ಮಂಗಳವಾರ, ಜೂನ್ 28, 2022
21 °C

ಸ್ವಾಮೀಜಿ ಬೆಂಗಾವಲು ವಾಹನ ಡಿಕ್ಕಿ: ಮಹಿಳೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಟ್ಕಳ: ತಾಲ್ಲೂಕಿನ ಶಿರಾಲಿಯ ಹಾದಿಮಾಸ್ತಿ ದೇವಸ್ಥಾನದ ಎದುರು ಭಾನುವಾರ ರಸ್ತೆ ದಾಟುತ್ತಿದ್ದ ಮಹಿಳೆಗೆ, ಉಜಿರೆ ಶ್ರೀರಾಮ‌ ಕ್ಷೇತ್ರ‌ದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯ ಬೆಂಗಾವಲು ಪೊಲೀಸ್ ವಾಹನ ಡಿಕ್ಕಿಯಾಗಿದೆ. ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಜಾಲಿ ಪಟ್ಟಣದ ಹಿಂದೂ ಕಾಲೊನಿ ನಿವಾಸಿ ವಿಜಯಾ ರಘು ಹೊನ್ನಾವರಕರ (69) ಮೃತರು. ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಭಟ್ಕಳದ ಬೆಳ್ಕೆ ವಿ.ಎಸ್.ಎಸ್ ಬ್ಯಾಂಕ್‌ನ ನೂತನ ಕಟ್ಟಡವನ್ನು ಉದ್ಘಾಟಿಸಿ ಸಾರದ ಹೊಳೆ ಕಡೆ ಸಾಗುತ್ತಿದ್ದಾಗ ದುರ್ಘಟನೆ ನಡೆಯಿತು.

ಸ್ವಾಮೀಜಿ ಬೆಂಗಾವಲು ಪೊಲೀಸ್ ವಾಹನವು ವೇಗವಾಗಿ ಸೈರನ್ ಮೊಳಗಿಸಿಕೊಂಡು ಹೋಗುತ್ತಿದ್ದಾಗ ಶಿರಾಲಿ ಹೆದ್ದಾರಿಯಲ್ಲಿ ಮಹಿಳೆಯು ಏಕಾಏಕಿ ರಸ್ತೆ ದಾಟಲು ಮುಂದಾದರು. ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸಿದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು