ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಪುಟ ಸೇರುವ ‘ಲಂಡನ್ ಬ್ರಿಜ್’

ಕಾರವಾರದ ಹೆಗ್ಗುರುತುಗಳಲ್ಲಿ ಒಂದಾದ ಪುರಾತನ ಸೇತುವೆ ತೆರವು
Last Updated 17 ಫೆಬ್ರುವರಿ 2021, 16:05 IST
ಅಕ್ಷರ ಗಾತ್ರ

ಕಾರವಾರ: ಆ ಸೇತುವೆಯು ತನ್ನ ಹೆಸರಿನಿಂದಲೇ ಗಮನ ಸೆಳೆಯುತ್ತಿತ್ತು. ಒಂದು ನಾಲೆಗೆ ಬ್ರಿಟಿಷರು ನಿರ್ಮಿಸಿದ್ದಾದರೂ ಅದಕ್ಕೆ ಅವರ ರಾಜಧಾನಿಯ ಹೆಸರು ತಳಕು ಹಾಕಿಕೊಂಡಿತ್ತು. ಅದಿನ್ನು ಒಂದೆರಡು ದಿನಗಳಲ್ಲಿ ಇತಿಹಾಸದ ಪುಟ ಸೇರಲಿದೆ.

ಹೌದು, ನಗರದ ಕೋಣೆನಾಲಾಕ್ಕೆ ಅಡ್ಡಲಾಗಿ ಕಟ್ಟಿದ ‘ಲಂಡನ್ ಬ್ರಿಜ್’ ಅನ್ನು ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಗಾಗಿ ತೆರವು ಮಾಡಲಾಗುತ್ತಿದೆ.

1857ರ ನಂತರ ಕಾರವಾರದ ಕೋಣೆ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯ ಆರಂಭಿಸಿದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು, ನಗರವನ್ನೇ ಸ್ಥಾಪಿಸಿತು. ಈ ಪ್ರದೇಶದಲ್ಲಿ 1864ರಲ್ಲಿ ಕಲ್ಲಿನ ಕಟ್ಟಡವೊಂದನ್ನು ತನ್ನ ಕಾರ್ಯಗಳಿಗಾಗಿ ಕಂಪನಿಯು ನಿರ್ಮಿಸಿತ್ತು ಎಂದು ಇತಿಹಾಸ ಹೇಳುತ್ತದೆ. ಅದೇ ಕಟ್ಟಡವು ಕೆಲವು ವರ್ಷಗಳ ಹಿಂದಿನವರೆಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಾಗಿತ್ತು. ಬಹುಶಃ ಆ ದಿನಗಳಲ್ಲಿ ಕಾರವಾರದ ನೈಸರ್ಗಿಕ ಬಂದರು (ಬೈತಖೋಲ್) ಮತ್ತು ವಾಣಿಜ್ಯ ಪ್ರದೇಶವಾಗಿದ್ದ ಕಾರವಾರದ ನಡುವೆ ಸಂಪರ್ಕ ಕಲ್ಪಿಸಲು ಈ ಸೇತುವೆ ನಿರ್ಮಿಸಿರಬಹುದು ಎನ್ನುವುದು ಹಿರಿಯ ನಾಗರಿಕರ ಅನಿಸಿಕೆಯಾಗಿದೆ.

ಸೇತುವೆಯು ನಿರ್ದಿಷ್ಟವಾಗಿ ಯಾವಾಗ ನಿರ್ಮಾಣವಾಯಿತು, ‘ಲಂಡನ್ ಬ್ರಿಜ್’ ಹೆಸರು ಹೇಗೆ ಬಂತು ಎಂಬುದರ ಬಗ್ಗೆಯೂ ಸ್ಪಷ್ಟವಾದ ಮಾಹಿತಿಯಿಲ್ಲ. ಲಂಡನ್‌ನಲ್ಲಿರುವ ವಿಶ್ವಪ್ರಸಿದ್ಧ ಸೇತುವೆಯ ವಿನ್ಯಾಸದಲ್ಲೇ ಇದನ್ನೂ ನಿರ್ಮಿಸಲಾಗಿತ್ತು ಎಂಬುದು ಒಂದು ವಾದವಾದರೆ, ಲಂಡನ್‌ನಿಂದ ಬಂದ ಮಂದಿ (ಬ್ರಿಟಿಷರು) ನಿರ್ಮಿಸಿದ್ದ ಕಾರಣ ಅದೇ ಹೆಸರು ಪ್ರಚಲಿತವಾಯಿತು ಎಂಬುದು ಮತ್ತೊಂದು ವಾದವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT