ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಹಾಲು ಒಕ್ಕೂಟ: ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಒತ್ತಾಯ

Last Updated 28 ಫೆಬ್ರುವರಿ 2020, 13:52 IST
ಅಕ್ಷರ ಗಾತ್ರ

ಶಿರಸಿ: ರಾಜ್ಯ ಸರ್ಕಾರ ಮಂಡಿಸುವ ಬಜೆಟ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚಿಸುವ ಸಂಬಂಧ ವಿಶೇಷ ಅನುದಾನ ಕಾಯ್ದಿಡಬೇಕು ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಶುಕ್ರವಾರ ಇಲ್ಲಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮೂಲಕ ಮುಖ್ಯಮಂತ್ರಿ ಬಳಿ ಈ ಬೇಡಿಕೆಯನ್ನು ಇಡಲಾಗಿದೆ. ಕರಾವಳಿ, ಮಲೆನಾಡು, ಅರೆಮಲೆನಾಡು ಒಳಗೊಂಡ ವಿಶಿಷ್ಟ ಜಿಲ್ಲೆಯಿದೆ. ಇಲ್ಲಿ ಶೇ 75ರಷ್ಟು ಜನರು ಕೃಷಿಯನ್ನೇ ನಂಬಿಕೊಂಡಿದ್ದಾರೆ. ಉಪ ಉದ್ಯೋಗವಾಗಿ ಹೈನುಗಾರಿಕೆ ನಡೆಸುತ್ತಾರೆ. ಪ್ರತಿವರ್ಷ ಹಾಲಿನ ಉತ್ಪಾದನೆ ಹಾಗೂ ಮಾರಾಟದಲ್ಲಿ ಶೇ 18ರಷ್ಟು ಏರಿಕೆಯಾಗುತ್ತಿದೆ. ಜಿಲ್ಲೆಯಲ್ಲಿ 250 ಹಾಲು ಉತ್ಪಾದಕ ಸಹಕಾರಿ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿರುವ ಒಟ್ಟು 1200 ಗ್ರಾಮಗಳಲ್ಲಿ ಶೇ 55ರಷ್ಟು ಗ್ರಾಮಗಳನ್ನು ಮಾತ್ರ ಸಂಘಗಳಿವೆ. ಪ್ರತ್ಯೇಕ ಒಕ್ಕೂಟ ರಚನೆಯಾದರೆ, ಪ್ರತಿ ಗ್ರಾಮದಲ್ಲಿ ಹಾಲು ಸಂಘ ಪ್ರಾರಂಭಿಸಿಲು ಸಾಧ್ಯವಿದೆ’ ಎಂದರು.

ಜಿಲ್ಲೆಯಲ್ಲಿ ದಿನವೊಂದಕ್ಕೆ 2ಲಕ್ಷ ಲೀಟರ್‌ನಷ್ಟು ಹಾಲು ಉತ್ಪಾದನೆಯಾಗುತ್ತದೆ. ಅಷ್ಟೇ ಪ್ರಮಾಣ ಹಾಲು ಮಾರಾಟವಾಗುತ್ತದೆ. ಅಂದಾಜಿನ ಪ್ರಕಾರ 2.75 ಲಕ್ಷ ರಾಸುಗಳು, 73ಸಾವಿರ ಎಮ್ಮೆಗಳು ಇವೆ. ಎಲ್ಲ ಗ್ರಾಮಗಳಲ್ಲಿ ಧಾರವಾಡ ಹಾಲು ಒಕ್ಕೂಟದ ಹಾಲು ಸಂಘಗಳು ಇಲ್ಲದ ಕಾರಣ ಹಾಲನ್ನು ಖಾಸಗಿ ಡೇರಿಗಳು ಖರೀದಿಸುತ್ತಿವೆ. ಇದರಿಂದ ಹೈನುಗಾರರಿಗೆ ಸರ್ಕಾರ ನೀಡುವ ₹ 5 ಪ್ರೋತ್ಸಾಹಧನ ನಷ್ಟವಾಗುತ್ತಿದೆ. ಹೊಸ ಒಕ್ಕೂಟ ರಚನೆಯಾದರೆ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಹೇಳಿದರು. ಒಕ್ಕೂಟದ ನಿರ್ದೇಶಕರಾದ ಪಿ.ವಿ.ನಾಯ್ಕ, ಶಂಕರ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT