ಗುರುವಾರ , ಜೂನ್ 24, 2021
25 °C

ಶಿರಸಿ: ದನದ ಮಾಂಸ ಸಾಗಿಸುತ್ತಿದ್ದ ಐವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಹಾನಗಲ್ ತಾಲ್ಲೂಕಿನ ಅಕ್ಕಿಆಲೂರಿನಿಂದ ಶಿರಸಿ ಮಾರ್ಗವಾಗಿ ಸೊರಬ, ಶಿವಮೊಗ್ಗ ಕಡೆಗೆ ಸಾಗಿಸಲು ಯತ್ನಿಸಿದ ಐವರನ್ನು ವಾಹನ ಸಮೇತ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ನರೇಬೈಲ ಕ್ರಾಸ್ ಬಳಿ ಪೊಲೀಸರು ವಾಹನ ತಡೆದು ತಪಾಸಣೆ ನಡೆಸಿದ್ದರು. ಈ ವೇಳೆ ಓಮ್ನಿ ವಾಹನದಲ್ಲಿ ಒಂದು ಕ್ವಿಂಟಲ್ 95 ಕೆಜಿ ದನದ ಮಾಂಸ ಮತ್ತು ಚರ್ಮವನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿತ್ತು.

ಆರೋಪಿಗಳಾದ ಅಕ್ಕಿಆಲೂರಿನ ಸಲೀಂಬಾಷಾ ಬಹದ್ದೂರ, ಜಾವೇದ ಬೇಪಾರಿ, ಖಾಜಾಮುದ್ದಿನ ಬೇಪಾರಿ, ಸಲೀಂ ಬೇಪಾರಿ ಹಾಗೂ ಶಿರಸಿಯ ಮುಸ್ಲಿಂಗಲ್ಲಿಯ ಖಲೀಲುಲ್ಲಾ ಶೇಖ ಇವರನ್ನು ಬಂಧಿಸಲಾಗಿದೆ.

ಬಂಧಿತರಿಂದ 44,500 ರೂಪಾಯಿ ಮೌಲ್ಯದ ದನದ ಮಾಂಸ ಮತ್ತು ಎರಡು ಲಕ್ಷ ರೂಪಾಯಿ ಮೌಲ್ಯದ ವಾಹನ ಜಪ್ತಿ ಮಾಡಲಾಗಿದೆ ಎಂದು ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು