ಕಾರವಾರ:ನಗರದಿಂದ ಸಿಗಂದೂರಿಗೆ ಪ್ರಯಾಣಿಸುವ ನೂತನ ಬಸ್ಗೆ ಶಾಸಕಿ ರೂಪಾಲಿ ನಾಯ್ಕ ಶುಕ್ರವಾರ ಚಾಲನೆ ನೀಡಿದರು. ಇದೇವೇಳೆ, ಹೈದರಾಬಾದ್ಮಾರ್ಗದ ಹಳೆಯ ಬಸ್ ಬದಲುಹೊಸ ಬಸ್ ಸಂಚಾರವನ್ನು ಉದ್ಘಾಟಿಸಿದರು.

‘ಸಿಗಂದೂರುದೇವಿಯ ದರ್ಶನಕ್ಕೆಕಾರವಾರದಿಂದ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ.ಆದರೆ, ಸೂಕ್ತವಾದಬಸ್ ಸೌಲಭ್ಯ ಇರಲಿಲ್ಲ. ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿಈ ಸೌಕರ್ಯ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದು ಕೊಳ್ಳಬೇಕು’ ಎಂದು ಅವರು ತಿಳಿಸಿದರು.

ಕಾರವಾರದಿಂದ ಬೆಳಿಗ್ಗೆ 7.30ಕ್ಕೆ ಹೊರಡುವ ಬಸ್ಸಿಗಂದೂರಿಗೆ 12.30ಕ್ಕೆ ತಲುಪಲಿದೆ. ಮಧ್ಯಾಹ್ನ 2.30ಕ್ಕೆ ಅಲ್ಲಿಂದ ಹೊರಟು ಸಂಜೆ 7.30ಕ್ಕೆ ಇಲ್ಲಿಗೆ ಬಂದು ತಲುಪಲಿದೆ.ಹೈದರಾಬಾದ್ ಮಾರ್ಗಕ್ಕೆ ಹೊಸ ಬಸ್ ನೀಡಲಾಗಿದ್ದು ಕಾರವಾರದಿಂದ ಮಧ್ಯಾಹ್ನ 3 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 9.30ಕ್ಕೆ ತಲುಪಲಿದೆ. ರಾತ್ರಿ 9 ಗಂಟೆಗೆ ಅಲ್ಲಿಂದ ತೆರಳಿ ಮರುದಿನ ಮಧ್ಯಾಹ್ನ 1ಕ್ಕೆ ಕಾರವಾರ ತಲುಪಲಿದೆ.

ಈ ಸಂದರ್ಭದಲ್ಲಿ ಕಾರವಾರ ಬಸ್ ಡಿಪೊವ್ಯವಸ್ಥಾಪಕ ತುಷಾರ್, ನಿಲ್ದಾಣದ ನಿಯಂತ್ರಕರು, ಸಾರಿಗೆ ಸಿಬ್ಬಂದಿ, ನಗರಸಭೆಯ ಸದಸ್ಯರು, ಸಾರ್ವಜನಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.