ಬುಧವಾರ, ಆಗಸ್ಟ್ 12, 2020
27 °C

ನಾಟಕ ಕಂಪನಿಗೆ ಮಾನವೀಯ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಮಾರಿಕಾಂಬಾ ಜಾತ್ರೆಯ ವೇಳೆ ನಾಟಕ ಪ್ರದರ್ಶನಕ್ಕೆ ಬಂದು, ಕೋವಿಡ್ 19 ಕಾರಣದಿಂದ ಊರಿಗೆ ಹೋಗಲು ಸಾಧ್ಯವಾಗದೇ, ಆರ್ಥಿಕ ತೊಂದರೆಗೆ ಸಿಲುಕಿರುವ ನಾಟಕ ಕಂಪನಿಗಳಿಗೆ ಇಲ್ಲಿನ ಲಯನ್ಸ್ ಕ್ಲಬ್ ಮಾನವೀಯ ನೆರವು ನೀಡಿದೆ.

ಕೆ.ಬಿ.ಆರ್.ನಾಟ್ಯ ಸಂಘ, ಜೇವರ್ಗಿ ನಾಟ್ಯ ಸಂಘ, ಕಲ್ಲೂರ ನಾಟ್ಯ ಸಂಘ, ಮುಂಡಲಗಿ ನಾಟ್ಯ ಸಂಘದ ಕಲಾವಿದರು, ಪ್ರಮುಖರಿಗೆ ದಿನಸಿ, ಆಹಾರದ ಕಿಟ್‌ಗಳನ್ನು ಲಯನ್ಸ್ ಸದಸ್ಯರು ವಿತರಿಸಿದರು. ಲಯನ್ಸ್ ಅಧ್ಯಕ್ಷ ಕೆ.ಬಿ.ಲೋಕೇಶ ಹೆಗಡೆ, ಕಾರ್ಯದರ್ಶಿ ಅಶ್ವತ್ಥ ಹೆಗಡೆ, ಕೋಶಾಧ್ಯಕ್ಷ ಅಶೋಕ ಹೆಗಡೆ, ಶ್ಯಾಮಸುಂದರ ಭಟ್ಟ, ಗುರುರಾಜ ಹೊನ್ನಾವರ, ಜ್ಯೋತಿ ಭಟ್ಟ, ಬಾಬುಲಾಲ್ ಚೌಧರಿ, ವಿಶ್ವ ಹೆಗಡೆ ಇದ್ದರು.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.