ಶನಿವಾರ, ಮಾರ್ಚ್ 25, 2023
28 °C

ಶಿರಸಿ ಬಳಿಯ ಸರಗುಪ್ಪದಲ್ಲಿ ಕಾಳಿಂಗ ಸರ್ಪ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ತಾಲ್ಲೂಕಿನ ದೇವನಳ್ಳಿ ಗ್ರಾಮ ಪಂಚಾಯ್ತಿ ವ್ಯಾ‍ಪ್ತಿಯ ಸರಗುಪ್ಪ  ಗ್ರಾಮದ ಅಡಿಕೆ ತೋಟದ ಪಕ್ಕದಲ್ಲಿ ಕಾಣಿಸಿಕೊಂಡಿದ್ದ, ಸುಮಾರು 12 ಅಡಿಯಷ್ಟು ಉದ್ದದ ಕಾಳಿಂಗ ಸರ್ಪವನ್ನು ಭಾನುವಾರ ರಕ್ಷಿಸಿ ಕಾಡಿಗೆ ಬಿಡಲಾಗಿದೆ.

ನಾರಾಯಣ ಗೌಡ ಎಂಬುವವರಿಗೆ ಸೇರಿದ ತೋಟದ ಪಕ್ಕದಲ್ಲಿ ಎರಡು ದಿನದ ಹಿಂದೆ ಹಾವು ಕಾಣಿಸಿಕೊಂಡಿತ್ತು. ಕಾಡಿಗೆ ತೆರಳಬಹುದು ಎಂದು ಮಾಲೀಕ ನಿರ್ಲಕ್ಷಿಸಿದ್ದರು. ಹಳ್ಳದ ಪಕ್ಕದ ಪೊದೆಯ ಮೇಲೆ ಕುಳಿತಿದ್ದ ಹಾವು ಅಕ್ಕಪಕ್ಕವೇ ಸುಳಿದಾಡುತ್ತಿದ್ದರಿಂದ ಆತಂಕಿತರಾಗಿದ್ದರು.

ಉರಗ ಪ್ರೇಮಿ ಪ್ರಶಾಂತ ಹುಲೇಕಲ್ ಅವರನ್ನು ಕರೆಯಿಸಿ ಕಾಳಿಂಗ ಸರ್ಪ ರಕ್ಷಣೆ ಮಾಡಲಾಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು