ಶನಿವಾರ, ಜುಲೈ 2, 2022
26 °C

ಯೂಟ್ಯೂಬ್ ವಿಡಿಯೊಕ್ಕಾಗಿ ಚೆಲ್ಲಾಟ: ಯುವಕನಿಗೆ ಕಚ್ಚಿದ ನಾಗರಹಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಇಲ್ಲಿನ ಕಸ್ತೂರಬಾ ನಗರದ ಯುವಕ ಮಾಝ್ ಸೈಯ್ಯದ್ (21) ಎಂಬ ಉರಗ ಪ್ರೇಮಿ, ಯೂಟ್ಯೂಬ್‌ಗೆ ವಿಡಿಯೊ ಮಾಡಿ ಹಾಕಲು ತಾವು ಹಿಡಿದ ಮೂರು ನಾಗರಹಾವುಗಳ ಜತೆ ಆಡುತ್ತಿದ್ದಾಗ ಹಾವೊಂದು ಕಚ್ಚಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮಾ.13 ರಂದು ತಾಲ್ಲೂಕಿನ ದೇವರಹೊಳೆ ಬಳಿ ಘಟನೆ ನಡೆದಿತ್ತು. ಕಡಿತಕ್ಕೊಳಗಾದ ಯುವಕನನ್ನು ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

‘ಉರಗ ರಕ್ಷಣೆ ಮಾಡುವುದು ಹವ್ಯಾಸ. ಒಂದೇ ದಿನ ಮೂರು ಹಾವುಗಳನ್ನು ರಕ್ಷಿಸಿದ್ದೆ. ಅವುಗಳನ್ನು ಬಿಡುವ ಮುನ್ನ ವಿಡಿಯೊ ಮಾಡಿ ಯೂಟ್ಯೂಬ್‍ಗೆ ಅಪ್ಲೋಡ್ ಮಾಡುವ ಸಲುವಾಗಿ ಆಟವಾಡುವ ದೃಶ್ಯ ಸೆರೆಹಿಡಿಯುತ್ತಿದ್ದಾಗ ಘಟನೆ ನಡೆದಿದೆ. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದೇನೆ’ ಎಂದು ಮಾಝ್ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ್ದಾರೆ.

ಈ ಹಾವು ಕಡಿತದ ದೃಶ್ಯವನ್ನು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ. ಹಾವುಗಳ ಜತೆ ಸರಸವಾಡದಂತೆ ಸಾರ್ವಜನಿಕರಿಗೆ ಎಚ್ಚರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು