ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರತೆ ಚರ್ಮ ಸಾಗಿಸುತ್ತಿದ್ದವನ ಬಂಧನ

Last Updated 16 ಮಾರ್ಚ್ 2020, 14:45 IST
ಅಕ್ಷರ ಗಾತ್ರ

ಕಾರವಾರ:ಚಿರತೆ ಚರ್ಮವನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ಆರೋಪಿಯನ್ನುಸಿ.ಇ.ಎನ್ ಠಾಣೆ ಪೊಲೀಸರು ಭಟ್ಕಳ ತಾಲ್ಲೂಕಿನಕಟಗಾರಕೊಪ್ಪಾದ ಕಬ್ರೆಯಲ್ಲಿ ಸೋಮವಾರ ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರು ₹ 15 ಲಕ್ಷ ಮೌಲ್ಯದ ಚಿರತೆ ಚರ್ಮ ವಶಪಡಿಸಿಕೊಂಡಿದ್ದಾರೆ.

ಸ್ಥಳೀಯ ನಿವಾಸಿಬೈರಾ ರಾಮಾ ಗೊಂಡಾ ಬಂಧಿತ ಆರೋಪಿಯಾಗಿದ್ದು, ಚಿರತೆ ಚರ್ಮವನ್ನುಚಿತ್ರಾಪುರ– ಶಿರಾಲಿ ಕಡೆಗೆ ಬೈಕ್‌ನಲ್ಲಿ ಸಾಗಿಸುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಸಿ.ಇ.ಎನ್ ಠಾಣೆ ಪೊಲೀಸರು, ಭಟ್ಕಳಕ್ಕೆ ತೆರಳಿ ಕಾರ್ಯಾಚರಣೆ ಮಾಡಿದರು.

ಅರಣ್ಯ ಇಲಾಖೆ ಸಿಬ್ಬಂದಿಯೂ ಈ ಕಾರ್ಯಾಚರಣೆಗೆ ಸಹಕಾರ ನೀಡಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.ಈ ಜಾಲದಲ್ಲಿ ಇನ್ನೆಷ್ಟು ಮಂದಿ ಸೇರಿಕೊಂಡಿದ್ದಾರೆ, ವನ್ಯ ಜೀವಿಯ ಚರ್ಮವನ್ನು ಎಲ್ಲಿಂದ ಪಡೆದುಕೊಂಡಿದ್ದ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್ ಸುದರ್ಶನ ನಾಯ್ಕ, ಸಿಬ್ಬಂದಿ ನಾಗರಾಜ ನಾಯ್ಕ, ಉಮೇಶ ನಾಯ್ಕ, ಮಂಜುನಾಥ ಹೆಗಡೆ, ಭಟ್ಕಳ ಎ.ಸಿ.ಎಫ್ ಸುದರ್ಶನ ಜಿ.ಕೆ, ಅರಣ್ಯ ಇಲಾಖೆಯ ಸಿಬ್ಬಂದಿಬಿ.ಪ್ರಮೋದ, ಮಧುಕರ ವಿ ನಾಯ್ಕ, ಕಾಡಪ್ಪ ಗೊಲಬಾವಿ, ಸಣ್ಣಯ್ಯ ಗೊಂಡಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT