ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪತ್ರಕರ್ತರಿಗೆ ಬೇಜವಾಬ್ದಾರಿ ಬರವಣಿಗೆ ಸಲ್ಲ’

Last Updated 6 ಜುಲೈ 2018, 12:13 IST
ಅಕ್ಷರ ಗಾತ್ರ

ಶಿರಸಿ: ಪತ್ರಕರ್ತರಾದವರು ಬೇಜವಾಬ್ದಾರಿ ಬರವಣಿಗೆಗೆ ಅಂಟಿಕೊಳ್ಳಬಾರದು. ತಾರ್ಕಿಕ ನಿರಂತರತೆ, ವಿಷಯದ ಸಂಪೂರ್ಣ ಜ್ಞಾನ ನೀಡುವಂತಹ ಬರಹಗಳನ್ನು ಬರೆಯಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಎಂ.ಆರ್.ನಾಗರಾಜು ಹೇಳಿದರು.

ಇಲ್ಲಿನ ಎಂ.ಎಂ.ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಸಹಯೋಗದಲ್ಲಿ ಶುಕ್ರವಾರ ಇಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಪತ್ರಿಕೋದ್ಯಮ ವಿದ್ಯಾರ್ಥಿಗಳು, ಪತ್ರಕರ್ತರಿಗೆ ವಿಷಯದ ಸ್ಪಷ್ಟ ಜ್ಞಾನ ಅಗತ್ಯ. ಬರವಣಿಗೆಯಲ್ಲಿ ಮೇಲರಿಮೆ– ಕೀಳರಿಮೆ ಇರಬಾರದು. ವರದಿಗಾರಿಕೆಯಲ್ಲಿ ಸತ್ಯ ಮತ್ತು ಹಿತಗಳ ಕಡೆ ಗಮನವಿರಬೇಕು. ಸಮುದಾಯ ಪ್ರಜ್ಞೆಯನ್ನು ಕಡೆಗಣಿಸಬಾರದು ಎಂದು ಹೇಳಿದರು.

ಕಾರ್ಯಕಾರ್ಯನಿರತ ಪತ್ರಕರ್ತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವಿರೂಪಾಕ್ಷ ಕಂಚೀಕೈ ಮಾತನಾಡಿ, ‘ಜಿಲ್ಲೆಯ ಪತ್ರಿಕೋದ್ಯಮಕ್ಕೆ ಶತಮಾನಗಳ ಇತಿಹಾಸವಿದೆ. ಸ್ವಾತಂತ್ರ್ಯ ಚಳವಳಿಯಲ್ಲಿ ತೆರೆಮರೆಯಲ್ಲಿ ಕರಪತ್ರ ಹಂಚುವುದರಿಂದ ಇಂದಿನವರೆಗೆ ಪತ್ರಿಕೋದ್ಯಮ ನಿರಂತರವಾಗಿ ಸಾಗಿದೆ. ವಿದ್ಯಾರ್ಥಿಗಳು ತಮ್ಮ ಊರಿನ ಸುದ್ದಿಗಳನ್ನು ಮಾಡುವ ಮೂಲಕ ಸಮಕಾಲೀನ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳಬಹುದು’ ಎಂದರು. ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥ ಗಣೇಶ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಘವೇಂದ್ರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀರಕ್ಷಾ ನಿರೂಪಿಸಿದರು. ವಿದ್ಯಾರ್ಥಿನಿ ವಾಣಿ ಭಟ್ಟ ಸ್ವಾಗತಿಸಿದರು. ಐಶ್ವರ್ಯಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT