ಮಂಗಳವಾರ, ಜುಲೈ 5, 2022
24 °C

ದಾಂಡೇಲಿ: ಯುವಕನನ್ನು ಎಳೆದೊಯ್ದ ಮೊಸಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾಂಡೇಲಿ (ಉತ್ತರ ಕನ್ನಡ ಜಿಲ್ಲೆ): ಕೆಲಸ ಮುಗಿಸಿ ಇಲ್ಲಿನ ಕಾಳಿ ನದಿಯಲ್ಲಿ ಕೈತೊಳೆಯಲು ಹೋದ ಪಟೇಲ ನಗರದ ನಿವಾಸಿ ಹರ್ಷದ್‌ಖಾನ್ ರಾಯಚೂರು (24) ಎಂಬಾತನನ್ನು ಸೋಮವಾರ ಸಂಜೆ ಮೊಸಳೆ ಎಳೆದುಕೊಂಡು ಹೋಗಿದೆ.

‘ನದಿಯಲ್ಲಿದ್ದ ಮೊಸಳೆ ಏಕಾಏಕಿ ಯುವಕನ ಮೇಲೆ ದಾಳಿ ಮಾಡಿ,ಎಳೆದುಕೊಂಡು ಹೋಗಿದೆ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೋಲಿಸರು ಧಾವಿಸಿ ನದಿಯಲ್ಲಿ ಯುವಕನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

ಕಳೆದ ಅಕ್ಟೋಬರ್ ನಲ್ಲಿ ಇಲ್ಲಿನ ವಿನಾಯಕ ನಗರದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಈಚೆಗೆ ನದಿ ಅಂಚಿನ ಜನರ ಮೇಲೆ ಮೊಸಳೆ ದಾಳಿ ಹೆಚ್ಚುತ್ತಿದ್ದು ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು