ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಭಾವನೆಗಳಿಗೆ ಬಣ್ಣ ತುಂಬಿದ ಯುವಕ

ಎಂಜಿನಿಯರಿಂಗ್ ವಿದ್ಯಾರ್ಥಿಯಿಂದ ನೈಜ ಫೋಟೊದಂತೆ ಕಾಣುವ ಚಿತ್ರಗಳ ರಚನೆ
Last Updated 15 ಮೇ 2020, 19:30 IST
ಅಕ್ಷರ ಗಾತ್ರ

ಕಾರವಾರ: ಆ ಮುದ್ದಾದ ನಾಯಿ ಮರಿಯನ್ನು ಎತ್ತಿಕೊಂಡು ಮುದ್ದಾಡಬೇಕು ಎನಿಸುತ್ತದೆ. ಬಕೆಟ್ ಒಳಗೆ ನೀರಿನಲ್ಲಿ ಕುಳಿತ ಕಂದನ ಸಂಭ್ರಮದಲ್ಲಿ ನಾವೂ ಜೊತೆಯಾಗಬೇಕು ಎಂದು ಪ್ರೇರೇಪಿಸುತ್ತದೆ. ದೊಡ್ಡ ಕಿವಿಗಳನ್ನು ಅರಳಿಸಿ ಧಾವಿಸುತ್ತಿರುವ ಸಲಗದ ಗಾಂಭೀರ್ಯ ಅಚ್ಚರಿ ಮೂಡಿಸುತ್ತದೆ..!

ಲಾಕ್‌ಡೌನ್ ಅವಧಿಯ ಸದುಪಯೋಗದ ಪರಿಣಾಮಯುವಕರೊಬ್ಬರ ಕೈ ಚಳಕದಲ್ಲಿ ಈ ಚಿತ್ರಗಳುಜೀವ ತಳೆದಿವೆ.ತಾಲ್ಲೂಕಿನ ಕೈಗಾ ಟೌನ್‌ಶಿಪ್‌ ನಿವಾಸಿ ಪಿ.ರಿಷಭ್‌, ಚಿತ್ರಕಲೆಗೆ ಯೂಟ್ಯೂಬ್‌ ಅನ್ನೇ ಗುರುವನ್ನಾಗಿ ಸ್ವೀಕರಿಸಿದವರು.ವರ್ಣಚಿತ್ರ, ಪೆನ್ಸಿಲ್ ಸ್ಕೆಚಿಂಗ್‌ನಲ್ಲಿ ಗಮನ ಸೆಳೆಯುವ ಅವರು, ಯಾವುದೇ ತರಗತಿಗಳಲ್ಲಿ ತರಬೇತಿ ಪಡೆದಿಲ್ಲ.

ಸುಂದರವಾದ ವಿದೇಶಿ ಯುವತಿ ಮತ್ತು ಆಕೆಯ ಉಡುಪಿನ ವಿನ್ಯಾಸ, ನಾಯಿ ಮರಿಯ ಮುದ್ದಾದ ಮುಖದಲ್ಲಿರುವ ಭಾವನೆ, ಓಡೋಡಿ ಬರುತ್ತಿರುವ ಒಂಟಿ ಸಲಗದ ಸೊಂಡಿಲಿನಲ್ಲಿರುವ ಗೆರೆಗಳು ಹೀಗೆ ಅತ್ಯಂತ ಸೂಕ್ಷ್ಮ ವಿಚಾರಗಳನ್ನೂ ಅವರು ತಮ್ಮ ಚಿತ್ರಗಳಲ್ಲಿ ಮೂಡಿಸಿದ್ದಾರೆ.

‘ಆಯಿಲ್ ಪೇಂಟ್ ಬಳಸಿಕ್ಯಾನ್ವಾಸ್ ಮೇಲೆ ಚಿತ್ರಗಳನ್ನು ಬಿಡಿಸುವುದು ನನಗೆ ಬಲು ಇಷ್ಟ. ನಾನು ಪ್ರೌಢಶಾಲೆಯಲ್ಲಿದ್ದಾಗಲೇ ಚಿತ್ರಕಲೆಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಹಲವು ಬಹುಮಾನಗಳನ್ನೂ ಪಡೆದುಕೊಂಡಿದ್ದೇನೆ. ಅದನ್ನೇ ಈಗ ಲಾಕ್‌ಡೌನ್ ರಜಾದಿನಗಳಲ್ಲಿ ಒಂದಷ್ಟು ಪರಿಷ್ಕರಿಸಿ ಮುಂದುವರಿಸಿದ್ದೇನೆ’ ಎನ್ನುತ್ತಾರೆ ರಿಷಭ್.

‘ಫೋಟೊಗಳನ್ನುಹೋಲುವ ರೀತಿಯ ಚಿತ್ರಗಳನ್ನು ಬರೆಯುವುದು ಖುಷಿ ಕೊಡುತ್ತದೆ. ಒಂದು ಚಿತ್ರ ಬಿಡಿಸಲು ಸುಮಾರು 15 ದಿನ ಬೇಕಾಗುತ್ತದೆ. ಅಂದರೆ ಅಂದಾಜು 100 ಗಂಟೆಗೂ ಅಧಿಕ ಸಮಯ ಬೇಕು. ಜೊತೆಗೇ ತಾಳ್ಮೆ ಬೇಕು. ಇದನ್ನೆಲ್ಲ ಸ್ವಂತ ಆಸಕ್ತಿಯಿಂದ ಕಲಿತೆ. ಮೊದಲು ಪೆನ್ಸಿಲ್ ಸ್ಕೆಚಿಂಗ್ ಮಾಡಿ, ನಂತರ ಬಣ್ಣದ ಪೆನ್ಸಿಲ್ ಮೂಲಕ ಸ್ಕೆಚಿಂಗ್ ಮಾಡುತ್ತಿದ್ದೆ. ಈಗ ಮುಂದುವರಿದು ಆಯಿಲ್ ಪೇಂಟಿಂಗ್ ಮಾಡಡುತ್ತಿದ್ದೇನೆ’ ಎಂದು ಮುಗುಳ್ನಗುತ್ತಾರೆ.

ಟೇಬಲ್ ಟೆನಿಸ್ ಆಟಗಾರ:ರಿಷಭ್ ಈಗ ಉಡುಪಿ ಜಿಲ್ಲೆಯ ಕಾರ್ಕಳದ ನಿಟ್ಟೆ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಮೂರನೇ ವರ್ಷದ ವಿದ್ಯಾರ್ಥಿ. ಪ್ರೌಢಶಾಲೆವಿದ್ಯಾರ್ಥಿಯಾಗಿದ್ದಾಗಟೇಬಲ್ ಟೆನಿಸ್‌ನಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲೂ ಪೈಪೋಟಿ ನೀಡಿದ್ದರು. ಅವರ ತಂದೆ ದಿವಾಕರ, ದಕ್ಷಿಣ ಕನ್ನಡದ ಕಲ್ಲಡ್ಕದವರಾಗಿದ್ದು, ಕೈಗಾದಲ್ಲಿ ಉದ್ಯೋಗಿಯಾಗಿದ್ದಾರೆ. ತಾಯಿ ಶ್ಯಾಮಲಾ ಗೃಹಿಣಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT