ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸ್ಕಾಂಗೆ ಕಂಟಕವಾದ ಆಗಸ್ಟ್!

ಅತಿವೃಷ್ಟಿಯಿಂದ ಒಂದೇ ತಿಂಗಳಿಗೆ ₹ 3.25 ಕೋಟಿ ನಷ್ಟ:ಪರಿಕರಗಳಿಗೆ ಹಾನಿ
Last Updated 27 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಶಿರಸಿ: ಆಗಸ್ಟ್ ತಿಂಗಳು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಉತ್ತರ ಕನ್ನಡ ವೃತ್ತಕ್ಕೆ ಕಂಟಕವಾಗುತ್ತಿದ್ದು, ಈ ಬಾರಿಯೂ ಅತಿವೃಷ್ಟಿಗೆ ₹3.25 ಕೋಟಿ ಹಾನಿಯಾಗಿದೆ.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ನೆರೆ ಹಾವಳಿಯಿಂದ ಜಿಲ್ಲೆಯಲ್ಲಿ ಸುಮಾರು ₹4 ಕೋಟಿಯಷ್ಟು ಹಾನಿಯುಂಟಾಗಿತ್ತು. ಈ ಬಾರಿಯೂ ಇಂತದ್ದೇ ಸ್ಥಿತಿ ಮುಂದುವರೆದಿದೆ.

ಇದೇ ತಿಂಗಳು ಹೆಚ್ಚು ಮಳೆ ಸುರಿದ ಕಾರಣಕ್ಕೆ, ಜೊತೆಗೆ ವಾರಗಳ ಕಾಲ ವೇಗದ ಗಾಳಿಯೂ ಬೀಸಿದ್ದ ಪರಿಣಾಮ ಅನೇಕ ಕಡೆ ಕಂಬಗಳು ಮುರಿದು ಬಿದ್ದಿದ್ದವು. ಮಲೆನಾಡು ಪ್ರದೇಶವಾದ ಶಿರಸಿ, ಯಲ್ಲಾಪುರ, ಸಿದ್ದಾಪುರ ಮತ್ತು ಅಂಕೋಲಾದ ಕೆಲವು ಗ್ರಾಮಗಳಲ್ಲಿ ಹೆಚ್ಚು ಹಾನಿ ಸಂಭವಿಸಿದೆ ಎಂದು ಹೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.

ದಟ್ಟ ಬೆಟ್ಟ ಅರಣ್ಯ ಪ್ರದೇಶಗಳಿರುವ ಕಡೆಗೆ ತಂತಿಗಳ ಮೇಲೆ ಮರಗಳು ಉರುಳಿದ್ದವು. ಕಂಬಗಳು ಮುರಿದು ಬಿದ್ದಿದ್ದವು. ಇವುಗಳನ್ನು ತ್ವರಿಗತಿಯಲ್ಲಿ ಬದಲಾಯಿಸಲು ಹರಸಾಹಸಪಡಬೇಕಾಯಿತು ಎಂದು ತಿಳಿಸಿದರು.

ಮಳೆಗಾಲದ ಆರಂಭಕ್ಕಿಂತ ಮಳೆ ಅಧಿಕ ಪ್ರಮಾಣದಲ್ಲಿ ಸುರಿದ ಆಗಸ್ಟ್‌ನಲ್ಲೇ ಹೆಚ್ಚು ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ 30 ಕಿಲೋಮೀಟರ್‌ಗೂ ಅಧಿಕ ಪ್ರಮಾಣದಷ್ಟು ವಿದ್ಯುತ್ ವಾಹಕಗಳು, 50ಕ್ಕೂ ಅಧಿಕ ವಿದ್ಯುತ್ ಪರಿವರ್ತಕಗಳು ಹಾನಿಗೀಡಾಗಿದ್ದವು.

ಕಂಬಗಳ ಹಾನಿಯೇ ಅಧಿಕ

ಅತಿವೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿದೆ. ಜಿಲ್ಲೆಯಾದ್ಯಂತ ಒಂದು ತಿಂಗಳಿನಲ್ಲೇ 2,371 ವಿದ್ಯುತ್ ಕಂಬಗಳು ಹಾನಿಗೀಡಾಗಿವೆ. ಇದರಿಂದಾಗಿಯೇ ₹2.50 ಕೋಟಿ ನಷ್ಟ ಸಂಭವಿಸಿದೆ. ವಿದ್ಯುತ್ ಪರಿವರ್ತಕಗಳ ಹಾನಿಯಿಂದಾಗಿ ₹ 61.25 ಲಕ್ಷ, ವಿದ್ಯುತ್ ವಾಹಕಗಳ ಹಾನಿಯಿಂದ ₹14.33 ಲಕ್ಷ ಹಾನಿ ಸಂಭವಿಸಿದೆ ಎಂದು ಹೆಸ್ಕಾಂ ನೀಡಿದ ವರದಿ ಖಚಿತಪಡಿಸಿದೆ.

ಅಂಕಿ–ಅಂಶ

ತಾಲ್ಲೂಕು;ಹಾನಿಗೀಡಾದ ವಿದ್ಯುತ್ ಕಂಬ;ಒಟ್ಟೂ ನಷ್ಟದ ಮೊತ್ತ (₹ಲಕ್ಷಗಳಲ್ಲಿ)

ಅಂಕೋಲಾ;379;61.09

ಭಟ್ಕಳ;55;8.73

ಹಳಿಯಾಳ;38;3.01

ಹೊನ್ನಾವರ;200;27

ಕಾರವಾರ;69;3.74

ಕುಮಟಾ;110;18.67

ಮುಂಡಗೋಡ;98;14.42

ಸಿದ್ದಾಪುರ;492;32.09

ಶಿರಸಿ;337;52.80

ಜೋಯಿಡಾ;132;10.78

ಯಲ್ಲಾಪುರ;440;91.11

ದಾಂಡೇಲಿ;21;2.17

ಒಟ್ಟೂ;2371;325.605

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT