ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು ಸಮಸ್ಯೆಗೆ ಸ್ಪಂದಿಸಲು ಆ್ಯಪ್

ತಂತ್ರಾಂಶ ಅಭಿವೃದ್ಧಿಗೆ ಎನ್ಐಸಿಗೆ ಜಿಲ್ಲಾಡಳಿತದಿಂದ ಸೂಚನೆ: ಜಿಲ್ಲಾಧಿಕಾರಿ ಡಾ.ಹರೀಶಕುಮಾರ್
Last Updated 2 ಮೇ 2019, 13:25 IST
ಅಕ್ಷರ ಗಾತ್ರ

ಕಾರವಾರ:‘ಜಿಲ್ಲೆಯಲ್ಲಿ ಉದ್ಭವಿಸುವ ಕುಡಿಯುವ ನೀರಿನ ಸಮಸ್ಯೆಗೆ ಕಾಲಮಿತಿಯೊಳಗೆ ಸ್ಪಂದಿಸಿ, ಪರಿಹಾರ ನೀಡುವ ನಿಟ್ಟಿನಲ್ಲಿ ಮೊಬೈಲ್ ಆ್ಯಪ್‌ ಒಂದನ್ನು ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿದೆ. ಇದಕ್ಕೆ ಅಗತ್ಯ ತಂತ್ರಾಂಶಅಭಿವೃದ್ಧಿ ಪಡಿಸುವಂತೆ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕೇಂದ್ರಕ್ಕೆ (ಎನ್‌ಐಸಿ) ತಿಳಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಸಿ–ವಿಜಿಲ್ ಆ್ಯಪ್‌ ಮೂಲಕ 100 ನಿಮಿಷಗಳಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗಿದೆ. ಹಾಗಿರುವಾಗ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೂ ತಂತ್ರಜ್ಞಾನದ ಮೂಲಕ ಸ್ಪಂದಿಸಲು ಯಾಕೆ ಸಾಧ್ಯವಿಲ್ಲ ಎಂದುಚರ್ಚಿಸಿದ್ದೇವೆ. ಇದು ನಗರ ಭಾಗದಲ್ಲಿ ಒಳ್ಳೆಯ ಯೋಜನೆಯಾದೀತು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ156 ಗ್ರಾಮ ಪಂಚಾಯ್ತಿಗಳ 332 ಪ್ರದೇಶಗಳ 668 ಮಜರೆಗಳಲ್ಲಿ ಈ ಬಾರಿ ನೀರಿನ ಸಮಸ್ಯೆಯಾಗಬಹುದು ಎಂದುಊಹಿಸಲಾಗಿದೆ. ಆ ಭಾಗಗಳಲ್ಲಿ 304 ಗ್ರಾಮಗಳ ಪಂಚಾಯ್ತಿಗಳ 427 ಕೊಳವೆಬಾವಿಗಳು, 112 ತೆರೆದ ಬಾವಿಗಳು ಹಾಗೂ 10 ಇತರ ಜಲಮೂಲಗಳನ್ನು ಗುರುತಿಸಲಾಗಿದೆ. ಅವುಗಳನ್ನು ಅಗತ್ಯವಿದ್ದರೆ ಬಳಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಮಾತನಾಡಿ, ‘ಐದು ವರ್ಷಗಳ ಅವಧಿಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದ 933 ಕೆಲಸಗಳು ಬಾಕಿಯಿದ್ದವು. ಅವುಗಳ ಪೈಕಿ ಒಂದು ವರ್ಷದ ಅವಧಿಯಲ್ಲಿ 908 ಈಗಾಗಲೇ ಪೂರ್ಣಗೊಂಡಿವೆ. ಇದು ರಾಜ್ಯದಲ್ಲೇ ಅಧಿಕವಾಗಿದೆ. ಉಳಿದವುಗಳನ್ನೂ ಇನ್ನು ಏಳು ತಿಂಗಳ ಒಳಗಾಗಿಮುಕ್ತಾಯಗೊಳಿಸಲು ಗುರಿ ಹಾಕಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಈಗಕುಡಿಯುವ ನೀರಿನ ತೀರಾ ಸಮಸ್ಯೆ ಎದುರಿಸುತ್ತಿರುವ ಪ್ರದೇಶದ ಜನರು ತಮ್ಮ ವ್ಯಾಪ್ತಿಯ ನಿಯಂತ್ರಣ ಕೊಠಡಿಗೆ ಕರೆ ಮಾಡಬಹುದು. ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲಿ‌ಸಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ ಎಂದರು.

‘ಈ ವರ್ಷ ಜಿಲ್ಲೆಯಲ್ಲಿ 4,953 ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯ ಕೆಲಸಗಳನ್ನು ಹಮ್ಮಿಕೊಳ್ಳಲಾಗುವುದು. 593 ಕಿರು ಅಣೆಕಟ್ಟೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅದಲ್ಲದೇ ಕುಡಿಯುವ ನೀರಿನ ಕಾಮಗಾರಿಗೆಂದೇ ಪ್ರತಿ ಗ್ರಾಮ ಪಂಚಾಯ್ತಿಯಲ್ಲೂ ತಲಾ ₹ 2 ಲಕ್ಷ ಮೀಸಲಿಡುವಂತೆ ಸೂಚಿಸಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು ₹ 5.36 ಕೋಟಿ ಮೊತ್ತ ಮೀಸಲಿಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.‌

ಗಂಗಾವಳಿಯಲ್ಲಿ ಮತ್ತಷ್ಟು ಇಳಿಕೆ:ಕಾರವಾರ, ಅಂಕೋಲಾ, ವಿವಿಧ ಗ್ರಾಮಗಳು ಮತ್ತು ಸೀಬರ್ಡ್ ನೌಕಾನೆಲೆಗೆ ಕುಡಿಯುವ ನೀರು ಪೂರೈಕೆ ಮಾಡುವ ಗಂಗಾವಳಿ ನದಿಯಲ್ಲಿ ನೀರಿನ ಸಂಗ್ರಹವು ಗುರುವಾರ 0.4 ಮೀಟರ್‌ಗೆ ಇಳಿದಿದೆ. ಪಂಪ್‌ಗಳಫೂಟ್‌ವಾಲ್ವ್‌ಗೂ ಸಿಗದ ಹಂತಕ್ಕೆ ಬಂದಿದೆ. ಆದ್ದರಿಂದ ಎರಡು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತದೆ ಎಂದು ನಗರಸಭೆ ಆಯುಕ್ತ ಯೋಗೇಶ್ವರ್ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್ ಸಿಂಗ್ರೇರ್, ನಗರಾಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕ ವಿನಾಯಕ ಇದ್ದರು.

**
ಕುಡಿಯುವ ನೀರಿಗೆ ನಿಯಂತ್ರಣ ಕೊಠಡಿಗಳು

ಜಿಲ್ಲಾಧಿಕಾರಿ ಕಚೇರಿ: ದೂರವಾಣಿ ಸಂಖ್ಯೆ
ಜಿಲ್ಲಾಧಿಕಾರಿ ಕಚೇರಿ: 08382 229857
ಜಿಲ್ಲಾಧಿಕಾರಿ ಕಚೇರಿ: ವ್ಯಾಟ್ಸ್ ಆ್ಯಪ್ ಸಂಖ್ಯೆ: 94835 11015
ಜಿಲ್ಲಾಧಿಕಾರಿ ಕಚೇರಿ: ಟೋಲ್‌ಫ್ರೀ ಸಂಖ್ಯೆ: 1077

**
ತಹಶೀಲ್ದಾರರ ಕಚೇರಿ: ದೂರವಾಣಿ ಸಂಖ್ಯೆ
ಕಾರವಾರ: 08382 226331
ಅಂಕೋಲಾ: 08388 230243
ಕುಮಟಾ: 08386 222054
ಹೊನ್ನಾವರ: 08387 220262
ಭಟ್ಕಳ: 08385 226422
ಶಿರಸಿ: 08384 226383
ಸಿದ್ದಾಪುರ: 08389 230127
ಯಲ್ಲಾಪುರ: 08419 261129
ಮುಂಡಗೋಡ: 08301 222122
ಹಳಿಯಾಳ: 08284 220134
ಜೊಯಿಡಾ: 08383 282723

**
ನಗರ, ಪಟ್ಟಣ ಪ್ರದೇಶದಲ್ಲಿ ಸಹಾಯವಾಣಿ
ಸ್ಥಳೀಯ ಸಂಸ್ಥೆ: ಅಧಿಕಾರಿಗಳ ದೂರವಾಣಿ ಸಂಖ್ಯೆ
ಕಾರವಾರ: 08382 222973
ಶಿರಸಿ: 08384 227390, 231888
ದಾಂಡೇಲಿ: 08284 231482
ಭಟ್ಕಳ: 08385 226408
ಕುಮಟಾ: 08386 222020
ಅಂಕೋಲಾ: 08388 230268
ಹಳಿಯಾಳ: 08284 220123
ಹೊನ್ನಾವರ: 08387 220230
ಸಿದ್ದಾಪುರ: 08389 230282
ಯಲ್ಲಾಪುರ: 08419 261152
ಮುಂಡಗೋಡ: 08301 222127
ಜಾಲಿ: 08385 226682

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT