ಬುಧವಾರ, ಸೆಪ್ಟೆಂಬರ್ 22, 2021
28 °C

ಕಾರವಾರ: ಮತ್ತೆ ಬಲೆಗೆ ಬಿದ್ದ 'ಕಾರ್ಗಿಲ್' ಮೀನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ರಾಜ್ಯ ಕರಾವಳಿಯಲ್ಲಿ ಕಳೆದ ವರ್ಷ ಭಾರಿ ಸುದ್ದಿ ಮಾಡಿದ್ದ 'ಕಾರ್ಗಿಲ್ ಮೀನು' (ಟ್ರಿಗ್ಗರ್ ಫಿಶ್) ಈ ವರ್ಷ ಮತ್ತೆ ಮೀನುಗಾರರ ಬಲೆಗೆ ಬಿದ್ದಿವೆ.

ನಗರದ ಬೈತಖೋಲ್ ಮೀನುಗಾರಿಕಾ ಬಂದರಿನಿಂದ ಆಳಸಮುದ್ರಕ್ಕೆ ತೆರಳಿದ್ದ ದೋಣಿಗಳಿಗೆ ಸುಮಾರು 50 ಬುಟ್ಟಿಗಳಷ್ಟು (ಸುಮಾರು 150 ಕೆ.ಜಿ) ಮೀನು ಸಿಕ್ಕಿವೆ.

'ಓಡನಸ್ ನೈಜರ್' ಎಂಬ ವೈಜ್ಞಾನಿಕ ಹೆಸರು ಹೊಂದಿರುವ ಮೀನುಗಳಲ್ಲಿ ಸುಮಾರು 40 ಪ್ರಭೇದಗಳಿವೆ. ಮನುಷ್ಯರಂತೆ ಹಲ್ಲು ಹೊಂದಿರುವ ಈ ಮೀನುಗಳಿಗೆ ಸ್ಥಳೀಯರು 'ಕಾತ್ಲಿ', 'ಕಡಬು' ಎಂದೂ ಕರೆಯುತ್ತಾರೆ.

1999ರಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ಈ ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ  ಬಲೆಗೆ ಬಿದ್ದವು. ಅಲ್ಲದೇ ಅವುಗಳ ಬಣ್ಣವೂ ಸೈನಿಕರ ಸಮವಸ್ತ್ರದ ಮಾದರಿಯಲ್ಲೇ ಇದೆ. ಹಾಗಾಗಿ ಕಾಕತಾಳೀಯವಾಗಿ 'ಕಾರ್ಗಿಲ್ ಮೀನು' ಎಂದು ಪ್ರಸಿದ್ಧವಾಯಿತು ಎನ್ನುತ್ತಾರೆ ಮೀನುಗಾರರು.

ಇನ್ನಷ್ಟು...

ಹೇರಳವಾಗಿ ಬಲೆಗೆ ಬಿದ್ದ ‘ಕಾರ್ಗಿಲ್’ ಮೀನು: ಮೀನುಗಾರರಲ್ಲಿ ಆತಂಕ

ಮಲ್ಪೆಯಲ್ಲಿ ‘ಕಾರ್ಗಿಲ್‌’ ಕಾರ್ಮೋಡ 

ಮೀನು ಮರಿಗಳ ನಿರ್ದಯ ಬೇಟೆಯೇ ಸಮಸ್ಯೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು