ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಟನ್ ಬಿರಿಯಾನಿ’ಗೆ ‘ಕೊಲ್ಹಾಪುರಿ ತಡ್ಕಾ’

Last Updated 10 ಮೇ 2019, 19:47 IST
ಅಕ್ಷರ ಗಾತ್ರ

ಕಾರವಾರ:ಮಾಂಸಾಹಾರ ಪ್ರಿಯರಿಗೆ ನಗರದ ಕುಟಿನ್ಹೊ ರಸ್ತೆಯಲ್ಲಿ ಸಾಲುಸಾಲು ಹೋಟೆಲ್‌ಗಳಿವೆ. ಆದರೆ, ಮಟನ್ ಬಿರಿಯಾನಿ ರುಚಿ ಸವಿಯಬೇಕೆಂದವರು ‘ಹೋಟೆಲ್ ಕೊಲ್ಹಾಪುರಿ ತಡ್ಕಾ’ಕ್ಕೆ ಬರಬೇಕು.

ಹೋಟೆಲ್‌ನ ಹೆಸರೇ ಹೇಳುವಂತೆ, ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಯುವಕರೊಬ್ಬರ ಹೋಟೆಲ್‌ ಇದು. ಹೆಸರು ಅನಿಕೇತ್ ಪಟೇಲ್. ಎಂಟೂವರೆ ವರ್ಷಗಳ ಹಿಂದೆ ನಗರಕ್ಕೆ ಬಂದು, ಹೋಟೆಲ್‌ ಒಂದರಲ್ಲಿ ಸಪ್ಲೈಯರ್ ಆಗಿದ್ದರು. ಎರಡು ತಿಂಗಳ ಹಿಂದೆ ಸ್ವಂತ ಹೋಟೆಲ್‌ ಪ್ರಾರಂಭಿಸಿದ್ದಾರೆ. ಅದು ಕೂಡ ಪ್ರಾರಂಭವಾದ ಕಡಿಮೆ ಅವಧಿಯಲ್ಲಿ ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿದೆ.

‘ಮಟನ್‌’ ಕೇಳುವವರೇ ಹೆಚ್ಚು:

ಇಲ್ಲಿ, ಮಾಂಸಾಹಾರದಲ್ಲಿ ಮಟನ್ ಬಿರಿಯಾನಿ ಹೆಚ್ಚು ಪ್ರಸಿದ್ಧ. ಊಟಕ್ಕೆ ಬರುವವರಲ್ಲಿ ಹೆಚ್ಚಿನವರು ಆರ್ಡರ್‌ ಮಾಡುವುದೇ ಇದನ್ನು. ಕಡಿಮೆ ಬೆಲೆಯಲ್ಲಿ ರುಚಿ, ಶುಚಿಯಾಗಿ ಬಿರಿಯಾನಿ ಸಿಗುವುದರಿಂದ ಹೆಚ್ಚಿನ ಗ್ರಾಹಕರು ಈ ಹೋಟೆಲ್‌ನತ್ತ ಬರುತ್ತಾರೆ.

ಇದರ ಜತೆಗೆ, ಚಿಕನ್ ದಮ್ ಬಿರಿಯಾನಿ, ಚಿಕನ್ ಹೈದರಾಬಾದಿ, ಚಿಕನ್ ಕೊಲ್ಹಾಪುರಿ, ಚಿಕನ್ ಕಡಾಯಿ, ಮಟನ್ ಮಖಾನ್ವಾಲಾ, ಮಟನ್ ಕೊಲ್ಹಾಪುರಿ, ಮಟನ್ ಹೈದರಾಬಾದಿ, ಮಟನ್ ಕಡಾಯಿ, ಚಿಕನ್ ಚಿಲ್ಲಿಯನ್ನು ಕೂಡ ಗ್ರಾಹಕರು ಇಲ್ಲಿ ಹೆಚ್ಚು ಖರೀದಿಸುತ್ತಾರೆ.

ಚೈನಿಸ್ ಫಾಸ್ಟ್‌ಫುಡ್‌ ಲಭ್ಯ

ಇಲ್ಲಿ ಚೈನಿಸ್ ಫಾಸ್ಟ್‌ಫುಡ್‌ಗಳು ಕೂಡ ಲಭ್ಯವಿದೆ. ಚಿಕನ್ ಫ್ರೈಡ್‌ರೈಸ್, ಎಗ್ ಫ್ರೈಡ್‌ರೈಸ್, ವೆಜ್ ಫ್ರೈಡ್‌ರೈಸ್, ಚಿಕನ್ ಶೀಜ್‌ವಾನ್ ರೈಸ್, ಟ್ರಿಪಲ್ ಫ್ರೈಡ್‌ರೈಸ್‌, ಚಿಕನ್ ಮಂಚೂವ್ ಸೂಪ್, ಚಿಕನ್ ಶೀಜ್‌ವಾನ್ ನೂಡಲ್ಸ್‌ ಹೋಟೆಲ್‌ನ ಮೆನುವಿನಲ್ಲಿದೆ.

ಸೆಳೆಯುವ ಬಣ್ಣಗಳ ಚಿತ್ತಾರ

ಇಲ್ಲಿನ ರುಚಿಗೆ ತಕ್ಕಂತೆ ಈ ಹೋಟೆಲ್‌ನ ಗೋಡೆಗಳನ್ನೂ ಅಚ್ಚುಕಟ್ಟಾಗಿ ಶೃಂಗರಿಸಲಾಗಿದೆ. ಒಳಗೋಡೆಯ ಮೇಲೆ ಬಳಿಯಲಾಗಿರುವ ‘ಸ್ಪ್ರೇ ಪೇಂಟಿಂಗ್ಸ್’ ಗ್ರಾಹಕರನ್ನು ಆಕರ್ಷಿಸುತ್ತಿವೆ. ಊಟ– ತಿಂಡಿಗೆ ಸಂಬಂಧಿಸಿದ ಬರಹಗಳನ್ನೂ ಇಲ್ಲಿ ಬರೆಯಲಾಗಿದೆ. ಕೆಲವು ಗ್ರಾಹಕರು ಈ ಬಣ್ಣಗಳ ಚಿತ್ತಾರಕ್ಕೇ ಹೋಟೆಲ್‌ನತ್ತ ಎಡತಾಕುವುದೂ ಇದೆ. ಇದರ ಜತೆಗೆ, ಸಂಗೀತ ಗ್ರಾಹಕರ ಮನಸ್ಸಿಗೆ ಮುದ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT