ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿ ಜೋಡಣೆ ವಿರೋಧಿಸಿ ಸಮಾವೇಶ: ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

ಸಮಾಲೋಚನಾ ಸಭೆ
Last Updated 10 ಮೇ 2022, 13:53 IST
ಅಕ್ಷರ ಗಾತ್ರ

ಶಿರಸಿ: ಸರ್ಕಾರ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಕೈ ಬಿಡಬೇಕು. ಈ ನಿಟ್ಟಿನಲ್ಲಿ ಒತ್ತಡ ಹೇರಲು ಜೂನ್ ಮೊದಲ ವಾರ ಜನ ಸಮಾವೇಶ ನಡೆಸಲಾಗುವುದು ಎಂದು ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಬೇಡ್ತಿ ಅಘನಾಶಿನಿಕೊಳ್ಳ ಸಂರಕ್ಷಣಾ ಸಮಿತಿಯ ನಿರ್ಣಯ ಸ್ಪಷ್ಟಪಡಿಸಿದರು.

ಮಠದ ಸಭಾಂಗಣದಲ್ಲಿ ಮಂಗಳವಾರ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಜನಾಂದೋಲನದ ಮೂಲಕ ಯೋಜನೆಯ ವಿರುದ್ಧ ಅಭಿಪ್ರಾಯ ಸಂಗ್ರಹವಾಗಬೇಕು. ಜನ ಜಾಗೃತಿ ಕಾರ್ಯಗಳ ಮೂಲಕ ಬೇಡ್ತಿ ಕಣಿವೆ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ಸಮಿತಿಯ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ, ನದಿ ಜೋಡಣೆ ಯೋಜನೆಯ ವಿಸ್ತೃತ ಯೋಜನಾ ವರದಿಯಲ್ಲಿ ಹಲವು ಲೋಪದೋಷಗಳಿವೆ. ಸಮೀಕ್ಷೆ ನಡೆಸದೇ ವಿವರ ಯೋಜನಾ ವರದಿ ಸಿದ್ಧಪಡಿಸಲಾಗಿದ್ದು ಸರ್ಕಾರ ಡಿ.ಪಿ.ಆರ್ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಭೂ ವಿಜ್ಞಾನಿ ಡಾ.ಜಿ.ವಿ. ಹೆಗಡೆ ಮಾತನಾಡಿ, ಶಾಲ್ಮಲಾ ಮತ್ತು ಬೇಡ್ತಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಬೇಡ್ತಿ–ವರದಾ ಯೋಜನೆ ಜಾರಿ ಸಾಧ್ಯವಾಗದು. ಇದರಿಂದ ಅಪಾರ ಅರಣ್ಯ ನಾಶವಾಗಲಿದೆ ಎಂದರು.

ಆರ್.ಎಸ್.ಹೆಗಡೆ ಭೈರುಂಬೆ, ರಮಾಕಾಂತ ಮಂಡೇಮನೆ, ಕೆ.ವಿ.ಭಟ್, ಜಿ.ಟಿ.ಹೆಗಡೆ ಹೊಸಬಾಳೆ, ನಾರಾಯಣ ಭಟ್ರಕೇರಿ, ಅನಂತ ಭಟ್ ಹುಳಗೋಳ, ಡಾ.ಗೋಪಾಲ ಹೆಗಡೆ ಕೋಸಗುಳಿ, ಸುರೇಶ, ಸುಬ್ಬಣ್ಣ ಬೋಳ್ಮನೆ, ಡಿ.ಟಿ.ಹೆಗಡೆ ಗುಂದ, ಪ್ರಸನ್ನ ಗಾಂವ್ಕರ್ ವಾಗಳ್ಳಿ, ಇತರರು ಇದ್ದರು. ಬೇಡ್ತಿ ಸಮಿತಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT