ಸೋಮವಾರ, ಆಗಸ್ಟ್ 2, 2021
28 °C

ಮುಂಡಗೋಡದಲ್ಲಿ ತಂದೆ, ಮಗಳು ಸೇರಿ ಮೂವರಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ‘ಪಟ್ಟಣದಲ್ಲಿ ಮೂರು ಕೋವಿಡ್ ಪ್ರಕರಣಗಳು ಭಾನುವಾರ ಖಚಿತಗೊಂಡಿವೆ. 22 ವರ್ಷದ ಮಗಳು ಹಾಗೂ 44 ವರ್ಷದ ತಂದೆಗೆ ಸೋಂಕು ತಗುಲಿದ್ದು, ಸೋಂಕಿನ ಮೂಲ ಕಂಡುಹಿಡಿಯಲಾಗುತ್ತಿದೆ’ ಎಂದು ತಹಶೀಲ್ದಾರ್ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ.

‘ಬೆಂಗಳೂರಿನಿಂದ ಮಜ್ಜಿಗೇರಿ ಗ್ರಾಮಕ್ಕೆ ಬಂದಿದ್ದ 21ವರ್ಷದ ಯುವಕನಲ್ಲಿಯೂ ಸೋಂಕು ದೃಢಪಟ್ಟಿದೆ. ಮೂವರು ಸೋಂಕಿತರಿಗೆ ಇಲ್ಲಿನ ತಾಲ್ಲೂಕು ಆಸ್ಪತ್ರೆಯ ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದರು. 

‘ತಂದೆ, ಮಗಳಿಗೆ ಯಾವುದೇ ಪ್ರಯಾಣದ ಹಿನ್ನೆಲೆ ಇಲ್ಲದಿದ್ದರೂ, ಜ್ವರ ಹಾಗೂ ನೆಗೆಡಿ ಲಕ್ಷಣ ಕಂಡುಬಂದಿದ್ದರಿಂದ ಗಂಟಲುದ್ರವದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಮತ್ತೊಮ್ಮೆ ಕಾರವಾರ ಹಾಗೂ ಬೆಂಗಳೂರಿಗೆ ಮಾದರಿಗಳನ್ನು ಕಳಿಸಲು ನಿರ್ಧರಿಸಲಾಗಿದೆ. ಸೋಂಕಿತ ಪುರುಷ ವ್ಯಾಪಾರಿ ಆಗಿದ್ದು, ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಗುರುತಿಸುವುದು ಅಧಿಕಾರಿಗಳಿಗೆ ಸವಾಲಾಗಿದೆ. ಸಭೆ, ಕಾರ್ಯಕ್ರಮದಲ್ಲಿ ಇವರು ಪಾಲ್ಗೊಂಡಿದ್ದರೇ ಎಂಬ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ’ ಎಂದು ಹೇಳಿದರು.

ಸೀಲ್ ಡೌನ್: ಇಲ್ಲಿನ ಬಸವನಬೀದಿಯನ್ನು ಭಾನುವಾರ ಸೀಲ್‌ಡೌನ್ ಮಾಡಿ, ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಲಾಯಿತು. ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ, ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗುವುದು. ನಾಲ್ಕೈದು ದಿನಗಳಲ್ಲಿ ಪಟ್ಟಣದಲ್ಲಿ ಕೋವಿಡ್ ಆರೈಕೆ ಕೇಂದ್ರ ಆರಂಭವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು