ಬುಧವಾರ, ಸೆಪ್ಟೆಂಬರ್ 29, 2021
21 °C

ಕಾರವಾರ: 'ಶರಾವತಿ ಪಡೆ'ಗೆ 25 ದ್ವಿಚಕ್ರ ವಾಹನ ಹಂಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಪೊಲೀಸ್ ಇಲಾಖೆಯ 'ನಿರ್ಭಯಾ' ಯೋಜನೆಯಡಿ ಜಿಲ್ಲೆಯ 'ಶರಾವತಿ ಪಡೆ'ಗೆ 25 ದ್ವಿಚಕ್ರ ವಾಹನಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಂಗಳವಾರ ಹಸ್ತಾಂತರಿಸಿದರು.  

ವಾಹನಗಳ ಸಂಚಾರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಹಸಿರು ನಿಶಾನೆ ತೋರಿ ಮಾತನಾಡಿದ ಅವರು, 'ಜಿಲ್ಲೆಯ ಐದೂ ಉಪ ವಿಭಾಗಗಳಿಗೆ ಈ ವಾಹನಗಳನ್ನು ಹಂಚಿಕೆ ಮಾಡಿ ಪೊಲೀಸ್ ಮಹಾನಿರ್ದೇಶಕರು ಸೂಚಿಸಿದ್ದಾರೆ. ಮಹಿಳೆಯರಿಗೆ ಮತ್ತು ಮಕ್ಕಳಿಗೆ ತೊಂದರೆಯಾದಾಗ ಮಹಿಳಾ ಸಿಬ್ಬಂದಿಯೇ ಖುದ್ದು ಹಾಜರಾಗಲು ಈ ವಾಹನಗಳು ಸಹಕಾರಿಯಾಗಲಿವೆ' ಎಂದು ತಿಳಿಸಿದರು.

'ಇವುಗಳನ್ನು ಕೇವಲ ಕಚೇರಿ ಸಲುವಾಗಿ ಬಳಕೆ ಮಾಡಬೇಕು. ಇಂಧನ ಬಳಕೆಯ ಮಿತಿ ಇರುತ್ತದೆ. ಎಷ್ಟು ಕಿಲೋಮೀಟರ್ ಸಂಚರಿಸಿದೆ ಎಂಬ ಮಾಹಿತಿಯೂ ಪಡೆಯಲಾಗುತ್ತದೆ' ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು