ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಳೆ: ರೈತರಲ್ಲಿ ಹರ್ಷ

Last Updated 9 ಜುಲೈ 2019, 14:38 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ವರ್ಷಧಾರೆ ರೈತರಲ್ಲಿ ಭರವಸೆ ಮೂಡಿಸಿದೆ. ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.

ಜೂನ್‌ ತಿಂಗಳ ಮಳೆ ಕೊರತೆಯನ್ನು ಕಂಡು ಕಂಗಾಲಾಗಿದ್ದ ರೈತರು ಕೊಂಚ ನಿರಾಳರಾಗಿದ್ದಾರೆ. ಗಾಳಿಯ ಅಬ್ಬರವಿಲ್ಲದೇ, ಒಂದೇಸವನೆ ಸುರಿಯುತ್ತಿರುವ ಮಳೆ ಜನರಲ್ಲಿ ಖುಷಿ ಮೂಡಿಸಿದೆ. ನಿರಂತರ ಮಳೆಯಿಂದ ಚಳಿಯ ವಾತಾವರಣ ಸೃಷ್ಟಿಯಾಗಿದೆ. ಹಳ್ಳ–ಕೊಳ್ಳಗಳು, ನದಿಗಳು ತುಂಬಿ ಹರಿಯುತ್ತಿವೆ. ಬೇಸಿಗೆಯಲ್ಲಿ ಸಂಪೂರ್ಣ ಬತ್ತಿದ್ದ ತಾಲ್ಲೂಕಿನ ಪೂರ್ವಭಾಗದ ವರದಾ ನದಿ, ಪಶ್ಚಿಮ ಭಾಗದ ಶಾಲ್ಮಲಾ ನದಿ ಮೈದುಂಬಿ ಹರಿಯುತ್ತಿವೆ.

ಮಂಗಳವಾರ ದಿನವಿಡೀ ಮಳೆ ಸುರಿಯಿತು. ಮಂಗಳವಾರ ಬೆಳಿಗ್ಗೆ ಕೊನೆಗೊಂಡಂತೆ ಕಳೆದ 24 ತಾಸುಗಳಲ್ಲಿ ಉಪವಿಭಾಗದ ಶಿರಸಿಯಲ್ಲಿ 41 ಮಿ.ಮೀ, (ಈವರೆಗೆ 706 ಮಿ.ಮೀ), ಸಿದ್ದಾಪುರದಲ್ಲಿ 94.6 ಮಿ.ಮೀ, (ಈವರೆಗೆ 908 ಮಿ.ಮೀ), ಯಲ್ಲಾಪುರದಲ್ಲಿ 21 ಮಿ.ಮೀ (ಈವರೆಗೆ 705 ಮಿ.ಮೀ), ಮುಂಡಗೋಡದಲ್ಲಿ 39 ಮಿ.ಮೀ (ಈವರೆಗೆ 330 ಮಿ.ಮೀ) ಮಳೆ ದಾಖಲಾಗಿದೆ.

ವಿದ್ಯುತ್ ಕಣ್ಣಮುಚ್ಚಾಲೆ:

ಮಳೆಗಾಲ ಪೂರ್ವದ ಸಿದ್ಧತೆಯ ಕೊರತೆಯಿಂದ ವಿದ್ಯುತ್ ಆಗಾಗ ಕೈಕೊಡುತ್ತಿದೆ. ದಿನಕ್ಕೆ ನಾಲ್ಕಾರು ಬಾರಿ ವಿದ್ಯುತ್ ಕಡಿತವಾಗುತ್ತಿದೆ.

ಇದರಿಂದ ವೆಲ್ಡಿಂಗ್ ಶಾಪ್, ಗ್ಯಾರೇಜ್, ಹಿಟ್ಟಿನ ಗಿರಣಿ ಸೇರಿದಂತೆ ಚಿಕ್ಕಪುಟ್ಟ ಅಂಗಡಿಕಾರರು ಸಮಸ್ಯೆ ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT