ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್ ಉದ್ದಿಮೆದಾರರ ರಾಜ್ಯ ಮಟ್ಟದ ಸಮಾವೇಶ

ಹೋಟೆಲ್ ಉದ್ಯಮಿಗಳ ವಾರ್ಷಿಕ ಸಭೆಯಲ್ಲಿ ಚಂದ್ರಶೇಖರ ಹೆಬ್ಬಾರ
Last Updated 26 ಫೆಬ್ರುವರಿ 2020, 10:17 IST
ಅಕ್ಷರ ಗಾತ್ರ

ಕಾರವಾರ: ‘ಈ ವರ್ಷ ಹೋಟೆಲ್ ಉದ್ಯಮಿಗಳು ಮತ್ತು ಕಾರ್ಮಿಕರ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಮುಂದಿನ ಸಭೆಯಲ್ಲಿ ಸ್ಥಳವನ್ನು ಅಂತಿಮಗೊಳಿಸಲಾಗುತ್ತದೆ’ ಎಂದುಕರ್ನಾಟಕ ಪ್ರದೇಶ ಹೋಟೆಲ್ ಮತ್ತು ಉಪಾಹಾರ ಮಂದಿರಗಳ ಸಂಘದ ಅಧ್ಯಕ್ಷಚಂದ್ರಶೇಖರ ಹೆಬ್ಬಾರ ಹೇಳಿದರು.

ನಗರದಲ್ಲಿ ಬುಧವಾರ ಆಯೋಜಿಸಲಾದ ಹೋಟೆಲ್ ಮಾಲೀಕರ ರಾಜ್ಯಮಟ್ಟದ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಸಮಾವೇಶಕ್ಕೆ ಮಂತ್ರಾಲಯ ಸುತ್ತಮುತ್ತ ಅಥವಾ ಕುಂದಾಪುರದ ಕೋಟೇಶ್ವರದಲ್ಲಿ ಸ್ಥಳ ನಿಗದಿ ಮಾಡುವ ಯೋಚನೆಯಿದೆ.ಈ ಉದ್ಯಮದ ಪರಿಸ್ಥಿತಿಯ ಬಗ್ಗೆ ಸರ್ಕಾರಕ್ಕೆ ಒಗ್ಗಟ್ಟಾಗಿ ಮನವರಿಕೆ ಮಾಡಿಕೊಡಬೇಕಿದೆ’ ಎಂದು ತಿಳಿಸಿದರು.

‘ಇತ್ತೀಚಿನ ವರ್ಷಗಳಲ್ಲಿ ಹೋಟೆಲ್‌ ವಹಿವಾಟು ಬಹಳ ಸಮಸ್ಯೆಯಲ್ಲಿದೆ. ಫುಟ್‌ಪಾತ್ ಮೇಲೆ ವ್ಯಾಪಾರ ಮಾಡುವವರು ಹೆಚ್ಚಿದ್ದಾರೆ. ಇದರಿಂದ ತೊಂದರೆಯಾಗಿದೆ. ಅದೇರೀತಿ, ಹೊಸದಾಗಿಹೋಟೆಲ್ ಆರಂಭಿಸುವವರು ಗ್ರಾಹಕರನ್ನು ಹೆಚ್ಚಹೆಚ್ಚು ಆಕರ್ಷಿಸಲು ದರ ಸಮರಕ್ಕೆ ಇಳಿಯುವುದು ಬೇಡ. ಎಲ್ಲರೂ ಒಟ್ಟಾಗಿದ್ದರೆ ಉದ್ಯಮ ಯಶಸ್ವಿಯಾಗಿ ಸಾಗುತ್ತದೆ’ ಎಂದು ಸಲಹೆ ನೀಡಿದರು.

‘ಹೋಟೆಲ್‌ಗೂ ಅನುಮತಿ ಕೊಡಿ’:‘ಬೆಂಗಳೂರಿನಲ್ಲಿ ವಾರಾಂತ್ಯದಲ್ಲಿ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ರಾತ್ರಿ ಒಂದು ಗಂಟೆಯವರೆಗೆ ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ. ಅದೇರೀತಿ, ಹೋಟೆಲ್‌ಗಳಿಗೂ ಅನುಮತಿ ನೀಡಬೇಕು. ಜಿಲ್ಲಾಮಟ್ಟಕ್ಕೂ ಹೋಟೆಲ್‌ಗಳಿಗೆ ವಿಸ್ತರಣೆಯಾಗಬೇಕು’ ಎಂದು ಆಗ್ರಹಿಸಿದರು.

‘ಹೋಟೆಲ್‌ಗಳಿಗೆಪದೇಪದೇ ಪರವಾನಗಿ ಪಡೆಯುವ ಪದ್ಧತಿ ಸರಿಯಲ್ಲ. ಒಮ್ಮೆ ಪಡೆದುಕೊಂಡರೆ ಉದ್ದಿಮೆ ಮುಚ್ಚುವವರೆಗೂ ಚಾಲ್ತಿಯಲ್ಲಿರಬೇಕು.ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಹೋರಾಟ ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪ್ರಮುಖರಾದವಿಜಯ ಶೆಟ್ಟಿ, ಪಿ.ಸಿ.ರಾವ್, ಶ್ಯಾಮಸುಂದರ ಬಸ್ರೂರು, ಚಂದ‌್ರಶೇಖರ ಹೆಬ್ಬಾರ, ಮಧುಕರ ಶೆಟ್ಟಿ, ಎಂ.ವಿ.ರಾಘವೇಂದ್ರ ರಾವ್, ಎಚ್.ಎನ್.ಉಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT