೆಯಲ್ಲಿ ಬೆಳೆಸಿದೆ.

ನೋವು ನಿವಾರಕ ಔಷಧ ತಯಾರಿಕೆಯಲ್ಲಿ ಬಳಕೆಯಾಗುವ ಈ ಸಸ್ಯದ ಕುರಿತು ಪ್ರಯೋಗಾಲಯದ ವ್ಯವಸ್ಥಾಪಕ ನಿರ್ದೇಶಕ ವಿನಯ ಹೆಗಡೆ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಗಜಾನನ ಹೆಗಡೆ ಕುಟುಂಬದವರು ಸ್ಥಾ‍ಪಿಸಿರುವ ಭಂಡಿಮನೆ ಲೈಫ್ ಸೈಯನ್ಸ್ ರಿಸರ್ಚ್ ಫೌಂಡೇಷನ್ ಅಡಿಯಲ್ಲಿ ಪ್ರಯೋಗಾಲಯ ನಡೆಯುತ್ತಿದೆ. ಅಂಗಾಂಶ ಕೃಷಿಯ ಜಿಲ್ಲೆಯ ಮೊದಲ ಖಾಸಗಿ ಪ್ರಯೋಗಾಲಯ ಇದು. ಇಲ್ಲಿ ಅಂಗಾಂಶ ಕೃಷಿ, ಸಸ್ಯ ರಸಾಯನ ವಿಜ್ಞಾನ, ಜೀವ ರಸಾಯನ ವಿಜ್ಞಾನದ ಪ್ರಯೋಗಗಳು ನಡೆಯುತ್ತವೆ. ಸಂರಕ್ಷಣಾ ಜೀವಶಾಸ್ತ್ರಜ್ಞ ಡಾ. ಕೇಶವ ಕೊರ್ಸೆ ಇದಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.

ಚಿತ್ರಮೂಲ, ವೆನಿಲ್ಲಾ, ವಿವಿಧ ಜಾತಿಯ ಆರ್ಕಿಡ್, ಸಿಮಾರೂಬಾ, ಬೆಣ್ಣೆ ಹಣ್ಣು, ಡ್ರಾಗನ್ ಫ್ರುಟ್ ಸೇರಿದಂತೆ 25ಕ್ಕೂ ಹೆಚ್ಚು ಜಾತಿ ಔಷಧ ಗಿಡ, ಸಾಂಬಾರು ಬೆಳೆ, ಕೃಷಿ ಅರಣ್ಯ, ಅಪರೂಪದ ಗಿಡಮೂಲಿಕೆಗಳ ಕುರಿತು ಪ್ರಯೋಗಗಳು ನಡೆಯುತ್ತಿವೆ. ಜೈವಿಕ ತಂತ್ರಜ್ಞಾನದ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಪ್ರಯೋಗಾಲಯ ಮತ್ತು ತರಬೇತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸ್ಥಳಾವಕಾಶ ಆಧರಿಸಿ, ಎಂಎಸ್ಸಿ, ಬಿ.ಟೆಕ್, ಎಂ.ಟೆಕ್ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು. ಪ್ರಯೋಗಾಲಯದ ಗಿಡಗಳನ್ನು ಬೆಳೆಸಲು ವಿಶಾಲವಾದ ಹಸಿರು ಮನೆ, ನರ್ಸರಿ ಸೌಲಭ್ಯವೂ ಇದೆ ಎಂದು ಹೇಳಿದರು. ಸಂಸ್ಥಾಪಕ ಟ್ರಸ್ಟಿ ವಿ.ಜಿ.ಬಂಡಿ, ಜೈವಿಕ ತಂತ್ರಜ್ಞಾನ ಮಾರ್ಗದರ್ಶಕಿ ವಿಂದ್ಯಾ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT