ಮಂಗಳವಾರ, ಸೆಪ್ಟೆಂಬರ್ 21, 2021
25 °C
ಈ ತಾಣದಲ್ಲಿ ಖರೀದಿಸಿದ ವಸ್ತುವಿಗೆ ದುರಸ್ತಿ, ಸಾಗಣೆ ವೆಚ್ಚ ಉಚಿತ

ಗೃಹೋಪಯೋಗಿ ವಸ್ತುಗಳಿಗೆ ‘ಹಾವೋಸ್’

ದೇವರಾಜ ನಾಯ್ಕ Updated:

ಅಕ್ಷರ ಗಾತ್ರ : | |

ಕಾರವಾರ: ಹೊನ್ನಾವರ ತಾಲ್ಲೂಕಿನ ಬಂದರ್ ರಸ್ತೆಯ ನಿವಾಸಿ ಪ್ರತೀಕ್ ಪ್ರಭು, ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಬೃಹತ್ ಕಂಪನಿಗಳ ಆನ್‌ಲೈನ್‌ ತಾಣಗಳಲ್ಲಿ ವಸ್ತುಗಳನ್ನು ಖರೀದಿಸುವಾಗ ಉಂಟಾಗುವ ತೊಂದರೆಗಳನ್ನು ಅರಿತ ಅವರು, ಗ್ರಾಹಕರ ಸ್ನೇಹಿ, ಉತ್ತಮ ಸೇವೆ ಒದಗಿಸುವ ಪರಿಕಲ್ಪನೆಯಲ್ಲಿ ‘ಹಾವೋಸ್’ (HAOS) ಆನ್‌ಲೈನ್ ತಾಣವನ್ನು ಹುಟ್ಟು ಹಾಕಿದ್ದಾರೆ.

ಸಾಮಾನ್ಯವಾಗಿ ದೈತ್ಯ ಇ–ಕಾಮರ್ಸ್‌ ತಾಣಗಳಲ್ಲಿ ಸಣ್ಣಪುಟ್ಟ ವಸ್ತುಗಳನ್ನು ಹೊರತುಪಡಿಸಿ, ಬೃಹತ್ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವವರ ಸಂಖ್ಯೆ ಕಡಿಮೆ. ಇದಕ್ಕೆ ಕಾರಣ ಕೂಡ ಇದೆ. ಈ ತಾಣಗಳಲ್ಲಿ ಫ್ರಿಜ್, ವಾಷಿಂಗ್ ಮಷಿನ್‌ಗಳಂಥ ಬೃಹತ್ ವಸ್ತುಗಳಿಗೆ ಡೆಲಿವರಿ ಶುಲ್ಕವು ಅಧಿಕ ಇರುತ್ತದೆ. ಜತೆಗೆ, ಇವುಗಳು ಕೆಟ್ಟು ಹೋದಾಗ ದುರಸ್ತಿಗೆ ಕೂಡ ಗ್ರಾಹಕರಿಗೆ ಸಮಸ್ಯೆ ಉಂಟಾಗುವುದುಂಟು. ಆ ನಿಟ್ಟಿನಲ್ಲಿ ‘ಹಾವೋಸ್’ ಈ ತಾಣಗಳಿಂದ ಭಿನ್ನವಾಗಿದೆ.

ಡೀಲರ್‌– ಗ್ರಾಹಕರ ನಡುವೆ ವ್ಯವಹಾರ: ‘ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಜಿಲ್ಲೆಯ ಜನರಿಗೆ ನಾವೊಂದು ವೇದಿಕೆ ಕಲ್ಪಿಸಿದ್ದೇವೆ. www.haos.in ತಾಣಕ್ಕೆ ಭೇಟಿ ನೀಡುವ ಗ್ರಾಹಕರು, ಲಾಗಿನ್ ಆದ ಬಳಿಕ ತಮ್ಮ ಆಯ್ಕೆ ವಸ್ತುಗಳನ್ನು ಬುಕ್ ಮಾಡಬಹುದು. ಇದರ ಮಾಹಿತಿಯನ್ನು ಸಮೀಪದ ಡೀಲರ್‌ಗಳಿಗೆ ನಾವು ತಲುಪಿಸುತ್ತೇವೆ. ಅವರು ನೇರವಾಗಿ ಗ್ರಾಹಕರನ್ನು ಸಂಪರ್ಕಿಸಿ, ಅದನ್ನು ಅವ ರಿಗೆ ತಲುಪಿಸುತ್ತಾರೆ.  ಬಿಡಿ ಭಾಗಗಳಿದ್ದರೆ ಅವುಗಳನ್ನು ಜೋಡಿಸಿ ಕೊಡುತ್ತಾರೆ. ಜತೆಗೆ, ವಾರಂಟಿ ಸರ್ವೀಸ್‌ಗಳಿದ್ದರೆ ಗ್ರಾಹಕರು ಡೀಲರ್‌ ಅನ್ನು ಸಂಪರ್ಕಿಸಿ ಸೌಲಭ್ಯ ಪಡೆದುಕೊಳ್ಳಬಹುದು. ಆದರೆ, ಈ ಸೌಲಭ್ಯ ದೈತ್ಯ ಇ–ಕಾಮರ್ಸ್‌ ತಾಣಗಳಲ್ಲಿ ಲಭ್ಯ ಇಲ್ಲ’ ಎನ್ನುತ್ತಾರೆ ಸಂಸ್ಥಾಪಕ ಸಿಇಒ ಪ್ರತೀಕ್ ಪ್ರಭು. 

ಕರಾವಳಿ ಜಿಲ್ಲೆಗಳಲ್ಲಿ ಸೇವೆ: ‘ಸದ್ಯ ಜಿಲ್ಲೆಯ ಹಳಿಯಾಳ, ಮುಂಡಗೋಡ ಹಾಗೂ ಜೊಯಿಡಾ ತಾಲ್ಲೂಕು ಹೊರತುಪಡಿಸಿ ಬೇರೆ ಎಲ್ಲ ಕಡೆಗಳಿಗೂ ತಲುಪಿಸಲಾಗುತ್ತದೆ. ಇದರ ಜತೆಗೆ ಕರಾವಳಿ ಜಿಲ್ಲೆಗಳಾದ ಉಡುಪಿ, ಮಂಗಳೂರಿನಲ್ಲೂ ನಮ್ಮ ಸೇವೆ ಲಭ್ಯವಿದೆ. ಎಲ್ಲ ವಸ್ತುಗಳನ್ನೂ ಉಚಿತವಾಗಿ ಸಾಗಿಸಲಾಗುತ್ತದೆ’ ಎನ್ನುತ್ತಾರೆ ಅವರು.

*
ಸ್ವಂತ ಉದ್ಯಮ ಪ್ರಾರಂಭಿಸ ಬೇಕೆಂಬ ಹಂಬಲ ಇತ್ತು. ತಂದೆ ಕೂಡ 30 ವರ್ಷಗಳಿಂದ ಗೃಹೋ ಪಯೋಗಿ ವಸ್ತುಗಳ ಡೀಲರ್‌ಶಿಪ್ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಇದನ್ನು ಆನ್‌ಲೈನ್‌ ತಾಣಕ್ಕೆ ಪರಿವರ್ತಿಸಿದೆ.
-ಪ್ರತೀಕ್ ಪ್ರಭು, ‘ಹಾವೋಸ್’ ಸಂಸ್ಥಾಪಕ ಸಿಇಒ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು