ಶುಕ್ರವಾರ, ಏಪ್ರಿಲ್ 16, 2021
31 °C
ಅಂಕೋಲಾ: ಕ್ರಿಕೆಟ್ ಟೂರ್ನಿ ಸಮಾರೋಪ

ಧರ್ಮ-ಧರ್ಮಗಳ ಜಗಳ ಕೊನೆಗಾಣಲಿ: ರೂಪಾಲಿ ನಾಯ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಂಕೋಲಾ: ಮುಸ್ಲಿಮರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಅವರಿಗೆ ಉನ್ನತ ಶಿಕ್ಷಣವನ್ನು ನೀಡುವುದರ ಜತೆಗೆ ಮದುವೆಯ ವಯಸ್ಸನ್ನು ಹೆಚ್ಚಿಸಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ತಾಲ್ಲೂಕಿನ ಜೈಹಿಂದ್ ಕ್ರೀಡಾಂಗಣದಲ್ಲಿ ಅಲ್ ಬಿಲಾಲ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಮುಸ್ಲಿಂ ಪ್ರೀಮಿಯರ್ ಲೀಗ್ ನ (ಕ್ರಿಕೆಟ್) ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಯನ್ನು ವಿತರಿಸಿ ಮಾತನಾಡಿದರು.

ಧಾರ್ಮಿಕ ಸೌಹಾರ್ದತೆಯಿಂದ ಬದುಕಬೇಕು. ಭಗವಂತನ ದೃಷ್ಟಿಯಲ್ಲಿ ಎಲ್ಲರೂ ಒಂದೇ, ಪ್ರೀತಿ ಧರ್ಮ ಪರೋಪಕಾರದಂತಹ ಕಾರ್ಯಗಳನ್ನು ದೇವರು ಮೆಚ್ಚುತ್ತಾನೆ. ಧರ್ಮ-ಧರ್ಮಗಳ ನಡುವಿನ ಜಗಳ ಕೊನೆಗಾಣಬೇಕು ಎಂದರು.

ಅಲಿ ಶೇಖ್ ಮಾತನಾಡಿ, ತಾಲ್ಲೂಕಿನಲ್ಲಿ ಯಾರೊಬ್ಬರ ಧಾರ್ಮಿಕ ಭಾವನೆಗೆ ಧಕ್ಕೆ ಆಗದಂತೆ ಬಾಂಧವ್ಯವನ್ನು ಕಾಪಾಡಿಕೊಂಡು ಬಂದಿದ್ದೇವೆ. ಸೌಹಾರ್ದತೆಯೇ ಎಲ್ಲಾ ಧರ್ಮಗಳ ಆಶಯವಾಗಿದೆ ಎಂದರು. ಸೂರಜ್ ನಾಯ್ಕ ಮಾಲೀಕತ್ವದ ಕೋಟೆವಾಡ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿ ₹72000 ಬಹುಮಾನ ಪಡೆಯಿತು.

ಮತಿನ್ ಶೇಕ್ ಮಾಲೀಕತ್ವದ ಕಾರವಾರ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು. ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಜಾವೆದ್ ಶೇಖ್, ಪಿಎಸ್ಐ ಪ್ರೇಮನ ಗೌಡ ಪಾಟೀಲ್, ಪುರಸಭೆಯ ಅಧ್ಯಕ್ಷೆ ಶಾಂತಲ ನಾಡಕರ್ಣಿ, ಸದಸ್ಯರಾದ ಸೂರಜ್ ನಾಯ್ಕ ಶ್ರೀಧರ್ ನಾಯ್ಕ, ಉದ್ಯಮಿ ಅಹಮದ್ ಶೇಖ್ ಹುಬ್ಬಳ್ಳಿ, ಅರ್ಬಾಜ್ ಶೇಖ್ ಮುಂಬೈ, ಶಿಕ್ಷಕರ ರಫೀಕ್ ಶೇಖ್, ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ, ಕ್ರೀಡಾಪಟು ಅಬ್ದುಲ್ ಸೈಯದ್, ಸ್ಪೋರ್ಟ್ಸ್ ಕ್ಲಬ್ ಸದಸ್ಯರಾದ ಸರ್ಫರಾಜ್ ಆಸಿಫ್ ಇದ್ದರು. ಪತ್ರಕರ್ತರ ಸಂಘದ ಕಾರ್ಯದರ್ಶಿ ಸುಭಾಸ್ ಕಾರೇಬೈಲ್ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು