ಮಂಗಳವಾರ, ಜೂನ್ 28, 2022
20 °C

‘ಪ್ರಜಾವಾಣಿ’ ವರದಿ ಫಲಶ್ರುತಿ: ರಾಜಕಾಲುವೆ ಕಾಮಗಾರಿ ಪುನರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲ್ಲಾಪುರ: ಪಟ್ಟಣದ ನೂತನ ನಗರ ಜಡ್ಡಿಯಲ್ಲಿ ರಾಜ ಕಾಲುವೆ ಕಾಮಗಾರಿಯನ್ನು ಗುತ್ತಿಗೆದಾರ ಶನಿವಾರ ಪುನಃ ಆರಂಭಿಸಿದ್ದಾರೆ. ಕಾಂಕ್ರೀಟ್‌ನಿಂದ ಕಟ್ಟಿದ ಕಾಲುವೆಯ ಅಕ್ಕಪಕ್ಕದಲ್ಲಿ ಶನಿವಾರ ಮಣ್ಣು ಭರ್ತಿ ಮಾಡಿದ್ದಾರೆ.

ಕಾಂಕ್ರೀಟ್‌ನಿಂದ ನಿರ್ಮಿಸಿದ ರಾಜ ಕಾಲುವೆಯ ಕಾಮಗಾರಿ ಈಗಿನ ಅನುದಾನದಂತೆ ಅರ್ಧಕ್ಕೆ ನಿಲ್ಲಲಿದೆ. ಮಳೆ ನೀರು ಗದ್ದೆಗೆ ನುಗ್ಗದೇ ಕಾಲುವೆಯಲ್ಲಿ ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗುವುದು. ಗದ್ದೆಗೆ ನೀರು ನುಗ್ಗದಂತೆ ಮಣ್ಣಿನ ದಿಬ್ಬ ನಿರ್ಮಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಎಂಜಿನಿಯರ್ ಸುಫಿಯಾನಾ ಬ್ಯಾರಿ ತಿಳಿಸಿದ್ದಾರೆ.

ಅಪೂರ್ಣ ಕಾಮಗಾರಿಯಿಂದ ಹೊಲಗಳಿಗೆ ನೀರು ನುಗ್ಗಿ ರೈತರಿಗೆ ತೊಂದರೆಯಾಗುವ ಬಗ್ಗೆ ‘ಪ್ರಜಾವಾಣಿ’ಯ ಶನಿವಾರದ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು